ಪರಿಶ್ರಮ ಮತ್ತು ಶ್ರದ್ಧೆಯಿಂದಲೇ ಸಾಧನೆ ಸಾಧ್ಯ : ಕೆ.ಈ.ನರಸಿಂಹ ಮಾನ್ವಿ : ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಬೇಕು, ಸತತ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದು ಕೆ.ಈ.ನರಸಿಂಹ ಹೇಳಿದರು. ಅವರು ಪಟ್ಟಣದ ನೇತಾಜಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾವುಕ ಹಾಗೂ ಸ್ಮರಣೀಯ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೋಷಕರು ಮಕ್ಕಳ ಸಾಧನೆಗೆ ಪ್ರಮುಖ ಆಧಾರ ಸ್ತಂಭರಾಗಿದ್ದು, ಅವರ ತ್ಯಾಗ ಮತ್ತು ಪ್ರೋತ್ಸಾಹವೇ ವಿದ್ಯಾರ್ಥಿಗಳ ಯಶಸ್ಸಿನ ಬುನಾದಿಯಾಗುತ್ತದೆ. ಆದ್ದರಿಂದ ಎಂದಿಗೂ ತಂದೆ–ತಾಯಿಯ ಮನಸ್ಸು ನೋಯಿಸಬಾರದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕೆ.ವಿಜಯಲಕ್ಷ್ಮಿ, ಸೋಲು ಬಂದರೆ ನಿರಾಶರಾಗಬೇಡಿ; ಅದನ್ನು ಪಾಠವಾಗಿ ಸ್ವೀಕರಿಸಿ ಮುಂದೆ ಸಾಗಿದರೆ ಜಯ ನಿಮ್ಮದೆ ಆಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಬಳಿಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಕಾಲೇಜಿನ ನೆನಪುಗಳನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ಕಾರ್ಯದರ್ಶಿ ಕೆ.ರಾಜರವಿವರ್ಮಾ, ಡಾ. ಕೆ.ವಿನಯಾ, ಕಾಲೇಜಿನ ಮೇಲ್ವಿಚಾರಕ ಆರೀಫ್ ಹಾಗೂ ಉಪನ್ಯಾಸಕರಾದ ಚಂದ್ರು ಜಾಧವ್, ರಮೇಶ್, ವೀರನಗೌಡ, ಸದ್ದಾಂ, ನಾಗರಾಜ್, ಕಾವ್ಯ, ತ್ರಿವೇಣಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಡಿಜಿಟಲ್ ಪ್ರಾಜೆಕ್ಟರ್ ಅನ್ನು ಕಾಣಿಕೆಯಾಗಿ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.

Bynaijyadese

Feb 23, 2026

ಮಾನ್ವಿ : ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಬೇಕು, ಸತತ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದು ಕೆ.ಈ.ನರಸಿಂಹ ಹೇಳಿದರು. ಅವರು ಪಟ್ಟಣದ ನೇತಾಜಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾವುಕ ಹಾಗೂ ಸ್ಮರಣೀಯ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೋಷಕರು ಮಕ್ಕಳ ಸಾಧನೆಗೆ ಪ್ರಮುಖ ಆಧಾರ ಸ್ತಂಭರಾಗಿದ್ದು, ಅವರ ತ್ಯಾಗ ಮತ್ತು ಪ್ರೋತ್ಸಾಹವೇ ವಿದ್ಯಾರ್ಥಿಗಳ ಯಶಸ್ಸಿನ ಬುನಾದಿಯಾಗುತ್ತದೆ. ಆದ್ದರಿಂದ ಎಂದಿಗೂ ತಂದೆ–ತಾಯಿಯ ಮನಸ್ಸು ನೋಯಿಸಬಾರದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕೆ.ವಿಜಯಲಕ್ಷ್ಮಿ, ಸೋಲು ಬಂದರೆ ನಿರಾಶರಾಗಬೇಡಿ; ಅದನ್ನು ಪಾಠವಾಗಿ ಸ್ವೀಕರಿಸಿ ಮುಂದೆ ಸಾಗಿದರೆ ಜಯ ನಿಮ್ಮದೆ ಆಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಬಳಿಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಕಾಲೇಜಿನ ನೆನಪುಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ಕಾರ್ಯದರ್ಶಿ ಕೆ.ರಾಜರವಿವರ್ಮಾ, ಡಾ. ಕೆ.ವಿನಯಾ, ಕಾಲೇಜಿನ ಮೇಲ್ವಿಚಾರಕ ಆರೀಫ್ ಹಾಗೂ ಉಪನ್ಯಾಸಕರಾದ ಚಂದ್ರು ಜಾಧವ್, ರಮೇಶ್, ವೀರನಗೌಡ, ಸದ್ದಾಂ, ನಾಗರಾಜ್, ಕಾವ್ಯ, ತ್ರಿವೇಣಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಡಿಜಿಟಲ್ ಪ್ರಾಜೆಕ್ಟರ್ ಅನ್ನು ಕಾಣಿಕೆಯಾಗಿ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.

Leave a Reply

Your email address will not be published. Required fields are marked *