ರಾಯಚೂರು,ಫೆ: 06, ಪೌಷ್ಟಿಕ ಆಹಾರ ಸೇವನೆಯಿಂದ ದೇಹದ ಬೆಳವಣಿಗೆ ಮಾತ್ರವಲ್ಲದೆ ರೋಗನಿರೋಧಕ ಶಕ್ತಿಯ ವರ್ಧನೆಯಿಂದ ರೋಗರುಜಿನಗಳು ದೂರವಾಗುವವು, ಈ ದಿಶೆಯಲ್ಲಿ ಪಾಲಕರು ಸಹ ಮನೆಯ ಆಹಾರ ಪದ್ದತಿಯಲ್ಲಿ ಎಲ್ಲ ಬಗೆಯ ತರಕಾರಿ, ಹಸಿರು ತಪ್ಪಲುಗಳು, ಮುಂತಾದವುಗಳ ಬಳಕೆಗೆ ಮಹತ್ವ ನೀಡಬೇಕು ಜಿಲ್ಲಾ ಐಇಸಿ ತಂಡದ ಮೂಲಕ ಆರೋಗ್ಯ ಶಿಕ್ಷಣವನ್ನು ಶಾಲಾ ಮಕ್ಕಳಿಗೆ ನೀಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ರಾಗಮಾನಗಡ್ಡಾ ಇವರ ಆಶ್ರಯದಲ್ಲಿ ನಗರದ ಅಭಿಜ್ಞಾನ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಮಾತನಾಡಿ, ಪೌಷ್ಟಿಕ ಆಹಾರ ಸೇವನೆಯಿಂದ ರಕ್ತಹೀನತೆ ಹೋಗಲಾಡಿಸಲು ಸಹಕಾರಿ, ಇದಕ್ಕಾಗಿ, ಬಾಲ್ಯದಲ್ಲಿಯೇ ಕಾಲಕಾಲಕ್ಕೆ ಚುಚ್ಚುಮದ್ದುಗಳು, ಕಬ್ಬಿಣಾಂಶ ಮಾತ್ರೆಗಳ ಸೇವನೆ, ಪ್ರತಿ ಆರು ತಿಂಗಳಿಗೊಮ್ಮೆ ಜಂತುಹುಳ ನಿವಾರಕ ಮಾತ್ರೆ ಸೇವನೆಗೆ ಒತ್ತು ನೀಡಲು, ವೈಯಕ್ತಿಕ ಶುಚಿತ್ವಕ್ಕಾಗಿ ಊಟದ ಮೊದಲು ಶೌಚದ ನಂತರ ಸಾಬೂನು ಮತ್ತು ನೀರಿನಿಂದ ಕೈ ತೊಳೆಯಬೇಕು ಎಂದು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಪ್ರತ್ಯೇಕವಾಗಿ ವಿದ್ಯಾರ್ಥಿನಿಯರಿಗೆ ಋತುಚಕ್ರದ ನಿರ್ವಹಣೆ, ಶುಚಿತ್ವ ಕಾಪಾಡುವಿಕೆ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಸಮಿತಿ ಅಧ್ಯಕ್ಷರಾದ
ರಮೇಶ್ ಕನಕುಂಟ್ಲಾ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ,
ಮುಖ್ಯ ಗುರುಗಳು
ಸವಿತಾ ಭಂಡಾರಿ, ನಿರ್ಮಲಾ ಹಿರೇಮಠ
ಶರಣ ಬಸವೇಶ್ವರಿ
ಸೌಜನ್ಯ,
ಆರೋಗ್ಯ ನಿರೀಕ್ಷಣಾಧಿಕಾರಿ ಅರುಣ್ ಕುಮಾರ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಅನ್ನಪೂರ್ಣ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು

