ಸಿಂಧನೂರು ನಗರದ PWD ಕ್ಯಾಂಪ್ ನ ಅಮರ ಶ್ರೀ ಆಲದ ಮರದ ಹತ್ತಿರ ವನಸಿರಿ ಪೌಂಡೇಷನ್(ರಿ).ರಾಜ್ಯ ಘಟಕ ರಾಯಚೂರು ಹಾಗೂ ಶಾರದಾ ಮಹಿಳಾ ಪದವಿ ಮಹಾವಿದ್ಯಾಲಯ NSS ಘಟಕದ ಸಹಯೋಗದಲ್ಲಿ ಪ್ರಾಣಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಮತ್ತು ಸಾಲುಮರದ ತಿಮ್ಮಕ್ಕನ ವೇಷದಾರಿಯಾದ ಸಿಂಧನೂರಿನ ಶಾರದಾ ಮಹಿಳಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಲಕ್ಷ್ಮಿ ಅವರು ಮಣ್ಣಿನ ಮಡಿಕೆಗಳನ್ನು ಗಿಡಗಳಿಗೆ ಕಟ್ಟಿ ಕಾಳು, ನೀರು ಹಾಕಿ ಪ್ರಾಣಿ ಪಕ್ಷಿಗಳಿಗೆ ಗುಟುಕು ನೀರಿನ ಅಭಿಯಾನ ಕಾರ್ಯವನ್ನು ಉದ್ಘಾಟಿಸಿದರು.ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಪ್ರಕೃತಿಯನ್ನು ನಾವು ಕಾಪಾಡಿದರೆ ಪ್ರಕೃತಿ ನಮ್ಮನ್ನು ಕಾಪಾಡುತ್ತದೆ. ಮನುಷ್ಯರಾದ ನಾವುಗಳು ಈ ಪ್ರಕೃತಿಯಲ್ಲಿ ಹಲವಾರು ಪ್ರಾಣಿ ಪಕ್ಷಿಗಳಿವೆ ಅವುಗಳಿಗೆಲ್ಲ ಮಾತುಗರಿಕೆ ಇಲ್ಲ.ಅವುಗಳ ರಕ್ಷಣೆಗಾಗಿ ಪ್ರತಿವರ್ಷ ವನಸಿರಿ ಪೌಂಡೇಷನ್ ವತಿಯಿಂದ ಮೂಕ ಪ್ರಾಣಿ ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರಿನ ಅರವಟ್ಟಿಗೆ ನಿರ್ಮಿಸಿ ಕಾಳು ನೀರು ಹಾಕುವ ಕಾರ್ಯದಲ್ಲಿ ತೊಡಗಿದ್ದೇವೆ ಇದನ್ನು ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಆರಂಭಿಸುತ್ತೇವೆ. ಪ್ರತಿಯೊಬ್ಬರೂ ಬೇಸಿಗೆಯಲ್ಲಿ ತಮ್ಮ ಮನೆ,ಶಾಲೆಯ,ದೇವಸ್ಥಾನಗಳಲ್ಲಿನ ಗಿಡಗಳಿಗೆ ನೀರಿನ ಅರವಟ್ಟಿಗೆ ಕಟ್ಟಿ, ಪ್ರಾಣಿ ಪಕ್ಷಿಗಳಿಗೆ ನೀರು ಹಾಗೂ ಕಾಳು ಇರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ವನಸಿರಿ ತಂಡದ ಸದಸ್ಯರು, ಮಹಾವಿದ್ಯಾಲಯದ ವಿದ್ಯಾರ್ಥಿಗಳು,ಶಿಕ್ಷಕರು ನಗರದ ಪ್ರಮುಖ ಬೀದಿಗಳಲ್ಲಿ ಪರಿಸರ ಜಾಗೃತಿ ಘೋಷಣೆಗಳನ್ನು ಕೂಗುತ್ತಾ ಪರಿಸರ ಜಾಥ ಮೂಲಕ ಸಾರ್ವಜನಿಕರಿಗೆ ಪರಿಸರದ ಮಹತ್ವದ ಅರಿವನ್ನು ಮೂಡಿಸಲಾಯಿತು.ನಂತರ ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಟಿಬಿಪಿ ಶಾಲೆ ಆವರಣದಲ್ಲಿ ಸಸಿ ನೆಡಲಾಯಿತು.
ಈ ಸಂದರ್ಭದಲ್ಲಿ ಶಾರದಾ ಮಹಿಳಾ ಪಧವಿ ಮಹಾವಿದ್ಯಾಲಯ ಸಿಂಧನೂರು ಶೈಕ್ಷಣಿಕ 2025-26 ನೇ ಸಾಲಿನ ಎನ್ಎಸ್ಎಸ್ ವಿಶೇಷ ಶಿಬಿರವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಬಸವರಾಜ ಬಾದರ್ಲಿ,ರಾಜು ಪತ್ತಾರ ಮಸ್ಕಿ ತಾಲೂಕ ಅಧ್ಯಕ್ಷರು ವನಸಿರಿ ಫೌಂಡೇಶನ್ ಹಾಗೂ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ಕರಬಸಣ್ಣ ಹಾಗೂ ದೊಡ್ಡ ಬಸವ ಹಿರೇಮಠ ಹಾಗೂ ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಹಾಗೂ NSS ಶಿಬಿರಾರ್ಥಿಗಳು ಭಾಗಿಯಾಗಿದ್ದರು.


