ಮಸ್ಕಿ ಇತ್ತೀಚಿನ
ದಿನಮಾನಗಳಲ್ಲಿ ಆಧುನಿಕ ತಂತ್ರಜ್ಞಾನ, ಮೊಬೈಲು, ಡಿಜಿಟಲ್ ಭರಾಟೆಯಲ್ಲಿ ನಮ್ಮ ಗ್ರಾಮೀಣ ಭಾಗದ ಹಲವಾರು ಕ್ರೀಡೆ, ಜಾನಪದ, ಹಳ್ಳಿ ಸೊಗಡು ಎಲ್ಲವೂ ಮಾಯವಾಗುತ್ತಿದ್ದು, ಆದರೆ ಇಂತಹ ಸಮಯದಲ್ಲೂ ಮಸ್ಕಿ ತಾಲೂಕಿನ ಹಾಲಾಪೂರ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರೆ ಅಂಗವಾಗಿ ಹಳ್ಳಿ ಸೊಗಡಿನ, ಗ್ರಾಮೀಣ ಪ್ರತಿಭೆಗಳ ಅನಾವರಣಗೊಳ್ಳುವ ಎತ್ತುಗಳಿಂದ ಕಲ್ಲು ಎಳೆಯುವ ಸ್ಪರ್ಧೆ ನೋಡುಗರ ಕಣ್ಣು ಮನಸ್ಸು ಬಹಳಷ್ಟು ಆನಂದ ಮಾಯವಾಗಿತ್ತು, ಗ್ರಾಮದ ಗೆಳೆಯರ ಬಳಗದಿಂದ 20,000 ರೂಪಾಯಿ ಸಂಗ್ರಹಿಸಿ 11 ಕ್ವಿಂಟಲ್ 40 ಕೆಜಿ ತೂಕದ ಕಲ್ಲನ್ನ ಖರೀದಿಸಿ ಇಂದು ಶ್ರೀ ಬಸವೇಶ್ವರ ಜಾತ್ರೆಯಲ್ಲಿ ಸಾಂಕೇತಿಕವಾಗಿ ಹನುಮಂತ ರಾಮಲದಿನ್ನಿ ಹಾಲಾಪೂರ ಎನ್ನುವ ರೈತನ ಜೋಡೆತ್ತುಗಳಿಂದ ಪೂಜೆ ಮಾಡಿಸುವ ಮೂಲಕ ಜಾತ್ರೆ ವಿಶೇಷವಾಗಿ ದೇವಸ್ಥಾನದ ಆವರಣದಲ್ಲಿ ನೂರಾರು ಜನರ ಮಧ್ಯೆ ಹನುಮಂತ ರಾಮಲದಿನಿ ಅವರ ಎತ್ತುಗಳು ಬಹಳಷ್ಟು ಸರಾಗವಾಗಿ 11 ಕ್ವಿಂಟಲ್ 40 ಕೆಜಿ ತೂಕದ ಭಾರವಾದ ಕಲ್ಲನ್ನ ಎಳೆಯುವ ಮೂಲಕ ನೆರೆದ ಜನರಿಂದ ಚಪ್ಪಾಳೆ, ಶಭಾಷ್ ಗಿಟ್ಟಿಸಿಕೊಂಡು ಜನರಿಂದ ಪ್ರೀತಿ ಮೆಚ್ಚುಗೆಗೆ ಪಾತ್ರರಾದರು, ಈ ಸಂದರ್ಭದಲ್ಲಿ ಪೂಜ್ಯರು, ಮುಖಂಡರು, ಗ್ರಾಮಸ್ಥರು ಇದ್ದರು.

