ಮಸ್ಕಿ ತಾಲೂಕಿನ ಹಾಲಾಪೂರ ಗ್ರಾಮದಲ್ಲಿ ಇಂದು ಶ್ರೀ ಬಸವೇಶ್ವರ ಜಾತ್ರೆ ಜರುಗುತ್ತದೆ ಎಂದು ದೇವಸ್ಥಾನದ ಅರ್ಚಕರಾದ ಶ್ರೀ ಚೆನ್ನಯ್ಯ ತಾತನವರು ಪತ್ರಿಕೆಗೆ ತಿಳಿಸಿದರು. ಬೆಳಗ್ಗೆ ರುದ್ರಾಭಿಷೇಕ , ಪೂಜೆ, ಹೂವಿನ ಅಲಂಕಾರ, ಸರ್ವ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಹಾಗೂ ಸಂಜೆ ಡೊಳ್ಳು, ಭಜನೆ, ಕಳಸದೊಂದಿಗೆ ಗಂಗಸ್ಥಳಕ್ಕೆ ಪೂಜೆ ನೆರವೇರಿಸಿ ನಂತರ ಉಚ್ಚಯ ಕಾರ್ಯಕ್ರಮ ಬಹು ವಿಜೃಂಭಣೆಯಿಂದ ನಡೆಯುತ್ತದೆ ಎಂದು ಅರ್ಚಕರಾದ ಶ್ರೀ ಚೆನ್ನಯ್ಯ ತಾತ ತಿಳಿಸಿದರು. ರಾತ್ರಿ 10 ಗಂಟೆಗೆ ಶ್ರೀ ಗುರು ಕರಿಯಪ್ಪ ತಾತ ನವ ತರುಣ ನಾಟ್ಯ ಸಂಘ ಇವರು, ಗೌಡ್ರು ಗದ್ಲ ಖ್ಯಾತಿಯ ದಿವಂಗತ ರಾಮರಾವ್ ದೇಸಾಯಿ ಮಿತ್ರ ಮಂಡಳಿ ಅರ್ಪಿಸುವ, ಡಿ ಆರ್ ಪೂಜಾರ ವಿರಚಿತ “ಸಿಡಿದೆದ್ದ ಶಿವ ಶಕ್ತಿ” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ನಡೆಯುವುದು.

