ರಾಯಚೂರು ಫೆಬ್ರವರಿ 09 (ಕರ್ನಾಟಕ ವಾರ್ತೆ): ಗ್ರಾಮೀಣ ಭಾಗದ ಉಪಕೇಂದ್ರ ಮಟ್ಟದಿಂದ ಮೇಲ್ಮಟ್ಟದ ಆಸ್ಪತ್ರೆಯ ಸೌಲಭ್ಯವನ್ನು ಜನರು ಪಡೆಯಲು ಕಲಾತಂಡಗಳು ಸ್ಥಳೀಯ ಆಡು ಭಾಷೆಯಲ್ಲಿ ಜಾಗೃತಿಯನ್ನು ಮೂಡಿಸಬೇಕು. ತಾಯಿ ಮಕ್ಕಳ ಆರೈಕೆ, ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ತಮ್ಮದೆ ಆದ ಕೊಡುಗೆ ನೀಡಬೇಕೆಂದರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ಅವರು ಹೇಳಿದರು.
ಇತ್ತಿಚೀಗೆ ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಶಿಕ್ಷಣ ಸಂವಹನ ವಿಭಾಗದಿಂದ ಆರೋಗ್ಯ ಅಭಿಯಾನದಡಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಜಾನಪದ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿಮ್ಮ ಆರೋಗ್ಯ-ನಮ್ಮ ಆಧ್ಯತೆ ಎಂಬ ಧ್ಯೆಯವಾಕ್ಯದೊಂದಿಗೆ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಯಿಮಕ್ಕಳ ಆಸ್ಪತ್ರೆ, ತಾಲೂಕು, ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ಮೂಲಕ ನುರಿತ ತಜ್ಞರು, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಮೂಲಕ ಉಚಿತವಾಗಿ ಸುರಕ್ಷಿತ ಹೆರಿಗೆ ಸೇವೆ, ರಕ್ತಹೀನತೆ ತಡೆ, ತಾಯಿ ಎದೆಹಾಲಿನ ಮಹತ್ವ, ಲಸಿಕೆಗಳು, ಹದಿಹರಿಯದವರ ಆರೋಗ್ಯ ಸಮಸ್ಯೆಗಳು, ಅಗತ್ಯವುಳ್ಳವರಿಗೆ ರಕ್ತ ಒದಗಿಸುವಿಕೆ, ಉಚಿತ ಕನ್ನಡಕ ವಿತರಣೆ, ಕಣ್ಣಿನ ಪೋರೆ ಶಸ್ತ್ರಚಿಕಿತ್ಸೆ, ದಂತಭಾಗ್ಯದಡಿ ಹಲ್ಲಿನ ಸೇಟ್ ಅಳವಡಿಕೆ, ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ, ಹೃದಯ ಆರೈಕೆಗಾಗಿ ಡಾ ಪುನೀತ್ ರಾಜಕುಮಾರ್ ಹೃದಯಜ್ಯೋತಿ ಯೋಜನೆ, ಕಿಡ್ನಿ ಆರೈಕೆಗೆ ಡಯಾಲಿಸಿಸ್ ಸೇವೆ ಮುಂತಾದವುಗಳನ್ನು ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಸೇವೆ ನೀಡಲಾಗುತ್ತಿದೆ.
ಬಾಲ್ಯವಿವಾಹ ತಡೆ, ಭ್ರೂಣ ಲಿಂಗಪತ್ತೆ ನಿಷೇಧ ಕಾಯ್ದೆಯಡಿ ದಂಡ ಜೈಲು ಶಿಕ್ಷೆ, ನಗುಮಗು, 108 ಆಂಬ್ಯುಲೆನ್ಸ್ ಸೇವೆ, ಸಮುದಾಯದಲ್ಲಿ ಕಂಡುಬರಬಹುದಾದ ಸಾಂಕ್ರಾಮಿಕ ರೋಗಗಳ ತಡೆಗೆ ಕ್ಷೀಪ್ರ ನಿಗಾವಣೆ, ಪರೀಕ್ಷೆ, ಕುಷ್ಟ ರೋಗ, ಕ್ಷಯರೋಗ, ಉಪಶಮನ ಆರೈಕೆ, ಆಪ್ತಸಮಾಲೋಚನೆ ಕುರಿತು ಜಾಗೃತಿ ನೀಡಲಾಗುತ್ತಿದ್ದು, ಉತ್ಸವದಲ್ಲಿ ಹಾಗೂ ನಂತರ ಆಯ್ದ ಗ್ರಾಮಗಳಲ್ಲಿ ಮುಖಾಮುಖಿ, ಸಮನ್ವಯ, ಶೃತಿ ಸಂಸ್ಕೃತಿ ಕಲಾ ತಂಡಗಳಿಂದ ನೀಡುವ ಜಾಗೃತಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಅಮೃತ್ ಹುಕ್ಕೇರಿ, ವ್ಶೆದ್ಯಾಧಿಕಾರಿಗಳಾದ ಡಾ.ರಾಕೇಶ್ ಕುಮಾರ್, ಡಾ.ಸತೀಶ್, ಡಾ.ಶ್ವೇತಾಂಬರಿ, ಡಿಹೆಚ್‌ಇಓ ಈಶ್ವರ ಹೆಚ್ ದಾಸಪ್ಪನವರ, ಡಿವೈಹೆಚ್‌ಇಓ ಬಸಯ್ಯ, ಶಿವಪ್ಪ, ಹಿರಿಯ ಹೆಚ್‌ಐಓ ಸುರೇಶ್, ಬಿಹೆಚ್‌ಇಓ, ಸರೋಜಾ ಕೆ, ನಾಗರಾಜ, ಬಾಲಪ್ಪ ನಾಯಕ, ಎಮ್‌ಟಿಎಸ್ ಸಚಿದ್ಯಾ ನಾಯಕ, ಪಿಹೆಚ್‌ಸಿಓ ಶಾರದಾ, ವನಿತಾ, ಮುಖಂಡರಾದ ಬಾಸ್ಕರ್ ರಾವ್, ಡಿಇಓ ಅಂಜು ವೆಂಕಟೇಶ್, ಆಶಾ ಕಾರ್ಯಕರ್ತೆಯರು ಮುಖಾಮುಖಿ ಕಲಾ ತಂಡದ ಕಲಾವಿದರು, ಸಾರ್ವಜನಿಕರು ಇದ್ದರು.



