ಮಾನ್ವಿ: ಪಟ್ಟಣದ ಕೆ.ಪಿ.ಎಸ್.ವಿ.ಎಸ್. ಆಯುರ್ವೇದ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ಪಿ.ಹೆಚ್.ಡಿ.ಸಂಶೋಧನಾರ್ಥಿಗಳಿAದ ನಡೆದ ಉಚಿತ ಮೂಳೆಗೆ ಸಂಬಂಧಿಸಿದ ಚಿಕಿತ್ಸ ಶಿಬಿರವನ್ನು ಸಂಶೋಧನ ಮಾರ್ಗದರ್ಶಕರಾದ ಗದುಗಿನ ಡಿ.ಜಿ.ಎಂ. ಆಯುರ್ವೇದ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ಪ್ರಾಚಾರ್ಯರಾದ ಡಾ.ಸಂತೋಷ ಎನ್,ಬೆಳವಡಿ ಚಾಲನೆ ನೀಡಿ ಮಾತನಾಡಿ ಮನಸ್ಸು ಮತ್ತು ನಾಲಿಗೆ ನಿಯಂತ್ರಣದಲ್ಲಿಡದೆ ಇದ್ದಲ್ಲಿ ಮಾನವರಲ್ಲಿ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇಂದಿನ ದಿನಗಳಲ್ಲಿ ದೇಹಕ್ಕೆ ಮನಸ್ಸಿಗೆ ಹಿತವಾದ ಆಹಾರವನ್ನು ಸೇವಿಸದೆ ಇರುವುದರಿಂದ ದೇಹಕ್ಕೆ ಅಗತ್ಯವಾದ ಪೋಷಾಕಾಂಶ ದೊರೆಯದೆ ದೇಹದಲ್ಲಿ ವಿಷಾಂಶ ಹೆಚ್ಚಾಗುತ್ತಿದೆ. ಇಂದಿನ ಅಧುನಿಕ ಜೀವನದಲ್ಲಿನ ಒತ್ತಾಡಗಳಿಂದ ,ಶಾರೀರಿಕ ವ್ಯಾಯಮಗಳಿಲ್ಲದೆ ಇರುವುದರಿಂದ ಹೆಚ್ಚಾಗಿ ಮಹಿಳೆಯರಲ್ಲಿಮತ್ತು ಪುರುಷರಲ್ಲಿ ಮೂಳೆಗಳು ದೃಬಲಗೊಳ್ಳುತ್ತಿರುವುದರಿಂದ ಅನೇಕ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು,ಮೂಳೆ ಸವೇತ ,ಉಂಟಾಗುತ್ತಿವೆ . ನಮ್ಮ ಆಯುರ್ವೇದ ಶಾಸ್ತçದಲ್ಲಿ ಪಂಚಕರ್ಮ ಚಿಕಿತ್ಸೆಯಿಂದ ಹಾಗೂ ಶಾಸ್ತಿçಯವಾಗಿ ತಯಾರಿಸಿದ ಅನೇಕ ಔಷಾಧಿಗಳಿಂದ ಮೂಳೆ ಸಂಬಂಧಿತ ಮಹಿಳೆಯರು ಹಾಗೂ ಪುರುಷರು ಆಸ್ತಿಕ್ಷಯ ಸಮಸ್ಯೆ, ಕ್ಯಾಲ್ಸಿಯಂ ಕೊರತೆ, ಮೊಣಕಾಲು, ಬೆನ್ನು, ಕತ್ತು, ಭುಜ ಮತ್ತು ಸೊಂಟ ನೋವು ಮೂಳೆ ದುರ್ಬಲತೆ .ವಯೋಸಹಜ ಮೂಳೆ ಕ್ಷೀಣತೆ, ಮೂಳೆ ಸವೆತ ಸಮಸ್ಯೆಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎನ್ನುವ ಕುರಿತು ಕೆ.ಪಿ.ಎಸ್.ವಿ.ಎಸ್. ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ಪಿ.ಹೆಚ್.ಡಿ. ಶೋಧನಾರ್ಥಿಗಳಾದ ಡಾ. ಶರಣಮ್ಮ ರವರು ಅನೇಕ ನೂತನ ಚಿಕಿತ್ಸ ವಿಧಾನಗಳ ಬಗ್ಗೆ ಅಧ್ಯಯನವನ್ನು ನಡೆಸುವುದಕ್ಕೆ ಕೆ.ಪಿ.ಎಸ್.ವಿ.ಎಸ್. ಆಯುರ್ವೇದ ಮೆಡಿಕಲ್ ಕಾಲೇಜ್ ಅವಕಾಶವನ್ನು ಕಲ್ಪಿಸುವ ಮೂಲಕ ಸಾರ್ವಜನಿಕರಿಗಾಗಿ ಉತ್ತಮ ಆರೋಗ್ಯವನ್ನು ಕಲ್ಪಿಸುವುದಕ್ಕೆ ಅವಕಾಶ ನೀಡಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಜೀವನೇಶ್ವರಯ್ಯ ಮಾತನಾಡಿ ಆರೋಗ್ಯವಂತ ಜೀವನಕ್ಕಾಗಿ ಆಯುರ್ವೇದ ಉತ್ತಮ ಮಾರ್ಗವಾಗಿದೆ ಆನಾರೋಗ್ಯಕಾರ ಆಹಾರ ವಿಹಾರದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಉತ್ತಮ ಆರೋಗ್ಯ ಪದ್ದತಿಯನ್ನು ಅಳವಡಿಸಿಕೊಳ್ಳುವ ಮೂಲಕ ತಡೆಯಬಹುದು ನಮ್ಮ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ವತಿಯಿಂದ ಇನ್ನೂ ಅನೇಕ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ಸಾರ್ವಜನಿಕರಿಗಾಗಿ ಉಚಿತ ಚಿಕಿತ್ಸೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪಿ.ಹೆಚ್.ಡಿ. ಶೋಧನಾರ್ಥಿಗಳಾದ ಡಾ. ಶರಣಮ್ಮರವರು ಶಿಬಿರದಲ್ಲಿ ರೋಗಿಗಳಿಗೆ ಉಚಿತ ಮೂಳೆ ಸಾಂದ್ರತೆ ತಪಾಸಣೆ ಹಾಗೂ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳ ತಪಾಸಣೆಯನ್ನು ಉಚಿತವಾಗಿ ನಡೆಸಿದರು. ವಾಸು ಹೆಲ್ತ್ ಕೇರೆ ಸಂಸ್ಥೆಯಿಂದ ಉಚಿತವಾಗಿ ಮೂಳೆ ಸಾಂದ್ರತೆ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಪ್ರಚಾರ್ಯರಾದ ಡಾ.ಸುಮಂಗಲ ಹೆಚ್.ಎಂ, ಡಾ.ಸುನಿತಾ, ಡಾ,ರಾಜೇಶ್ವರಿ,ಸೇರಿದಂತೆ ಕಾಲೇಜಿನ ವೈದ್ಯ ಉಪನ್ಯಾಸಕರು ಹಾಗೂ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಭಾಗವಹಿಸಿದರು.
