ರಾಯಚೂರು ಫೆಬ್ರವರಿ 11 (ಕರ್ನಾಟಕ ವಾರ್ತೆ): ಇಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಡಾ.ಎ.ಪಿ.ಜೆ, ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಯ ದಿನಾಂಕವನ್ನು ಫೆ.28ರವರೆಗೆ ವಿಸ್ತರಿಸಲಾಗಿದೆ.
ಜಿಲ್ಲೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ರಾಯಚೂರು (ಬೋಳಮಾನದೊಡ್ಡಿ ರಸ್ತೆ), ಗಿಲ್ಲೇಸೂಗೂರು (ಚಂದ್ರಬಂಡ ರಸ್ತೆ), ಯರಮರಸ್ ಕ್ಯಾಂಪ್, ಗಿಲ್ಲೆಸುಗೂರು ಕ್ಯಾಂಪ್, ಮಾನವಿ, ಸಿಂಧನೂರು, ಚನ್ನಹಳ್ಳಿ, ಮಸ್ಕಿ, ಲಿಂಗಸೂಗೂರು, ಸಿರವಾರ, ದೇವದುರ್ಗ ಮತ್ತು ಡಾ.ಎ.ಪಿ.ಜೆ, ಅಬ್ದುಲ್ ಕಲಾಂ ವಸತಿ ಶಾಲೆ, ಯರಮರಸ್ ಕ್ಯಾಂಪ್ ರಾಯಚೂರಿನಲ್ಲಿ 6ನೇ ತರಗತಿಯಿಂದ 10ನೇ ತರಗತಿಯ ವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಅಲ್ಪಸಂಖ್ಯಾತರ ಸಮುದಾಯಕ್ಕೆ ಶೇ.75 ರಷ್ಟು ಸ್ಥಾನಗಳನ್ನು ಮತ್ತು ಶೇ.25 ರಷ್ಟು ಸ್ಥಾನಗಳನ್ನು ಇತರೆ ವರ್ಗದವರಿಗೆ ಮೀಸಲಿರಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳಿಗೆ ಆನ್‌ಲೈನ್ ಸೇವಾಸಿಂಧು: Website:https://sevasindhuservices.karnataka.gov.in ನಲ್ಲಿ ಫೆ.28ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಸಹಾಯವಾಣಿ ಸಂಖ್ಯೆ: 8277799990, 08022535902
ರಾಯಚೂರು: 8496098631, 9731028420, 9731341815, 9686853719, 6361866571, 9108175899, 9902906266 ಮಾನವಿ, ಸಿರವಾರ: 7411771075, 886733478, ದೇವದುರ್ಗ: 9731794252, 9148233616, ಲಿಂಗಸೂಗೂರು, ಮಸ್ಕಿ ಮತ್ತು ಸಿಂಧನೂರು: 8217621732, 9740871306, 8660879712ಗೆ ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *