ಮಾನ್ವಿ: ಪಟ್ಟಣದ ಹಳೆ ತಾಲೂಕು ಪಂಚಾಯಿತಿ ಕಚೇರಿಯ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಸಿ.ಐ.ಟಿ.ಯು ಸಂಯೋಜಿತ ತಾಲೂಕು ಘಟಕ ವತಿಯಿಂದ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ನಡೆದ ಅನಿರ್ಧಿಷ್ಟಾವದಿ ಪ್ರತಿಭಟನೆ ಧರಣಿ ನಡೆಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾ.ಅಧ್ಯಕ್ಷರಾದ ಅಂಬಣ್ಣ ನಾಯಕ ಬ್ಯಾಗವಾಟ ಮಾತನಾಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಲವಾರು ತಿಂಗಳಿಂದ ವೇತನವನ್ನು ಬಾಕಿ ಉಳಿಸಿಕೊಂಡಿರುವುದರಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಜೀವನ ನಡೆಸುವುದಕ್ಕೆ ಕಷ್ಟವಾಗಿದೆ ಅದ್ದರಿಂದ ಕೂಡಲೇ ಬಾಕಿ ಉಳಿಸಿಕೊಂಡಿರುವ ವೇತನವನ್ನು ಶಿಘ್ರದಲ್ಲಿಯೇ ಪಾವತಿಸಬೇಕು. ಸರ್ಕಾರದ ಅದೇಶದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ 15 ನೇ ಹಣಕಾಸು ಅನುದಾನದಲ್ಲಿ ಪ್ರತಿ ತಿಂಗಳು 5 ನೇ ತಾರೀಖು ಒಳಗಾಗಿ ವೇತನವನ್ನು ಪಾವತಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸೇವಾ ಅವಧಿಯಲ್ಲಿ ಮರಣ ಹೊಂದಿದ ಸಿಬ್ಬಂದಿಯ ಕುಟುಂಬಸ್ಥರಲ್ಲಿ ನಿಯಾಮನುಸಾರ ಒಬ್ಬರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಗ್ರಾ.ಪಂ. ಗಳಿಂದಲೇ ಸಿಬ್ಬಂದಿಗಳಿಗೆ ಜೀವವಿಮೆ ವ್ಯವಸ್ಥೆ ಮಾಡಬೇಕು.ಪಿಂಚಣಿ ಹೊಂದಿದವರಿಗೆ ಉಪಧನ ನೀಡಬೇಕು ಗ್ರಾ.ಪಂ.ಗಳಲ್ಲಿ ನಿತ್ಯ ಧ್ವಜಾರೋಹಣ ಮಾಡುವ ಸಿಬ್ಬಂದಿಗಳಿಗೆ ಭತ್ಯ ನೀಡಬೇಕು.ಸಿಬ್ಬಂದಿಗಳ ಮೇಲೆ ದೂರು ಬಂದರು ಕೂಡ ವೇತನ ನಿಲ್ಲಿಸಬಾರದು ಎಂದು ಒತ್ತಾಯಿಸಿದರು.
ಗೌರವಾಧ್ಯಕ್ಷರಾದ ಹೆಚ್.ಶರ್ಫೂದ್ದೀನ್ ಪೋತ್ನಾಳ್, ಕಾರ್ಯಧ್ಯಕ್ಷರಾದ ಮಹಮ್ಮದ್ ನೀರಮಾನ್ವಿ, ಚಂದ್ರಶೇಖರ ಕಪಗಲ್,ಸುಭಾನ್, ಶಿವರಾಜಯ್ಯಸ್ವಾಮಿ, ಯಂಕೋಬನಾಯಕ,ಏಸುರಾಜ,ವೆಂಕಟಗಿರಿ, ವಿಜಯಕುಮಾರ,ಸಿದ್ದಲಿಂಗಯ್ಯಸ್ವಾಮಿ, ಶೇಖರಪ್ಪ , ಹನುಮಂತರೆಡ್ಡಿ,ಅಮರೇಶ , ಹುಚ್ಚಪ್ಪ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಪಂಚಾಯಿತಿಗಳ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *