ರಾಯಚೂರು ಫೆಬ್ರವರಿ 23 (ಕರ್ನಾಟಕ ವಾರ್ತೆ): ಪ್ರತಿ ವ್ಯಕ್ತಿಯ ಜೀವನದಲ್ಲಿ ಕಣ್ಣುಗಳು ಕೇವಲ ದೇಹದ ಅಂಗ ಮಾತ್ರ ಅಲ್ಲ, ವ್ಯಕ್ತಿಯ ಸಾಧನೆ, ಕುಟುಂಬದ ನಿರ್ವಹಣೆ ಸೇರಿದಂತೆ ಜೀವನಪೂರ್ತಿ ಪ್ರತಿ ಹಂತದಲ್ಲೂ ತನ್ನದೆ ಮಹತ್ವ ಸಾರುವ ಕಣ್ಣುಗಳು ಆರೈಕೆಗೆ ನಾವೆಲ್ಲರೂ ಮಹತ್ವ ನೀಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಹೇಳಿದರು.
ಇತ್ತೀಚೆಗೆ ನಗರದ ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಎಸ್ ಆರ್ ಹೆಗಡೆ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನವೋದಯ ವೈದ್ಯಕೀಯ ಶಿಕ್ಷಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಿರಂತರ ವೈದ್ಯಕೀಯ ಆರೋಗ್ಯ ಶಿಕ್ಷಣ ಕಾರ್ಯಕ್ರಮದಡಿ ಸಮುದಾಯದಲ್ಲಿ ಕಣ್ಣುಗಳ ಆರೈಕೆಯಲ್ಲಿ ಡಿಬಿಸಿಎಸ್ ಪಾತ್ರ ಎಂಬ ವಿಷಯದಡಿ ಕಣ್ಣಿನ ಆರೈಕೆಯ ನಿರಂತರ ವೈದ್ಯಕೀಯ ಆರೋಗ್ಯ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಧತ್ವವನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಕ್ಷೇತ್ರ ಮಟ್ಟದಲ್ಲಿ ತಪಾಸಣೆ, ಕನ್ನಡಕ ವಿತರಣೆ, ಉಚಿತ ನೇತ್ರ ಶಸ್ತ್ರಚಿಕಿತ್ಸ ಶಿಬಿರಗಳನ್ನು ಏರ್ಪಡಿಸುತ್ತಿದ್ದು, ಇತ್ತಿಚಿಗೆ ಕರ್ನಾಟಕ ಸರಕಾರವು ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಸುಸಜ್ಜಿತ ಆಶಾಕಿರಣ ದೃಷ್ಟಿಕೇಂದ್ರಗಳನ್ನು ಆರಂಭಿಸಿದ್ದು, ಈ ದಿಶೆಯಲ್ಲಿ ಕಣ್ಣಿನ ಆರೈಕೆ ಮತ್ತು ಅಂಧತ್ವ ತಡೆಗಟ್ಟುವಿಕೆಯ ಬಗ್ಗೆ ಸಮುದಾಯ ಜಾಗೃತಿ ಅವಶ್ಯವಾಗಿದ್ದು, ನವೋದಯ ವೈದ್ಯಕೀಯ ಮಹಾವಿದ್ಯಾಲಯವು 2003ರಿಂದ ಡಿಬಿಸಿಎಸ್ ಅನ್ನು ಅನುಷ್ಠಾನಗೊಳಿಸಿದ್ದು, ನೇತ್ರ ಸುರಕ್ಷತೆಗೆ ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ ಎಂದರು.
ಈ ವೇಳೆ ನವೋದಯ ಶೈಕ್ಷಣಿಕ ಟ್ರಸ್ಟ್ ರಜಿಸ್ಟರರ್ ಡಾ.ಶ್ರೀನಿವಾಸ್ ಟಿ, ಅವರು ಮಾತನಾಡಿ, ಕರ್ನಾಟಕ ಸರಕಾರದ ಮಾರ್ಗಸೂಚಿಯಡಿ ಆರೋಗ್ಯ ಇಲಾಖೆಯ ಜಿಲ್ಲಾ ಅಂಧತ್ವ ನಿಯಂತ್ರಣ ಸಂಘದೊAದಿಗೆ ನಿರಂತರ ಸಮನ್ವಯ ಕೈಗೊಂಡು ಬಡವರು ಮತ್ತು ನಿರ್ಗತಿಕರಿಗೆ ಉಚಿತ ಕಣ್ಣಿನ ಆರೈಕೆಗಾಗಿ 2003 ರಿಂದ ಡಿಬಿಸಿಎಸ್ ಅಡಿಯಲ್ಲಿ 25,000ಕ್ಕೂ ಹೆಚ್ಚು ನೇತ್ರಪೋರೆ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗಿದೆ. 2011 ರಿಂದ 100ಕ್ಕೂ ಹೆಚ್ಚು ನೇತ್ರಗಳನ್ನು ದಾನಿಗಳಿಂದ ಸಂಗ್ರಹಿಸಿದ್ದು, 100ಕ್ಕೂ ಹೆಚ್ಚು ಜನ ಅಂಧತ್ವ ಸಮಸ್ಯೆಯುಳ್ಳವರು ಇದರ ಪ್ರಯೋಜನ ಪಡೆದಿದ್ದು, ಇದಕ್ಕಾಗಿ ಕಣ್ಣಿನ ಸಮಸ್ಯೆಗಳಾದ, ದೃಷ್ಟಿದೊಷ, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ, ಮುಂತಾದವುಗಳಿಗೆ ಚಿಕಿತ್ಸೆಯನ್ನು ಎನ್‌ಎಮ್‌ಸಿಹೆಚ್ ಮತ್ತು ಆರ್‌ಸಿಯ ನೇತ್ರವಿಜ್ಞಾನ ವಿಭಾಗವು ಮುಂದುವರೆಸಿದ್ದು, ಇನ್ನು ಹೆಚ್ಚಿನ ಕಾರ್ಯಕ್ರಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಈ ವೇಳೆ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ನಂದಿತಾ ಎಮ್‌ಎನ್, ನವೋದಯ ವೈದ್ಯಕೀಯ ಕಾಲೇಜು ನಿವೃತ್ತ ಪ್ರಾಧ್ಯಾಪಕಿ ಡಾ.ಗೀತಾಮಣಿ, ಲಾತೂರ್‌ನ ಎಂಐಎAಎಸ್‌ಆರ್ ವೈದ್ಯಕೀಯ ಕಾಲೇಜಿನ ಸಮುದಾಯ ಔಷಧ ಪ್ರಾಧ್ಯಾಪಕ ಡಾ.ಅನಂತ್ ಟಕಲ್ಕರ್ ಅವರು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ನವೋದಯ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರು ಡಾ.ಅಮೃತ ರೆಡ್ಡಿ, ನೇತ್ರವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಅನುಪಮಾ ತಕ್ಲಿಕರ್, ಕೆಎಂಸಿ ವೀಕ್ಷಕ ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ.ವಾಸುದೇವ್ ಜಹಗೀದಾರ್, ವೈದ್ಯಕೀಯ ಅಧಿಕ್ಷಕರು ಡಾ.ಅರುಣ್ ಕೆ ಎನ್, ಪ್ರಭಾರಿ ಪ್ರಾಂಶುಪಾಲರು ಡಾ.ವಿಶಾಲ್ ಸಾಳ್ವೆ, ಆರ್‌ಎಂಒ ಡಾ.ನಾರಾಯಣ ಪೆಂಡ್ಲಿಕಲ್, ನೇತ್ರವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ.ಶರಣಬಸಮ್ಮ, ಡಾ.ರೇಷ್ಮಾ, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ.ಲವನ್ ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಡಾ.ಕಾಂಚನಾ ಬಿ ಕೆ, ಡಾ.ವೈಭವ, ಡಾ.ಶ್ವೇತಾ ಜಿ, ಡಾ.ಅಪೂರ್ವ ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಗುರು ಗಂಪಾ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *