ದಿನಾಂಕ 21/02/2026 ರಂದು ಬೆಳಗಾವಿ ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಪುತ್ರರಾದ ಮ್ರಣಾಲ ಹೆಬ್ಬಾಳ್ಕರ್ ಅವರನ್ನು ಅವರ ಕಾರ್ಯಾಲಯ ಹಾಗೂ ನಿವಾಸದಲ್ಲಿ ಭೇಟಿ ಮಾಡಿ, ಹೈದರಾಬಾದ್ ಕರ್ನಾಟಕ (HK) ಪ್ರಸ್ತುತ ಕಲ್ಯಾಣ ಕರ್ನಾಟಕ ಭಾಗದ ಅಂಗನವಾಡಿ ಮೇಲ್ವಿಚಾರಕರ ಪದೋನ್ನತಿ ಸಂಬಂಧಿತ ಅನ್ಯಾಯದ ಬಗ್ಗೆ ಸವಿಸ್ತಾರ ಮನವಿ ಸಲ್ಲಿಸಲಾಯಿತು.
2004ರಲ್ಲಿ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿ 235 ಅಂಗನವಾಡಿ ಕಾರ್ಯಕರ್ತರನ್ನು ಮೇಲ್ವಿಚಾರಕರಾಗಿ ಮುಂಬಡ್ತಿ ನೀಡಿ ನೇಮಕ ಮಾಡಲಾಗಿತ್ತು. ನಂತರ ಆಗಾಗ 100 ಮಂದಿಗೆ ಹಿರಿಯ ಮೇಲ್ವಿಚಾರಕರ ಹುದ್ದೆಗೆ ಪದೋನ್ನತಿ ನೀಡಲಾಗಿದೆ.
ಆದರೆ HK ಹೊರತುಪಡಿಸಿ ಉಳಿದ (NHK) ಜಿಲ್ಲೆಗಳಲ್ಲಿ 2100 ಅಂಗನವಾಡಿ ಕಾರ್ಯಕರ್ತೆಯರಿಗೆ ಮೇಲ್ವಿಚಾರಕ ಹುದ್ದೆಗೆ ಪದೋನ್ನತಿ ನೀಡಲಾಗಿದ್ದು, 2004ರಿಂದ ಇಂದಿನವರೆಗೆ 1600 ಮಂದಿಗೆ ಹಿರಿಯ ಮೇಲ್ವಿಚಾರಕರಾಗಿ ಪದೋನ್ನತಿ ನೀಡಲಾಗಿದೆ. ಪ್ರಸ್ತುತ 2026ನೇ ಸಾಲಿನಲ್ಲಿ ಉಳಿದ 500 ಮೇಲ್ವಿಚಾರಕ ಹುದ್ದೆಗಳಲ್ಲಿ 118 ಮಂದಿಗೆ ಹಿರಿಯ ಮೇಲ್ವಿಚಾರಕರಾಗಿ ನೇಮಕ ಮಾಡಲು ಆದೇಶ ನೀಡಲಾಗಿದೆ.
ಇದಕ್ಕೆ ವಿರುದ್ಧವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಳಿದಿರುವ 135 ಮೇಲ್ವಿಚಾರಕ ಹುದ್ದೆಗಳ ಪೈಕಿ ಕೇವಲ 15 ಹುದ್ದೆಗಳನ್ನಷ್ಟೇ ಆದೇಶದಲ್ಲಿ ಸೇರಿಸಲಾಗಿದೆ. ಜೊತೆಗೆ ನಿವೃತ್ತಿ ಹೊಂದಿದವರ ಹಾಗೂ ಮರಣ ಹೊಂದಿದವರ ಹೆಸರುಗಳನ್ನೂ ಆದೇಶದಲ್ಲಿ ಸೇರಿಸಿರುವ ಬಗ್ಗೆ ದಾಖಲೆ ಸಮೇತ ವಿವರ ನೀಡಲಾಯಿತು. ಈ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಲಾಗಿದ್ದು, ಸಚಿವರು ತಕ್ಕ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ ಸುಲ್ತಾನಪುರ, ಕಲ್ಯಾಣ ಕರ್ನಾಟಕ ಮೇಲ್ವಿಚಾರಕರ ಸಂಘದ ಅಧ್ಯಕ್ಷೆ ಶ್ರೀಮತಿ ಅವರಮ್ಮ ಬಸನಗೌಡ ಗುಡಿಜಾವೂರ (ರಾಯಚೂರು), ಶ್ರೀಮತಿ ಲಲಿತಾ (ಡಿ.ಆರ್. ಮಸ್ಕಿ), ತುರ್ವಿಹಾಳದ ಶ್ರೀಮತಿ ಶಾಂತಮ್ಮ, ಮಾನ್ವಿಯ ಶ್ರೀಮತಿ ನಾಗರತ್ನ ಮತ್ತು ಶ್ರೀಮತಿ ನಿರ್ಮಲಾ, ಸಿಂಧನೂರು ತಾಲೂಕಿನ ಶ್ರೀಮತಿ ನೀಲಮ್ಮ ಬೂದಿಹಾಳ, ಕೊಪ್ಪಳ ಜಿಲ್ಲೆಯ ಶ್ರೀಮತಿ ಗಾಯತ್ರಿ ದೇವಾಂಗದ, ಗಂಗಾವತಿ ತಾಲೂಕಿನ ಶ್ರೀಮತಿ ಲಕ್ಷ್ಮೀದೇವಿ ಹಾಗೂ ಶ್ರೀಮತಿ ಶಾಹಿನಾಬಾನು, ಕುಷ್ಟಗಿ ತಾಲೂಕಿನ ಶ್ರೀಮತಿ ಶಕುಂತಲಾ ಪೂಜಾರ ಹಾಗೂ ಶ್ರೀಮತಿ ಸಾವಿತ್ರಿ ಮಕ್ತಾಪುರ, ಯಲಬುರ್ಗಾ ತಾಲೂಕಿನ ಶ್ರೀಮತಿ ಲಲಿತಾ ನಾಯಕ ಹಾಗೂ ಶ್ರೀಮತಿ ಮಂಜುಳಾ ಗುಗ್ಗರಿ ಸೇರಿದಂತೆ ವಿವಿಧ ಜಿಲ್ಲೆಗಳ ಮೇಲ್ವಿಚಾರಕರು ಉಪಸ್ಥಿತರಿದ್ದರು.
ಕಲ್ಯಾಣ ಕರ್ನಾಟಕ ಭಾಗದ ಮೇಲ್ವಿಚಾರಕರಿಗೆ ಸಮಾನ ನ್ಯಾಯ ದೊರಕಬೇಕು ಎಂಬುದು ಸಭೆಯ ಪ್ರಮುಖ ಆಶಯವಾಗಿತ್ತು.


