ರಾಯಚೂರು ಫೆಬ್ರವರಿ 11 (ಕರ್ನಾಟಕ ವಾರ್ತೆ): ಇಲ್ಲಿನ ದೇವದಾಸಿ ಪುನರ್ವಸತಿ ಯೋಜನೆ ಕಚೇರಿಯಲ್ಲಿ 2025-26ನೇ ಸಾಲಿನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಯೋಜನಾಧಿಕಾರಿಗಳು 1 ಹುದ್ದೆಗೆ ಎಂಎಸ್‌ಡಬ್ಲ್ಯೂ, ಎಂಎ ಇನ್ ಸಮಾಜಶಾಸ್ತ್ರ, ಎಂಎ.ಎಂಎಸ್ಸಿ ಇನ್ ಮನಶ್ಶಾಸ್ತ್ರ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಕಡ್ಡಾಯ ಹೊಂದಿರಬೇಕು. ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ 65 ವರ್ಷ ವಯಸ್ಸು ಇರುವವರಿಗೆ ಅದ್ಯತೆ ನೀಡಲಾಗುವುದು.
ಮಾನವಿ ಹಾಗೂ ಲಿಂಗಸುಗೂರಿನಲ್ಲಿ ಯೋಜನಾ ಅನುಷ್ಠಾನಾಧಿಕಾರಿಗಳು 2 ಹುದ್ದೆಗೆ ಬಿಎಸ್‌ಡಬ್ಲ್ಯೂ/ಬಿಎ/ ಮನೋವಿಜ್ಞಾನ, ಎಂಎ/ಎಂಎಸ್ಸಿ ಇನ್ ಸಮಾಜಶಾಸ್ತ್ರ ಪದವಿ ಜೊತೆಗ ಕಂಪ್ಯೂಟರ್ ಜ್ಞಾನ ಕಡ್ಡಾಯ ಹೊಂದಿರಬೇಕು. ಸರ್ಕಾರದ ಅಧಿನ ಸಂಸ್ಥೆಗಳಲ್ಲಿ ಕನಿಷ್ಟ 3-4 ವರ್ಷಗಳ ಹೊಂದಿರುವವರಿಗೆ ಮತ್ತು ಮಾಜಿ ದೇವದಾಸಿ ಮಹಿಳೆಯರ ಮಕ್ಕಳಿಗೆ ಅದ್ಯತೆ ನೀಡಲಾಗುವುದು. ದಾಖಲಾಧಿಕಾರಿ 1 ಹುದ್ದೆಗೆ ಬಿಕಾಂ ಪದವಿ ಹಾಗೂ ತತ್ಸಮಾನ ಪದವಿ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಮತ್ತು ಕನ್ನಡ/ಇಂಗ್ಲಿಷ ಟೈಪಿಂಗ್ ಜ್ಞಾನ ಕಡ್ಡಾಯ ಹೊಂದಿರಬೇಕು. ಲೆಕ್ಕಿಗರು ಗುಮಾಸ್ತ 1 ಹುದ್ದೆಗೆ ದ್ವಿತಿಯ ಪಿಯುಸಿ ಅಥವಾ ತತ್ಸಮಾನ ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯ ಹೊಂದಿರಬೇಕು. ಸ್ವಯಂ ಸೇವಕಿಯರ 5 ಹುದ್ದೆಗೆ ಮಾಜಿ ದೇವದಾಸಿಯರನ್ನು/ ಕುಟುಂಬದವರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಕಚೇರಿ ಸಹಾಯಕ 1 ಹುದ್ದೆಗೆ ಏಳನೇ ತರಗತಿ ಉತ್ತಿರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಯೋಜನಾ ಅನುಷ್ಠಾನಾಧಿಕಾರಿಗಳು ಹುದ್ದೆಗಳನ್ನು ಅನುಭವ ಮತ್ತು ಕಾರ್ಯಕ್ಷಮತೆ ಆಧಾರದ ಮೇಲೆ ಜಿಲ್ಲಾ ಆಯ್ಕೆ ಸಮಿತಿ ಒಪ್ಪಿದಲ್ಲಿ ಹಾಗೂ ಈ ಹುದ್ದೆಗಳ ಅನುಸಾರ ಆಸಕ್ತರು ಅರ್ಜಿಗಳನ್ನು ಫೆ.21 ರೊಳಗಾಗಿ ಕಚೇರಿ ಸಮಯದಲ್ಲಿ ದ್ವಿಪ್ರತಿ ಮುಚ್ಚಳಿಕೆ ಲಕೋಟೆಯಲ್ಲಿ ಕಚೇರಿ ವಿಳಾಸ:ಯೋಜನಾಧಿಕಾರಿಗಳು ದೇವದಾಸಿ ಪುನರ್ವಸತಿ ಯೋಜನೆ ಮನೆ ಸಂಖ್ಯೆ: 1-5-166 ಸ್ಟಾರ್ ಫನ್ಶಕ್ಷನ್ ಹಾಲ್ ಎದುರಗಡೆ ಬಾಲಜಿ ಕಾಂಪ್ಲೇಕ್ಸ್ ಹತ್ತಿರ ಗುಡ್‌ಶಡ್ ಏರಿಯಾ ರಾಯಚೂರು ಇಲ್ಲಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ನಿರ್ವಾಹಕ ದೂರವಾಣಿ/ಮೊಬೈಲ್ ಸಂಖ್ಯೆ: 9980879540ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *