ಸಿಂಧನೂರು- ಫೆ 22 ಕೊಪ್ಪಳ ಜಿಲ್ಲೆಯ ಕಾರಟಿಗಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳಾದ ಜಯಮ್ಮ ಶರಣಪ್ಪ ಈ ಪೊಲೀಸ್ ದಂಪತಿಗಳು ತಮ್ಮ ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಬೇಸಿಗೆ ದಿನಗಳ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಆಶ್ರಮದ ಆಶ್ರಯದಾತುರುಗಳಿಗೆ ಉತ್ತಮ ಗುಣಮಟ್ಟದ ದೊಡ್ಡ ಗಾತ್ರದ ಏರ್ ಕೂಲರ್ ಹಾಗೂ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅಪಾರ ಕುಟುಂಬದ ಸಮಕ್ಷಮದಲ್ಲಿ ಸರಳವಾಗಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಆಶ್ರಮದ ವತಿಯಿಂದ ಪೊಲೀಸ್ ದಂಪತಿಗಳಾದ ಜಯಮ್ಮ ಶರಣಪ್ಪ ಈ ದಂಪತಿಗಳನ್ನು ಆಶ್ರಮದ ವತಿಯಿಂದ ಗೌರವಿಸಿ ಸನ್ಮಾನಿಸಿ ಆಶೀರ್ವದಿಸಲಾಯಿತು. ನಂತರ ಕಾರಟಗಿ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಶರಣಪ್ಪ ಮಾತನಾಡಿ ಇಂತಹ ಕಾರ್ಯಕ್ರಮಗಳನ್ನು ನಾವು ದುಂದುವೆಚ್ಚ ಮಾಡದೆ ಇಂತಹ ಆಶ್ರಮಗಳಿಗೆ ಸಹಾಯ ಸಹಕಾರ ಮಾಡುವ ಮೂಲಕ ಆಚರಿಸಿಕೊಂಡಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ. ಈ ನಮ್ಮ ಕಾರುಣ್ಯಾಶ್ರಮವು ನಮ್ಮ ಪೊಲೀಸ್ ಇಲಾಖೆಯ ಪ್ರೀತಿಗೆ ಪಾತ್ರವಾಗಿದೆ. ನಮ್ಮ ಕಾರಟಗಿ ಪೊಲೀಸ ವ್ಯಾಪ್ತಿಯಲ್ಲಿ ಹಲವಾರು ಅಂದ ಅನಾಥರ ಬಾಳಿಗೆ ಬದುಕು ಕಟ್ಟಿಕೊಟ್ಟಿರುವ ಕಾರುಣ್ಯ ಆಶ್ರಮದಲ್ಲಿ ಇರುವಂತಹ ಎಲ್ಲ ಹಿರಿಯರು ಕೂಡ ನಮ್ಮ ತಂದೆ ತಾಯಿಗಳ ಸಮಾನರು ಮತ್ತು ಬುದ್ಧಿಮಾಂದ್ಯರು ಸಹೋದರ ಸಹೋದರಿಯರ ಸಮಾನರು ಎನ್ನುವ ಭಾವನೆ ನಮ್ಮ ಕುಟುಂಬದ್ದು. ಸ್ವಾರ್ಥದ ಈ ಜಗತ್ತಿನಲ್ಲಿ ನಿಸ್ವಾರ್ಥತೆಯ ಪಾಠಶಾಲೆಯಾಗಿರುವ ಕಾರುಣ್ಯ ಆಶ್ರಮದ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಮಲಗಿದಲ್ಲಿಯೇ ತಮ್ಮೆಲ್ಲಾ ಚಟುವಟಿಕೆಗಳನ್ನು ಮಾಡಿಕೊಳ್ಳುವಂತಹ ಅನೇಕರಿಗೆ ಪ್ರೀತಿ ಕೊಟ್ಟು ಸ್ವಂತ ಮಕ್ಕಳ ಹಾಗೆ ಸೇವೆ ಮಾಡುತ್ತಿರುವ ಕಾರುಣ್ಯ ಆಶ್ರಮದ ಸಿಬ್ಬಂದಿಗಳಿಗೆ ನಮ್ಮ ಇಲಾಖೆಯ ಪರವಾಗಿ ಧನ್ಯವಾದಗಳು. ನಾನು ನನ್ನ ಧರ್ಮಪತ್ನಿ ಪೋಲಿಸ್ ಇಲಾಖೆಯಲ್ಲಿ ಪ್ರಾಮಾಣಿಕವಾದಂತ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುತ್ತಿದ್ದೇವೆ ಎನ್ನುವ ಆತ್ಮ ತೃಪ್ತಿ ನಮಗಿದೆ. ಬರೀ ನಮಗೆ ಜನ್ಮ ಜೀವ ಜೀವನ ರೂಪಿಸಿದವರಷ್ಟೇ ನಮ್ಮ ತಂದೆ ತಾಯಿಗಳು ಎನ್ನುಕೊಳ್ಳದೆ ಸಮಾಜದಲ್ಲಿರುವಂತ ಎಲ್ಲಾ ಹಿರಿಯರು ಕೂಡ ನಮ್ಮ ತಂದೆ ತಾಯಿಗಳ ಸಮಾನರು ಎನ್ನುವ ಭಾವನೆ ಪ್ರತಿಯೊಬ್ಬರ ಹತ್ತಿರ ಬಂದಾಗ ಮಾತ್ರ ಇಂತಹ ವೃದ್ಧಾಶ್ರಮಗಳ ಅವಶ್ಯಕತೆ ಇರುವುದಿಲ್ಲ. ಆದರೆ ಸುಮಾರು ವರ್ಷಗಳಿಂದ ಅನಿವಾರ್ಯಕ್ಕಾಗಿ ಹುಟ್ಟಿರುವ ಈ ಕಾರುಣ್ಯ ಸಂಸ್ಥೆ ನಿಜವಾದ ಅನಾಥರಿಗೆ ಆಸರೆಯಾಗಿರುವುದು ನಮ್ಮೆಲ್ಲರಿಗೆ ಸ್ಫೂರ್ತಿಯಾಗಿದೆ. ಮುಂದಿನ ದಿನಮಾನಗಳಲ್ಲೂ ಸಹ ನಮ್ಮ ಕಾರಟಗಿ ಪೊಲೀಸ್ ಠಾಣೆ ನನ್ನ ವೃತ್ತಿ ಸ್ನೇಹಿತರಿಂದ ಕಾರುಣ್ಯ ಆಶ್ರಮಕ್ಕೆ ನಿರಂತರ ಸಹಾಯ ಸಹಕಾರ ದೊರೆಯುತ್ತದೆ. ಇಂದು ನನ್ನ ವಿವಾಹ ವಾರ್ಷಿಕೋತ್ಸವದಲ್ಲಿ ಹರಸಿ ಹಾರೈಸಿ ಆಶೀರ್ವದಿಸಿರುವ ಕಾರುಣ್ಯ ಆಶ್ರಮದ ಕೂಸುಗಳಿಗೆ ಮತ್ತು ನನ್ನೆಲ್ಲಾ ಸ್ನೇಹಿತರಿಗೆ ಸಹೋದ್ಯೋಗಿಗಳಿಗೆ ಹೃದಯಪೂರ್ವಕ ಹೃತ್ಪೂರ್ವಕ ಧನ್ಯವಾದಗಳು ಎಂದು ಭಾವನಾತ್ಮಕವಾಗಿ ಮಾತನಾಡಿ ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಜಯಮ್ಮ ಪೊಲೀಸ್ ಅಧಿಕಾರಿಗಳು ಕಾರಟಗಿ ಪೊಲೀಸ್ ಠಾಣೆ. ಬಸಮ್ಮ ಕೆ.ಬಸಾಪುರ. ಬಸವರಾಜ.ಶ್ರೀನಿವಾಸ. ಚನ್ನಪ್ಪ.ಸುರೇಶ. ಆಲಂಭಾಷಾ.ವೆಂಕಟೇಶ. ಗವಿಸಿದ್ದೇಶ್ವರ.ರೆಡ್ಡಪ್ಪ ಚಂದ್ರಶೇಖರ. ಹಾಗೂ ಆಶ್ರಮದ ಸಂಸ್ಥಾಪಕರಾದ ವೇದಮೂರ್ತಿ ಅಮರಯ್ಯ ಸ್ವಾಮಿ ಹಿರೇಮಠ ಹರೇಟನೂರು.ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ.ಜ್ಯೋತಿ. ಮತ್ತು ಕಾರಟಗಿ ಪೊಲೀಸ್ ಠಾಣೆಯ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು



