ಮಾನ್ವಿ : ಸ್ವಾಮಿ ವಿವೇಕಾನಂದರ ವಾಣಿಯಂತೆ ಹೇಳಿ ಎದ್ದೇಳಿ ನಿಮ್ಮ ಗುರಿ ಮುಟ್ಟುವವರೆಗೆ ನಿಲ್ಲಬೇಡಿ ಅನ್ನುವಂತೆ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಅಧ್ಯಯನ ಮಾಡುವುದರ ಜೊತೆ ನಿಮ್ಮ ಗುರಿ ಉತ್ತಮ ಫಲಿತಾಂಶ ಹಾಗೂ ಉತ್ತಮ ಜೀವನ ನಿರ್ಮಿಸಿ ಕೊಳ್ಳುವುದರ ಜೊತೆಗೆ ನಮ್ಮ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿ ಎಂದು ತಿಳಿಸಿದರು.ಪಟ್ಟಣದ ಶಾರದಾ ವಿದ್ಯಾನಿಕೇತನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಶಾರದಾ ಶಿಕ್ಷಣ ಸಂಸ್ಥೆ(ರಿ)ಯ ಕಾರ್ಯದರ್ಶಿಯಾದ ಕು.ಡಾ. ಹೈಂದವಿ ಮಧುಸೂದನ್ ಗುಪ್ತಾಜೀ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸರ್ಕಾರಿ ಪ್ರೌಢ ಶಾಲೆ ಮಲ್ಲದಗುಡ್ಡದ ಮುಖ್ಯೋಪಾಧ್ಯಾಯರಾದ ಶರಣಬಸಪ್ಪರವರು ಮಾತನಾಡಿ ಮಕ್ಕಳಿಗೆ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಹೇಗೆ ಪಡೆಯಬೇಕೆನ್ನುವುದರ ಬಗ್ಗೆ ತಿಳಿಸಿ ತಂದೆ ತಾಯಿಗಳಿಗೆ ಹಾಗೂ ಸಮಾಜಕ್ಕೆ ಉತ್ತಮ ಮಕ್ಕಳಾಗಿ ಬೆಳೆಯಿರಿ ಎಂದು ತಿಳಿಸಿದರು. ಇನ್ನೋರ್ವ ಅತಿಥಿಗಳಾದ ಡಾ. ಪರಮೇಶ್ವರಪ್ಪ ಗೋಪಶೆಟ್ಟಿ ರವರು ವಿದ್ಯಾರ್ಥಿಗಳು ಅಂಕಗಳನ್ನು ಗಳಿಸುವುದರ ಜೊತೆ ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕೂಡ ಹೆಚ್ಚು ಹೊತ್ತು ಕೊಟ್ಟು ಓದುವುದರ ಜೊತೆಗೆ ಕಾಲೇಜಿನ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳಿ ಎಂದು ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ವೀರಭದ್ರಯ್ಯ ಸ್ವಾಮಿ ಹಿರೇಮಠ ರವರು ವಹಿಸಿಕೊಂಡು.ಬಿ. ಮಧುಸೂದನ್ ಗುಪ್ತಜಿಯವರ ಬೆಳೆಸಿದ ಈ ಸಂಸ್ಥೆಗೆ ನಿಮ್ಮ ಫಲಿತಾಂಶವೇ ಕಾಲೇಜಿನ ಪ್ರತಿಫಲ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯಸ್ಥರಾದ ಬಿ.ಕಿಶೋರ್ ಕುಮಾರ್ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಬಿ ಉಮಾ ಮಹೇಶ್ವರಿ ಮಧುಸೂದನ್ ಗುಪ್ತಾಜಿ ಬಿ. ಮಂಜುಳಾ ಕಿಶೋರ್ ಕುಮಾರ್ ಹಾಗೂ ಉಪನ್ಯಾಸಕರಾದ ಬಂದೇನವಾಜ್ ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನು ನುಡಿದರು. ಸುರೇಂದ್ರರವರು ಕಾರ್ಯಕ್ರಮದ ಕುರಿತು ಮಾತನಾಡಿದರು ಕಾರ್ಯಕ್ರಮವನ್ನು ಪ್ರಿಯಾಂಕ ನಿರೂಪಿಸಿದರು. ಅಶ್ವಿನಿ ಸ್ವಾಗತಿಸಿದರು.ಹುಲಿಗೆಮ್ಮ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

