ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಸಮನ್ವಯ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಸಂತೆಕಲ್ಲೂರು ಹಾಗೂ ಸಿಂಧನೂರು ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಇವರಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಸಿಂಧನೂರು ನಗರದ ಬಸ್ ನಿಲ್ದಾಣದಲ್ಲಿ ಜಾಗೃತಿ ಮೂಡಿಸುವ ಪ್ರಯುಕ್ತ ಬೀದಿ ನಾಟಕಗಳ ಪ್ರದರ್ಶನದ ಮೂಲಕ ಆರೋಗ್ಯದ ಕಾಳಜಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಅನೇಕ ರೋಗಗಳು ಹರಡುವುದು ತಡೆಗಟ್ಟುವುದು ಚಿಕಿತ್ಸೆ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಕಲಾಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ತಿಳಿಸಿ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ
ಡಾ.ಪುನೀತ ರಾಜಕುಮಾರ ಹೃದಯ ಜ್ಯೋತಿ ಯೋಜನೆ ಕುರಿತು ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಹೃದಘಾತಗಳಿಗೆ ಸಂಬಂಧಪಟ್ಟ ಚಿಕಿತ್ಸೆಯ ಕುರಿತು ಹೇಳಲಾಯಿತು.

ತಾಲೂಕು ಆರೋಗ್ಯ ಅಧಿಕಾರಿ ಗೀತಾ ಬಿಎಚ್ಇಒ ಮಾತನಾಡಿ, ಎಚ್ಐವಿ ಮತ್ತು ಏಡ್ಸ್ ಕುರಿತು ಗರ್ಭಿಣಿ, ಗಂಡಾಂತರ ಗರ್ಭಿಣಿಯರ ಬಗ್ಗೆ, ಕ್ಷಯ ರೋಗದ ಬಗ್ಗೆ ಸಾಂಕ್ರಾಮಿಕ ರೋಗ, ಹಾಗೂ ರಕ್ತ ಹೀನತೆಯ ಬಗ್ಗೆ ಚಿಕಿತ್ಸೆ ಪಡೆದುಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಮನ್ವಯ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಸಂತೆಕಲ್ಲೂರು ಕಲಾತಂಡದ ಮುಖ್ಯಸ್ಥರು ಉಮಾಪತಿ ಕನ್ನಾರಿ, ನಾಗಯ್ಯಸ್ವಾಮಿ, ಬೆಟ್ಟಪ್ಪ, ಬಸವರಾಜ, ನಿರುಪಾದಿ ನಾಯಕ, ವಿರೂಪಾಕ್ಷ, ಮಮತಮ್ಮ, ಗೌರಮ್ಮ, ಸರಸ್ವತಿ, ಅನುಪಮಾ, ಆಶಾ ಕಾರ್ಯಕರ್ತೆಯರು, ಬಸ್ ಡಿಪೋ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *