ರಾಯಚೂರು ಫೆಬ್ರವರಿ 09 (ಕರ್ನಾಟಕ ವಾರ್ತೆ): ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ ವ್ಯಾಪ್ತಿಯ ಬೀದರ, ಕಲಬುರಗಿ, ಯಾದಗಿರ, ಕೊಪ್ಪಳ, ವಿಜಯನಗರ, ಬಳ್ಳಾರಿ ಮತ್ತು ರಾಯಚೂರಿನಲ್ಲಿ ಕರ್ನಾಟಕ ರಾಜ್ಯದ ಸಂಘಗಳ ನೋಂದಣಿ ಕಾಯ್ದೆಯಡಿಯಲ್ಲಿ ನೋಂದಾಯಿಸಲಾದ ಸದಸ್ಯತ್ವ, ಅಂಗ ಸಂಸ್ಥೆಗಳ, ಸಂಘಗಳ ಅಡಿಯಲ್ಲಿ ನೋಂದಾಯಿಸಲ್ಪಟ ಟ್ರಸ್ಟ್ಗಳ ಸಂಯೋಜಿತ ಖಾಸಗಿ ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷ 2026-27ನೇ ಸಾಲಿನ ಕೃಷಿ ಮತ್ತು ಸಂಬAಧಿತ ಸ್ನಾತಕ ಪದವಿಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.
ಈ ಅರ್ಜಿ ನಮೂನೆಯನ್ನು ಮತ್ತು ಅರ್ಜಿಗೆ ಸಂಬAಧಿಸಿದ ಮಾರ್ಗಸೂಚಿ ಹಾಗೂ ಅರ್ಹತಾ ಮಾನದಂಡಗಳನ್ನು ವಿಶ್ವವಿದ್ಯಾಲಯದ ಅಂತರ್ಜಾಲ: www.uasraichur.karnataka.gov.in ನಲ್ಲಿ ದಿನಾಂಕ: 14-02-2026 ರಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಸಮಂಜಸ ದಾಖಲಾತಿ ಹಾಗೂ ಶುಲ್ಕಗಳೊಂದಿಗೆ ಕುಲಸಚಿವರು, ಕೃಷಿ ವಿಜ್ಞಾಗಳ ವಿಶ್ವವಿದ್ಯಾಲಯ, ಲಿಂಗಸೂಗುರ ರಸ್ತೆ, ರಾಯಚೂರು-584104 ಇವರ ಕಚೇರಿಗೆ ದಿನಾಂಕ: 10-03-2026ರ ಸಂಜೆ 5.ಗಂಟೆಯ ಒಳಗೆ ತಲುಪುವಂತೆ ಸಲ್ಲಿಸಬೇಕು. ಹಾಗೂ ಯಾವುದೇ ವಿಷಯಾದ ಮಾಹಿತಿಗಾಗಿ ಕುಲಸಚಿವರ ದೂರವಾಣಿ ಸಂಖ್ಯೆ: 08532-220157ಗೆ ಮತ್ತು ಮಿಂಚಾAಚೆ registrar.uasraichur.edu.in ಸಂಪರ್ಕಿಸಬಹುದಾಗಿದೆ ಎಂದು ಕುಲ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *