ಜೀವನವದ ಬಹುಮುಖ್ಯ ಅಂಗ ಕಣ್ಣುಗಳ ಆರೈಕೆಗೆ ಮಹತ್ವ ನೀಡುವ ಕಾರ್ಯ ನಾವೆಲ್ಲರೂ ಮಾಡೋಣ: ಡಾ ಸುರೇಂದ್ರ ಬಾಬು
ಪ್ರತಿ ವ್ಯಕ್ತಿಯ ಜೀವನದಲ್ಲಿ ಕಣ್ಣುಗಳು ಕೇವಲ ದೇಹದ ಅಂಗ ಮಾತ್ರ ಅಲ್ಲ, ವ್ಯಕ್ತಿಯ ಸಾಧನೆ, ಕುಟುಂಬದ ನಿರ್ವಹಣೆ ಸೇರಿದಂತೆ ಜೀವನಪೂರ್ತಿ ಪ್ರತಿ ಹಂತದಲ್ಲೂ ತನ್ನದೆ ಮಹತ್ವ ಸಾರುವ ಕಣ್ಣುಗಳು ಆರೈಕೆಗೆ ಜಿಲ್ಲೆಯಲ್ಲಿ ಸರಕಾರದೊಂದಿಗೆ ನವೋದಯ ವೈದ್ಯಕೀಯ ಮಹಾವಿದ್ಯಾಲಯ ನೀಡುತ್ತಿರುವ ಸಹಕಾರ ನಿರಂತರವಾಗಿರಲಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸುರೇಂದ್ರಬಾಬು ತಿಳಿಸಿದರು.
ನವೋದಯ ವೈದ್ಯಕೀಯ ಮಹಾವಿದ್ಯಾಲಯವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೊಗದೊಂದಿಗೆ ನವೊದಯ ಕಾಲೇಜಿನ ಎಸ್ ಆರ್ ಹೆಗಡೆ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ನಿರಂತರ ವೈದ್ಯಕೀಯ ಆರೋಗ್ಯ ಶಿಕ್ಷಣ ಕಾರ್ಯಕ್ರಮದಡಿ ‘ ಸಮುದಾಯದಲ್ಲಿ ಕಣ್ಣುಗಳ ಆರೈಕೆಯಲ್ಲಿ ಡಿಬಿಸಿಎಸ್ ಪಾತ್ರ” ಎಂಬ ವಿಷಯದಡಿ ಹಮ್ಮಿಕೊಂಡ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡುತ್ತಾ, ಅಂಧತ್ವವನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಕ್ಷೇತ್ರ ಮಟ್ಟದಲ್ಲಿ ತಪಾಸಣೆ, ಕನ್ನಡಕ ವಿತರಣೆ, ಉಚಿತ ನೇತ್ರ ಶಸ್ತ್ರಚಿಕಿತ್ಸ ಶಿಬಿರಗಳನ್ನು ಏರ್ಪಡಿಸುತ್ತಿದ್ದು, ಇತ್ತಿಚಿಗೆ ಕರ್ನಾಟಕ ಸರಕಾರವು ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಸುಸಜ್ಜಿತ ಆಶಾಕಿರಣ ದೃಷ್ಟಿಕೇಂದ್ರಗಳನ್ನು ಆರಂಭಿಸಿದ್ದು, ಈ ದಿಶೆಯಲ್ಲಿ ಕಣ್ಣಿನ ಆರೈಕೆ ಮತ್ತು ಅಂಧತ್ವ ತಡೆಗಟ್ಟುವಿಕೆಯ ಬಗ್ಗೆ ಸಮುದಾಯ ಜಾಗೃತಿ ಅವಶ್ಯವಾಗಿದ್ದು, ನವೋದಯ ವೈದ್ಯಕೀಯ ಮಹಾವಿದ್ಯಾಲಯವು 2003 ರಿಂದ ಡಿಬಿಸಿಎಸ್ ಅನ್ನು ಅನುಷ್ಠಾನಗೊಳಿಸಿದ್ದು ನೇತ್ರ ಸುರಕ್ಷತೆಗೆ ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನವೋದಯ ಶೈಕ್ಷಣಿಕ ಟ್ರಸ್ಟ್ ರಜಿಸ್ಟರರ್ ಡಾ ಶ್ರೀನಿವಾಸ್ ಟಿ, ಮಾತನಾಡಿ, ಕರ್ನಾಟಕ ಸರಕಾರದ ಮಾರ್ಗಸೂಚಿಯಡಿ ಆರೋಗ್ಯ ಇಲಾಖೆಯ ಜಿಲ್ಲಾ ಅಂಧತ್ವ ನಿಯಂತ್ರಣ ಸಂಘದೊಂದಿಗೆ ನಿರಂತರ ಸಮನ್ವಯ ಕೈಗೊಂಡು, ಬಡವರು ಮತ್ತು ನಿರ್ಗತಿಕರಿಗೆ ಉಚಿತ ಕಣ್ಣಿನ ಆರೈಕೆಗಾಗಿ 2003 ರಿಂದ ಡಿಬಿಸಿಎಸ್ ಅಡಿಯಲ್ಲಿ 25000 ಕ್ಕೂ ಹೆಚ್ಚು ನೇತ್ರಪೋರೆ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗಿದೆ, 2011 ರಿಂದ 100 ಕ್ಕೂ ಹೆಚ್ಚು ನೇತ್ರಗಳನ್ನು ದಾನಿಗಳಿಂದ ಸಂಗ್ರಹಿಸಿದ್ದು, 100 ಕ್ಕೂ ಹೆಚ್ಚು ಜನ ಅಂಧತ್ವ ಸಮಸ್ಯೆಯುಳ್ಳವರು ಇದರ ಪ್ರಯೋಜನ ಪಡೆದಿದ್ದು, ಇದಕ್ಕಾಗಿ ಕಣ್ಣಿನ ಸಮಸ್ಯೆಗಳಾದ, ದೃಷ್ಟಿದೊಷ, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ, ಮುಂತಾದವುಗಳಿಗೆ ಚಿಕಿತ್ಸೆಯನ್ನು ಎನ್‌ಎಮ್‌ಸಿಹೆಚ್ ಮತ್ತು ಆರ್‌ಸಿಯ ನೇತ್ರವಿಜ್ಞಾನ ವಿಭಾಗವು ಮುಂದುವರೆಸಿದ್ದು, ಇನ್ನು ಹೆಚ್ಚಿನ ಕಾರ್ಯಕ್ರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ, ಡಾ ನಂದಿತಾ ಎಮ್‌ಎನ್,
ನವೋದಯ ವೈದ್ಯಕೀಯ ಕಾಲೇಜು ನಿವೃತ್ತ ಪ್ರಾಧ್ಯಾಪಕಿ ಡಾ. ಗೀತಾಮಣಿ, ಲಾತೂರ್‌ನ ಎಂಐಎಂಎಸ್‌ಆರ್ ವೈದ್ಯಕೀಯ ಕಾಲೇಜಿನ ಸಮುದಾಯ ಔಷಧ ಪ್ರಾಧ್ಯಾಪಕ ಡಾ. ಅನಂತ್ ಟಕಲ್ಕರ್ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ನವೋದಯ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರು ಡಾ ಅಮೃತ ರೆಡ್ಡಿ, ನೇತ್ರವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ ಅನುಪಮಾ ತಕ್ಲಿಕರ್, ಕೆಎಂಸಿ ವೀಕ್ಷಕ ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ ವಾಸುದೇವ್ ಜಹಗೀದಾರ್,
ವೈದ್ಯಕೀಯ ಅಧಿಕ್ಷಕರು ಡಾ ಅರುಣ್ ಕೆ ಎನ್, ಪ್ರಭಾರಿ ಪ್ರಾಂಶುಪಾಲರು ಡಾ ವಿಶಾಲ್ ಸಾಳ್ವೆ, ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಆರ್‌ಎಂಒ ಡಾ ನಾರಾಯಣ ಪೆಂಡ್ಲಿಕಲ್, ನೇತ್ರವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಶರಣಬಸಮ್ಮ, ಡಾ ರೇಷ್ಮಾ, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ ಲವನ್ ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಡಾ ಕಾಂಚನಾ ಬಿ ಕೆ, ಡಾ ವೈಭವ, ಡಾ ಶ್ವೇತಾ ಜಿ, ಡಾ ಅಪೂರ್ವ ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಗುರು ಗಂಪಾ, ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಇತರ ಗಣ್ಯರು ಉಪಸ್ಥಿತರಿದ್ದರು.

