ರಾಯಚೂರು: ಮುಂಬೈ-ಪುಣೆ ಬೆಂಗಳೂರು ಹೈಸ್ಪೀಡ್ ಬುಲೆಟ್ ರೈಲ್ವೆ ಕಾರಿಡಾರ್ ಯೋಜನೆ ಕಲ್ಯಾಣ ಕರ್ನಾಟಕ ರೈಲ್ವೆ ಮಾರ್ಗಗಳಲ್ಲಿ ಜಾರಿಯಾಗಲಿ ಎಂದು ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಡಾ. ಬಾಬುರಾವ್ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಬೆಂಗಳೂರು-ಪುಣೆ- ಮುಂಬೈ ಹೈಸ್ಪೀಡ್ ಬುಲೆಟ್
ರೈಲ್ವೆ ಕಾರಿಡಾರ್ ನ್ನು ಮಂಜೂರು ಮಾಡಬೇಕೆಂದು ನಾವು ಬಜೆಟ್ ಗೂ ಮುನ್ನ ರೈಲ್ವೆ ಸಚಿವರಿಗೂ ಹಾಗೂ ಪ್ರಧಾನಮಂತ್ರಿಗಳಿಗೂ ಮನವಿ ಮಾಡಿಕೊಂಡಿದ್ದೇವು ಎಂದು ನೆನಪಿಸಿಕೊಂಡಿರುವ ಅವರು, ನಮ್ಮ ಕಲ್ಯಾಣ ಕರ್ನಾಟಕ ಮಾರ್ಗವಾಗಿ ಈ ಯೋಜನೆ ಪ್ರಾರಂಭಿಸಿದರೆ, ಕರ್ನಾಟಕ, ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರ ನಾಲ್ಕು ರಾಜ್ಯಗಳಿಗೂ ಸಂಪರ್ಕ ಸಾಧಿಸಿದಂತಾಗುತ್ತದೆ ಮಾತ್ರವಲ್ಲ ಈ ಮಾರ್ಗವೂ ಆದಾಯವೂ ಭರಪೂರವಾಗಿರುವುದರಿಂದ ಈ ಯೋಜನೆಯನ್ನು ಕಲ್ಯಾಣ ಕರ್ನಾಟಕ ಮಾರ್ಗವಾಗಿ ಪ್ರಾರಂಭಿಸಬೇಕೆಂದು ಅವರು ಕೋರಿದ್ದಾರೆ.
2026-27ರ ಕೇಂದ್ರ ಬಜೆಟ್ ನಲ್ಲಿ ಬೆಂಗಳೂರು-ಪುಣೆ-ಮುಂಬೈ  ಮತ್ತು ಚೆನ್ನೈ-  ಬೆಂಗಳೂರು ನಡುವೆ ಹೈ-ಸ್ಪೀಡ್  ಬುಲೆಟ್
ರೈಲ್ವೆ ಕಾರಿಡಾರ್ ಗಳ ಮೇಲೆ ಗಮನ ಹರಿಸುವ ಮೂಲಕ ಕರ್ನಾಟಕಕ್ಕೆ ವಿಶೇಷ ಕೊಡುಗೆ ನೀಡಲಾಗಿದೆ. ಈ ಮೂಲಕ ಸಂಪರ್ಕದ ಜೊತೆ ವ್ಯಾಪಾರ ಹೆಚ್ಚಾಗಲಿದೆ. ಕೈಗಾರಿಕಾ ಮತ್ತು ತಂತ್ರಜ್ಞಾನ ಕೇಂದ್ರಗಳ ಬಲವರ್ಧನೆ ಬೆಳವಣಿಗೆ ಮತ್ತು ಹೊಸ ಉದ್ಯೋಗ ಗಳು ಸೃಷ್ಠಿಯಾಗಲಿವೆ. ಈ ಯೋಜನೆ ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಪ್ರಮುಖ ಆರ್ಥಿಕ ಕೇಂದ್ರಗಳೊಂದಿಗೆ ಸೇರಿಸಲಿದೆ. ಭಾರತದ ಅಭಿವೃದ್ಧಿಯನ್ನು ಬಲಪಡಿಸುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ 2026-27ರ ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಹೈದರಾಬಾದ್-ಬೆಂಗಳೂರು ಹೈಸ್ಫೀಡ್ ರೈಲ್ವೆ ಕಾರಿಡಾರ್ ನ್ನು ಕಲ್ಯಾಣ ಕರ್ನಾಟಕ ಮಾರ್ಗವಾಗಿ ಓಡಿಸಬೇಕೆಂದು  ಅವರು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *