ರಾಯಚೂರು ಫೆಬ್ರವರಿ 27 (ಕರ್ನಾಟಕ ವಾರ್ತೆ): ಕಾರ್ಮಿಕ ಇಲಾಖೆಯ ವತಿಯಿಂದ ವಿವಿಧ ಕಂಪನಿಗಳು, ಕೈಗಾರಿಕೆಗಳು ಹಾಗೂ ಇತರೇ ವಾಣಿಜ್ಯ ಸಂಸ್ಥೆಗಳ ಪ್ರಾಯೋಜಕತ್ವದ ಮತ್ತು ಸಹಯೊಗದೊಂದಿಗೆ ಕಾರ್ಮಿಕ ಸಚಿವರು ಸಂತೋಷ ಲಾಡ್ ಅವರು ಫೆ.27ರಂದು ರಾಜ್ಯದಾದ್ಯಂತ ಅರ್ಹ ವಿಕಲಚೇತನರಿಗೆ ಮೋಟಾರ್ ಸಹಿತ ತ್ರಿಚಕ್ರ ವಾಹನಗಳನ್ನು ವಿತರಿಸಲು ಕಾರ್ಯಕ್ರಮದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ರಾಯಚೂರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರಾಯಚೂರು ಇವರ ವತಿಯಿಂದ ಕು||ಮಾರೆಮ್ಮ ತಂದೆ ಮಾರೆಪ್ಪ ಇವರಿಗೆ ತ್ರಿಚಕ್ರ ವಾಹನವನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ, ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ಆರತಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ, ರಾಯಚೂರಿನ 1 ಹಾಗೂ 2ನೇ ಕಾರ್ಮಿಕ ನಿರೀಕ್ಷಕರಾದ ಕುಮಾರಿ ಪ್ರಿಯಾಂಕ, ಮೆ|| ಪವರ್‌ಮೆಕ್ ಪ್ರಾಜೆಕ್ಟ್ ಲಿಮಿಟೆಡಿನ ಹೆಚ್.ಆರ್. ಮನೋಜ ಸೇರಿದಂತೆ ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *