ಸಿಂಧನೂರು : ನಗರದ ಸತ್ಯ ಗಾರ್ಡನ್ನಲ್ಲಿ ನಡೆದ ಎಲ್ ಬಿ ಕೆ ಮತ್ತು ನೊಬಲ್ ಪದವಿ ಮಹಾವಿದ್ಯಾಲಯದಿಂದ, ದ್ವಿತೀಯ ಪಿಯುಸಿ ಮತ್ತು ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಶ್ರೀ ಶೇಖರಯ್ಯ ಪ್ರಾಚಾರ್ಯರು ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಸಿಂಧನೂರು ,ಇವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ವಿದ್ಯಾರ್ಥಿಯ ಜೀವನದಲ್ಲಿ ಪರೀಕ್ಷೆಯು ಸಂಕ್ರಮಣ ಇದ್ದಹಾಗೆ ಸೂರ್ಯ ತನ ದಿಕ್ಕನ್ನು ಬದಲಾಯಿಸುವ ಹಾಗೆ ವಿದ್ಯಾರ್ಥಿಯು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಪರೀಕ್ಷೆಯ ಫಲಿತಾಂಶ ಮಹತ್ವವಾದದ್ದು . ಕಾಲೇಜಿನಲ್ಲಿ ಪಡೆದ ಶಿಕ್ಷಣ ಬದುಕನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ನಿಮ್ಮ ಜೀವನವನ್ನು ರೂಪಿಸುವುದು ಶಿಕ್ಷಣದಿಂದ ಮಾತ್ರ .ವಿದ್ಯಾರ್ಥಿಗಳ ಸಾಧನೆ ಕುಟುಂಬದವರಿಗೂ, ಕಾಲೇಜಿಗೂ ಹೆಸರನ್ನು ಕೀರ್ತಿಯನ್ನು ತರುತ್ತದೆ.ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣಗೊಳ್ಳಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು. ಹಾಗೆಯೇ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖವಾದದ್ದು ಸಂಸ್ಥೆಗಳು ಉಪನ್ಯಾಸಕರಿಗೆ ಜೀವನವನ್ನು ನೀಡುತ್ತದೆ .ಇದೇ ರೀತಿಯಾಗಿ ಶಿಕ್ಷಣ ಸಂಸ್ಥೆಗಳು ಜೀವನವನ್ನು ರೂಪಿಸುವ ಕೆಲಸವನ್ನು ಮಾಡಲಿ ಎಂದು ತಿಳಿಸಿದರು.

ಶ್ರೀಮತಿ ಗಿರಿಜಾ ಮುಖ್ಯ ಗುರುಗಳು ಸರಕಾರಿ ಪ್ರೌಢಶಾಲೆ ಪಗಡದಿನ್ನಿ ಇವರು ಮಾತನಾಡುತ್ತಾ,
ವಿದ್ಯಾರ್ಥಿ ಜೀವನ ಬಂಗಾರದ ಬದುಕಿದ್ದ ಹಾಗೆ ಇರುವ ಕ್ಷಣವನು ಆನಂದಿಸಿ ,ನೆನಪುಗಳನ್ನು ಕಲೆ ಹಾಕಿಕೊಳ್ಳುವಂತಹ ಒಂದು ಸುಂದರವಾದ ವೇದಿಕೆಯಾಗಿದೆ. ಪದವಿ ಮುಗಿದ ನಂತರ ವಿದ್ಯಾರ್ಥಿಗಳಿಗೆ ಮುಂದೆ ಏನು ?ಎನ್ನುವಂತಹ ಪ್ರಶ್ನೆಗಳು ಬರುತ್ತವೆ. ಶಿಕ್ಷಕರಿಗೆ ನಿಮ್ಮ ಶಿಕ್ಷಣ ಸಂಸ್ಥೆಗಳಿಗೆ ನೀವು ಕೊಡುವ ಕೊಡುಗೆ ಎಂದರೆ ನಿಮ್ಮ ಶೈಕ್ಷಣಿಕ ಸಾಧನೆ ಮಾತ್ರ. ನಿಮ್ಮ ಜವಾಬ್ದಾರಿಯನ್ನು ತಿಳಿದುಕೊಂಡು ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಪಾಲನ್ನು ನೀಡಬೇಕು .ವಿಶ್ವಕ್ಕೆ ಜ್ಯೋತಿ ಆಗಿರುವ ಬಸವ ಚಾರಿ ಟೇಬಲ್ ಟ್ರಸ್ಟ್ ನಲ್ಲಿ ಕಲಿತಿದ್ದೀರ ಅಂದರೆ ನಿಮ್ಮೆಲ್ಲರಿಗೂ ಸರಿಯಾದ ಸಂಸ್ಕಾರವನ್ನು ಕಲಿಸುತ್ತದೆ .ಸಂಸ್ಕಾರವನ್ನು ಪಡೆದುಕೊಂಡು ಸಮಾಜಕ್ಕೆ ಮಾದರಿಯಾಗಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಯಚೂರಿನ ಡಯಟ್ ಯರಮರಸ್ ನ ಉಪನ್ಯಾಸಕರಾದ ಕನಕಪ್ಪ ಚಿಕ್ಕಬೇರ್ಗಿ ಅವರು ಮಾತನಾಡಿ ,ನಮಗೆ ಧೈರ್ಯವಾಗಿ ಒಂದು ವೇದಿಕೆಯ ಮೇಲೆ ಮೊದಲು ಮಾತನಾಡಲು ಎಲ್ಲಿಯೂ ಅವಕಾಶ ಸಿಕ್ಕಿದ್ದಿಲ್ಲ, ಅಂತಹ ಅವಕಾಶ ನಿಮಗೆ ದೊರೆತಿದೆ. ಮನೆ ಪರಿಸ್ಥಿತಿಯನ್ನು ಅರಿತುಕೊಂಡು ಗುರಿಯನ್ನು ಮುಟ್ಟುವುದರಲ್ಲಿ ಯಶಸ್ಸನ್ನು ಪಡೆಯಬೇಕು ಇಂದಿನ ವಿಜ್ಞಾನ ಮತ್ತುತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ನಿಮ್ಮ ಗುರಿಯನ್ನು ಮುಟ್ಟಿ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು. ಅದೇ ರೀತಿಯಾಗಿ ವೀರೇಶ ಹೂಗಾರ, ನಾಗಭೂಷಣ ನವಲಿ , ಅವರು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ನುಡಿದರು.

ಅಂತಿಮ ವರ್ಷದ ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಳೆದ ಕ್ಷಣಗಳು, ಆಟ ಪಾಠಗಳು, ಸ್ನೇಹಿತರು ಹಾಗೂ ಉಪನ್ಯಾಸಕರ ಕುರಿತು ಬಸವರಾಜೇಶ್ವರಿ ಅಕ್ಕಮಹಾದೇವಿ ಕೀರ್ತಿ ಸಂಗೀತ ವಿಶ್ವ ವೀರೇಶ ಬಸಮ್ಮ ಇನ್ನಿತರ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ನೊಬಲ್ ಪದವಿ ಮಹಾವಿದ್ಯಾಲಯದಲ್ಲಿ “ಇತಿಹಾಸ ಸಾಮ್ರಾಜ್ಯಗಳ ದರ್ಶನ “ಎನ್ನುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಅದರ ಫಲಿತಾಂಶವನ್ನು ಈ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಯಿತು ಮೊದಲನೇ ಬಹುಮಾನ ನಟರಾಜ ತಂಡ ,ಎರಡನೆಯ ಬಹುಮಾನ ಶಿವಾಜಿ ಛತ್ರಪತಿ ತಂಡ ,ಮೂರನೇ ಬಹುಮಾನ ಸುವರ್ಣ ಯುಗ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ನೊಬೆಲ್ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಐಶ್ವರ್ಯ ದಳವಾಯಿ ಹಾಗೂ ಇತಿಹಾಸ ಉಪನ್ಯಾಸಕರಾದ ಶ್ರೀ ಪಂಚಾಕ್ಷರಿ ಮತ್ತು ಶ್ರೀ ಮೌಲ ಸಾಬ ಅವರಿಗೆ ಸನ್ಮಾನವನ್ನು ಮಾಡಲಾಯಿತು.
ಹಾಗೆ ಕ್ರೀಡೆಯಲ್ಲಿ ಪಾಲ್ಗೊಂಡು ಬಹುಮಾನವನ್ನು ಪಡೆದುಕೊಂಡಂತಹ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶರಣಪ್ಪ ತೆಂಗಿನಕಾಯಿ ಬಸವ ಚಾರಿಟೇಬಲ್ ಟ್ರಸ್ಟ್ ರವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀ ಪರಶುರಾಮ್ ಮಲ್ಲಾಪುರ ಅವರು ಪ್ರಾಸ್ತಾವಿಕ ನುಡಿಗಳನ್ನು ಹಾಡಿದರು. ಕಾಲೇಜಿನ ಕಾರ್ಯದರ್ಶಿಗಳಾದ ಡಾ. ಅರುಣಕುಮಾರ ಬೆರಗಿ ,ಉಪಾಧ್ಯಕ್ಷರಾದ ಶಂಕರಪ್ಪ ಪತ್ತಾರ ,ಖಜಾಂಚಿಗಳಾದ ಜಯಪ್ಪ ಗೊರಬಾಳ ,ಪ್ರಾಂಶುಪಾಲರಾದ ಐಶ್ವರ್ಯ ದಳವಾಯಿ, ಪ್ರಾಚಾರ್ಯರಾದ ಶಿವಕುಮಾರ ಬಿಂಗಿ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ,ಸಿಬ್ಬಂದಿ ವರ್ಗದವರು ಉಪಸ್ಥಿತಿಯಲ್ಲಿ ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಕಾವೇರಿ ನಿರೂಪಿಸಿದರು. ಶ್ರೀ ಪಂಪಾಪತಿ ಸ್ವಾಗತಿಸಿದರು .ಕುಮಾರಿ ಅನ್ನಪೂರ್ಣ ಅವರು ವಂದಿಸಿದರು.

Leave a Reply

Your email address will not be published. Required fields are marked *