ಮಸ್ಕಿ: ತಾಲೂಕಿನ ಮೆದಿಕಿನಾಳ ಮತ್ತು ತಲೇಖಾನ ಗ್ರಾ.ಪಂ ವ್ಯಾಪ್ತಿಯಲ್ಲಿ ಪವನ್ ವಿದ್ಯುತ್ ಶಕ್ತಿ ಪಂಕಗಳನ್ನು ತುಂಬಿಕೊAಡು ಓಡಾಡುತ್ತಿರುವ ಬಹುಗಾತ್ರದ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೆಗೌಡ ಬಣ) ದಿಂದ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದ್ದಾರೆ.
ನಂತರ ತಾಲೂಕಾಧ್ಯಕ್ಷ ಆರ್.ಕೆ.ನಾಯಕ ಮಾತನಾಡಿ, ಮೆದಿಕಿನಾಳ ಗ್ರಾಮದಿಂದ ತಲೇಖಾನ, ದೇಸಾಯಿ ಬೋಗಾಪೂರ, ಯರದೊಡ್ಡಿ, ಹೊಕ್ರಾಣಿ ಇನ್ನಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪವನ ವಿದ್ಯುತ ಶಕ್ತಿಗೆ ಸಂಬಂಧಪಟ್ಟ ಪಂಕಗಳ ಬಿಡಿ ಭಾಗಗಳನ್ನು ತುಂಬಿಕೊಂಡು ಟಾರಸ್ ಲಾರಿಗಳು ಮತ್ತು ಇದಕ್ಕೆ ಸಂಬಂಧಪಟ್ಟಂತೆ ಮರಂ ಹೊಡೆಯುವ ಟಿಪ್ಪರಗಳ ಹಾವಳಿಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಗಳ ಮದ್ಯದಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿವೆ. ಇದರಿಂದ ಗ್ರಾಮೀಣ ಭಾಗದ ರಸ್ತೆ ಹಾಳಾಗಿದ್ದು, ಜನ ಸಾಮಾನ್ಯರು, ಶಾಲಾ ಮಕ್ಕಳು ಓಡಾಡಲು ಸಮಸ್ಯೆಯಾಗಿದೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದದ್ದರಿಂದ ರಸ್ತೆ ಅಪಘಾತಗಳಾಗಿವೆ.
ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಕರೆದೊಯ್ಯಲು ಆ್ಯಂಬುಲೆನ್ಸ್ ಕೂಡ ಸಮಯಕ್ಕೆ ಸರಿಯಾಗಿ ಬರಲಾಗುತ್ತಿಲ್ಲ.
ರಸ್ತೆಗಳಲ್ಲಿ ಗುಂಡಿಗಳು ದೊಡ್ಡ ಪ್ರಮಾಣದಲ್ಲಿರುವ ಕಾರಣ ೩-೪ ದಿನಗಳಿಂದ ಸಾರಿಗೆ ಇಲಾಖೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದರಿಂದ ಸಾರ್ವಜನಿಕರಿಗೆ ಮತ್ತು ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಬಹುಗಾತ್ರ ವಾಹನಗಳನ್ನು ಮತ್ತು ಅಕ್ರಮ ಗಣಿಗಾರಿಕೆಯಲ್ಲಿ ತೋಡಗಿರುವ ಟಿಪ್ಪರ್ ಟಿಪ್ಪರ್ ಹಾವಳಿ ತಪ್ಪಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದೇವಣ್ಣ ನಾಯಕ, ಮಹಾಂತೇಶ ಭಜಂತ್ರಿ ತಲೇಖಾನ, ಯಂಕಣ್ಣ ನಾಯಕ ತಲೇಖಾನ, ಮೌನೇಶ ನಾಯಕ ನಗನೂರು, ಆನಂದ ಕುಮಾರ ಯರದೊಡ್ಡಿ, ಯಂಕಣ್ಣ ಯರದೊಡ್ಡಿ ಇದ್ದರು.

