ಫೆ.26 ರಿಂದ 28ರವರೆಗೆ ಮಂಗಳೂರು ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳೆಯರು ಗುಡ್ಡ-ಗಾಡು ಓಟ ಕ್ರೀಡಾಕೂಟಕ್ಕೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾದ ಸಿಂಧನೂರು ನಗರದ ಸರ್ಕಾರಿ ಮಹಾವಿದ್ಯಾಲಯದ ಬಿಎ 6ನೇ ಸೆಮಿಸ್ಟರ್
ವಿದ್ಯಾರ್ಥಿನಿ ಕು.ಪಾರ್ವತಿ ತಂದೆ ತಿಮ್ಮಯ್ಯ ಅವರು
ಆಯ್ಕೆಯಾಗಿದ್ದಾರೆ.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿ, ಡಿಗ್ರಿ ಕಾಲೇಜಿಗೂ ಹಾಗೂ ತಾಲೂಕಿಗೂ ಕೀರ್ತಿ ತಂದಿದ್ದಾರೆ. ಇವರಿಗೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಹಾಗೂ ಪ್ರಾಚಾರ್ಯರು, ಭೋದಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ ಬಳಗದವರು ಹೃದಯಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ: ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಾಂಡು, ಹಿರಿಯ ಪ್ರಾಧ್ಯಾಪಕರಾದ ಪ್ರೊ.ಪುಷ್ಪ, ಪತ್ರಾಂಕಿತ ವ್ಯವಸ್ಥಾಪಕರಾದ ಮೊಹಮ್ಮದ್ ಸಿದ್ದಿಕಿ, ಸಹಾಯಕ ಪ್ರಾಧ್ಯಾಪಕರಾದ ದಿವ್ಯ ಉಪನ್ಯಾಸಕರಾದ ರಾಜೇಶ ಎಂ, ದೈಹಿಕ ಶಿಕ್ಷಣ ವಿಭಾಗದ ಸಂಯೋಜಕ ಡಾಲವಕುಮಾರ, ದೈಹಿಕ ಶಿಕ್ಷಣ ನಿರ್ದೇಶಕ ಶಿವ.ಕೆ, ಇದ್ದರು.

Leave a Reply

Your email address will not be published. Required fields are marked *