ಸೋಲು ಎನ್ನುವುದು ಪ್ರಯತ್ನದ ಹಾದಿಯನ್ನು ಸೂಚಿಸುತ್ತದೆ ಆರಂಭಿಕ ಯಶಸ್ಸು ಸಿಕ್ಕಿದೆ ಎಂದು ಜಂಬ ಕೊಚ್ಚಿಕೊಳ್ಳುತ್ತ ಹೋದರೆ ಸೋಲು ಖಚಿತವಾಗಬಹುದು ಆದರೆ ಸೋಲನ್ನು ಸೋಲು ಎಂದು ಹೇಳಲಿಕ್ಕಾಗದು ಅದು ಪ್ರಯತ್ನದ ಹಾದಿ ಪ್ರಯತ್ನ ಮಾಡ್ತಾ ಇದೀನಿ ಎನ್ನುವುದನ್ನು ತೋರಿಸಿ ಕೊಡುವುದೇ ಸೋಲು.

ಸೋಲು ಜಗತ್ತಿನ ಸತ್ಯ ಸ್ಪರ್ಧಿಗಳು ಯಾವಾಗಲೂ ಇಬ್ಬರೂ ಗೆಲ್ಲುವುದಿಲ್ಲ ಒಬ್ಬರು ಮಾತ್ರ ಗೆಲ್ಲುತ್ತಾರೆ ಅದೇ ಗೆಲುವು.ಮತ್ತು ಅದನ್ನೇ ಯಶಸ್ಸು ಎನ್ನುವುದು .
ಅದು ಜಗತ್ತಿನ ಸತ್ಯ ಕೂಡಾ
ಆದರೆ ಯಶಸ್ಸನ್ನು ಎಲ್ಲರೂ ಕಾಣುವುದಿಲ್ಲ ಸತತವಾದ ಪ್ರಯತ್ನ ಯಾರು ಮಾಡುತ್ತಾರೋ ಅವರು ಮಾತ್ರ ಯಶಸ್ಸನ್ನು ಕಾಣಲಿಕ್ಕೆ ಸಾಧ್ಯ ಯಶಸ್ಸು ಎನ್ನುವುದು ಅದೃಷ್ಟವಲ್ಲ ಅದು ಸಾಧಿಸುವವನ ಸ್ವತ್ತು.

ಒಂದು ಹೊಸ ಅಂಗಡಿಯನ್ನು ಆರಂಭಿಸಿದಾಗ, ಒಂದು ಹೊಸ ಹೋಟೆಲ್ ನ್ನು ಆರಂಭಿಸಿದಾಗ ಅಂದು ಸಿಕ್ಕ ಯಶಸ್ಸು ಅದು ಜೀವನದ ಯಶಸ್ಸು ಆಗಲು ಸಾಧ್ಯವಿಲ್ಲ ಹೊಸ ಅಂಗಡಿ ಹೊಸ ಹೋಟೆಲ್ ಎಂದು ಜನ ಆಕರ್ಷಣೀಯವಾಗಿ ಬಂದಿರಬಹುದು ಆದರೆ ಅದನ್ನು ಯಶಸ್ಸು ಎನ್ನಲು ಸಾಧ್ಯವಿಲ್ಲ ಮೊದಲು ಬಂದ ಗಿರಾಕಿಯನ್ನು ಕೊನೆಯವರೆಗೂ ನಿನ್ನ ಗಿರಾಕಿಯನ್ನಾಗಿಯೇ ಉಳಿಸಿಕೊಳ್ಳಬೇಕು ಆಗ ಮಾತ್ರ ಅದನ್ನು ಯಶಸ್ಸು ಎಂದು ಕರೆಯಲು ಸಾಧ್ಯ ಆರಂಭದಲ್ಲಿ ಬಂದ ಗಿರಾಕಿ ಕೊನೆಯವರೆಗೂ ನಿನ್ನಲ್ಲಿ ಉಳಿಯಬೇಕಾದರೆ ಅದು ನೀನು ಮಾಡುವ ಪ್ರಯತ್ನದಿಂದ , ನಿನ್ನ ಜವಾಬ್ದಾರಿಯಿಂದ, ನಿನ್ನ ಪ್ರಾಮಾಣಿಕತೆಯಿಂದ ಮಾತ್ರ ಉಳಿಯಲು ಸಾಧ್ಯ ಆದುದರಿಂದ ಆರಂಭಿಕ ಯಶಸ್ಸನ್ನೇ ಸಾಧನೆ ಎನ್ನಲಿಕ್ಕಾಗುವುದಿಲ್ಲ ಆರಂಭಿಕ ಗಿರಾಕಿಯನ್ನು ಕೊನೆಯವರೆಗೂ ಉಳಿಸಿಕೊಳ್ಳುವುದೇ ಸಾಧನೆ ಆರಂಭಿಕ ಯಶಸ್ಸನ್ನೇ ನಂಬಿ ಕುಳಿತರೆ ಸೋಲು ಖಚಿತ.

ಒಂದೇ ದಿನಕ್ಕೆ, ಒಂದೇ ಬಾರಿಗೆ ಯಾವುದೇ ರೀತಿಯ ಸಾಧನೆ ಆಗಲು ಸಾಧ್ಯವಿಲ್ಲ ಸತತವಾದ ಪ್ರಾಮಾಣಿಕವಾದ ಪ್ರಯತ್ನ ಇರಬೇಕು ಇವತ್ತು ಮಾಡಿದ ಪ್ರಯತ್ನದಿಂದ ನನಗೆ ಗೆಲುವಾಗಲಿಲ್ಲ ಎಂದು ನೊಂದುಕೊಂಡರೆ ಪ್ರಯೋಜನವಿಲ್ಲ ಆದ್ದರಿಂದ ಸ್ವಾಮಿ ವಿವೇಕಾನಂದರು ಹೇಳಿದ್ದು “ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ” ಎಂದು.
ಒಂದು ಕಪ್ಪೆ ಬೈ ಚಾನ್ಸ್ ಮಜ್ಜಿಗೆಯ ಪಾತ್ರೆಯಲ್ಲಿ ಬೀಳುತ್ತದೆ ಬಿದ್ದ ಮೇಲೆ ಅಯ್ಯೋ ನಾನು ಇದರಲ್ಲಿ ಬಿದ್ದೆ ನನ್ನ ಜೀವನವೇ ಮುಗಿಯಿತು ಎಂದುಕೊಳ್ಳದೆ ಅದು ಏನಾದರೂ ಮಾಡಿ ನಾನು ಮೇಲೆ ಹೋಗಬೇಕು ಎಂದು ಪ್ರಯತ್ನ ಮಾಡುತ್ತದೆ ಅದಕ್ಕಾಗಿ ಅದು ಮಜ್ಜಿಗೆಯಲ್ಲಿ ಸುತ್ತುವರೆಯುತ್ತದೆ ಸುತ್ತುವರೆದು ಸುತ್ತುವರೆದು ಕೊನೆಗೆ ಮಜ್ಜಿಗೆಯ ಮೇಲೆ ಬೆಣ್ಣೆ ಬರುತ್ತದೆ ಆ ಬೆಣ್ಣೆಯ ಮೇಲೆ ಕುಳಿತು ಅದು ಮೇಲೆ ಹಾರಿ ಹೊರಬರುತ್ತದೆ ಹಾಗೆಯೇ ನಾವು ಕೂಡ ಯಾವುದೋ ಒಂದು ಕಷ್ಟದಲ್ಲಿ ಸಿಲುಕಿ ಯಾವುದೋ ಒಂದು ಸೋಲಿಗೆ ಹೆದರಿ ಕುಳಿತರೆ ಸಾಧನೆಯಾಗಲು ಸಾಧ್ಯವಿಲ್ಲ ಸತತವಾದ ಪ್ರಯತ್ನ ಮಾಡಬೇಕು ಅಂದಾಗ ಮಾತ್ರ ಗೆಲುವಾಗಲು ಸಾಧ್ಯ ಆರಂಭದಲ್ಲಿ ಯಶಸ್ಸು ಸಿಕ್ಕಿದೆ ಎಂದು ಮೈಮರೆತರೆ ಸೋಲು ಖಚಿತ ಆದ್ದರಿಂದ “ಸೋಲಿಗಿಂತಲೂ ಡೇಂಜರ್ ಆರಂಭಿಕ ಯಶಸ್ಸು” ಆದ್ದರಿಂದ ನಾವು ಯಾವಾಗಲೂ ಜಾಗೃತೆಯಿಂದ ಇದ್ದು ಸಾಧನೆಯಡೆಗೆ ಸಾಗಬೇಕು ಆಗ ಯಶಸ್ಸು ಕಾಣಲು ಸಾಧ್ಯ.

ಸುಭಾಸ ಹರ್ವಾಪೂರು ಬರಹಗಾರರು, ಪತ್ರಕರ್ತರು ಸಿಂಧನೂರು.

Leave a Reply

Your email address will not be published. Required fields are marked *