ರಾಯಚೂರು ನವೆಂಬರ್ 24 (ಕರ್ನಾಟಕ ವಾರ್ತೆ): ಲಿಂಗಸೂಗೂರು ತಾಲೂಕಿನ ಮುದಗಲ್‌ನ ಪಿ.ಎಂ. ಶ್ರೀ ಜವಾಹರ್ ನವೋದಯ ವಿದ್ಯಾಲಯದಿಂದ 2026–27ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ನಡೆಯುವ ಜೆಎನ್‌ವಿಎಸ್‌ಟಿ–2026 ಪ್ರವೇಶ ಪರೀಕ್ಷೆಯು 2026ರ ಡಿಸೆಂಬರ್ 13ರಂದು ನಡೆಯಲಿದೆ.
ಈ ಹಿನ್ನಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಅಧಿಕೃತ ಲಿಂಕ್‌ಗಳು https://cbseitms.rcil.gov.in/nvs/ , https://navodaya.gov.in/ ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಎಂ. ಮುನೇಂದ್ರ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *