ಸಿಂಧನೂರು ನಗರದಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ವಿರುದ್ಧದ ಬೃಹತ್ ಪ್ರತಿಭಟನೆ
ಈ ಹೋರಾಟದಲ್ಲಿ ಅನೇಕ ಎತ್ತಿನ ಬಂಡಿ ಮೂಲಕ ಮೆರವಣಿಗೆ ನಡೆಯಿತು, ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ನಂತರ ಈ ಪ್ರತಿಭಟನೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು
ನೀರು ಕೊಡದಿದ್ದಲ್ಲಿ ಎಕರಿಗೆ 25 ಸಾವಿರ ಪರಿಹಾರ ಕೊಡಿ ಆಥವಾ ಈ ವರ್ಷದ ಸಾಲಮನ್ನ ಮಾಡಿ
ತಮ್ಮದೆ ಪಕ್ಷದ ತೆಲಂಗಾಣದ ಸರ್ಕಾರ ಕನಿಷ್ಟ ಬೆಂಬಲ ಬೆಲೆಯಮೇಲೆ ಹೆಚ್ಚುವರಿಯಾಗಿ 500 ರೂಪಾಯಿ ನೀಡಿ ಭತ್ತ ಖರೀದಿ ಕೇಂದ್ರಗಳನ್ನು ತೆರೆದು ಭತ್ತ ಖರೀದಿಸಿ ಒಂದು ವಾರದಲ್ಲಿ ರೈತರ ಖಾತೆಗೆ ಹಣ ಜಮಾ ಮಾಡಿರುತ್ತಾರೆ ಅದರಂತೆ ನಮಗೂ ಬೆಂಬಲ ಬೆಲೆಯಮೇಲೆ ಹೆಚ್ಚುವರಿಯಾಗಿ 500 ರೂಪಾಯಿ ನೀಡಿ ಭತ್ತ ಕೂಡಲೆ ಖರೀದಿ ಮಾಡಲು ಒತ್ತಾಯಿಸುತ್ತೇವೆ. ನಮ್ಮ ಹಿಂದಿನ ಸರ್ಕಾರಗಳು 200 ರಿಂದ 300 ರೂಪಾಯಿ ಹೆಚ್ಚಿಸಿ ಖರೀದಿ ಮಾಡಿದ ಉದಾಹರಣೆಗಳಿವೆ.
ಈಗಾಗಲೆ ಬೆಳೆ ಹಾನಿಯಾದ ರೈತರಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ್ದು ಅದರೊಂದಿಗೆ ತಮ್ಮ ಸರ್ಕಾರ ಹಣ ನೀಡುವುದಾಗಿ ಹೇಳಿದ್ದು ಇದುವರಗೆ ಯಾವ ರೈತರ ಖಾತೆಗೆ ಹಣ ಬಂದಿರುವುದಲ್ಲ ಕೂಡಲೆ ಹಣ ಬಿಡುಗಡೆ ಮಾಡಲು ಒತ್ತಾಯಿಸುತ್ತೇವೆ.
ಜೋಳ ಬೆಳದ ರೈತರಿಗೆ ತಮ್ಮ ಸರ್ಕಾರ ಕಳೆದ ವರ್ಷ ಜೋಳ ಕಟಾವಾದ 3-4 ತಿಂಗಳದ ನಂತರ ಖರೀಧಿ ಕೇಂದ್ರಗಳನ್ನು ತೆರೆದು ರೈತರಿಗೆ ಕೊಡಬಾರದು ತೂಂದರೆ ಕೊಟ್ಟು ಕೆಲ ರೈತರಿಂದ ಎಕರೆಗೆ 15 ಕ್ವಿಂಟಾಲ ಇನ್ನುಳಿದ ರೈತರಿಂದ 10 ಕ್ವಿಂಟಾಲ ಖರೀದಿಮಾಡಿ ರೈತರಗೆ ಮೋಸಮಾಡಿದಿರಿ ಈ ಸಾರಿ ಜೋಳ ಕಟಾವು ಪ್ರಾರಂಭವಾಗುವ ಮೊದಲೇ ಖರೀದಿ ಕೇಂದ್ರಗಳನ್ನು ತೆರೆದು ಜೋಳ ಖರೀದಿಸಲು ಒತ್ತಾಯಿಸುತ್ತೇವೆ. ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಶ್ರೀ ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗ ಎಕರೆಗೆ 20 ಕ್ವಿಂಟಾಲ್‌ನಂತೆ ಸಣ್ಣ ಮತ್ತು ದೊಡ್ಡರೈತರಿಗೆ ಎಲ್ಲಾ ಬೆಳೆದ ಜೊಳವನ್ನು ಖರೀದಿಸಿರುತ್ತಾರೆ ಆದ್ದರಿಂದ ಈ ವರ್ಷ ರೈತರು ಬೆಳೆದ ಎಲ್ಲಾ ಜೋಳವನ್ನು ಪ್ರತಿಎಕರೆಗೆ 20 ಕ್ವಿಂಟಾಲಿನಂತೆ ಖರೀದಿಸಲು ಒತ್ತಾಯಿಸುತ್ತೇವೆ.
ಕೊಪ್ಪಳ ಜಿಲ್ಲೆ, ವಿಜಯನಗರ ಜಿಲ್ಲೆ ಹಾಗೂ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಬೆಳೆದಿರುವ ಮೆಕ್ಕೆಜೋಳ ಹಾಗೂ ಹತ್ತಿಯ ಖರೀದಿ ಕೇಂದ್ರಗಳನ್ನು ಕೂಡಲೆ ತೆರೆದು ಖರೀದಿಸಬೇಕೆಂದು ಒತ್ತಾಯಿಸುತ್ತೇವೆ. ಈ ಪ್ರತಿಭಟನೆಯಲ್ಲಿ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕರಾದ ವೆಂಕಟರಾವ್ ನಾಡಗೌಡ, ಮಾನವೀಯ ಮಾಜಿ ಶಾಸಕರಾದ ವೆಂಕಟಪ್ಪ ನಾಯಕ್,
ಶಾಸಕ ಸುರೇಶ ಬಾಬು, ಮಾಜಿ ಶಾಸಕ ಬಾಲಕೃಷ್ಣ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ರಾಜ ವೆಂಕಟಪ್ಪ ನಾಯಕ್, ಸಿದ್ದು ಬಂಡಿ, ಸಿ.ವಿ ಚಂದ್ರಶೇಖರ, ಬಸವರಾಜ ನಾಡಗೌಡ ವೆಂಕಟೇಶ್ ಬಸವರಾಜ ನಾಡಗೌಡ ವೆಂಕಟೇಶ್ ನಂಜಲದಿನ್ನಿ, ನಾಗೇಶ ಹಂಚಿನಾಳ ಮತ್ತಿತರರು ಇದ್ದರು.


