ಬಳ್ಳಾರಿಯ ಶ್ರಿ ಗುರುತಿಪ್ಪೇರುದ್ರ ಪದವಿ ಕಾಲೇಜಿನ ಎನ್‍ಎಸ್‍ಎಸ್‍ನ ‘ಎ’ ಮತ್ತು ‘ಬಿ’ ಘಟಕವು ಗುಜರಾತ್‍ನ ಶ್ರೀಮದ್ ರಾಮಚಂದ್ರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಜಿಲ್ಲಾ ಪಂಚಾಯತಿ, ಆರೋಗ್ಯ ಮತ್ತು ಶಿಕ್ಷಣ ಇಲಾಖೆ, ಗ್ರಾಮೀಣ ಅಭಿವೃದ್ದಿ ಸಂಸ್ಥೆ, ಸ್ಪಂದನ ಸ್ವಯಂ ಸೇವಾ ಸಂಸ್ಥೆ, ಶ್ರೀ ಮಾತೃ ಮಹಿಳಾ ಮಂಡಳಿ ಬಳ್ಳಾರಿ ಇವರ ಜಂಟಿ ಆಶ್ರಯದಲ್ಲಿ ಆರೋಗ್ಯ ತಪಾಸಣ ಶಿಬಿರ ಮತ್ತು ರಕ್ತ ಪರಿಶೀಲನೆ ಹಾಗು ಅನೀಮಿಯಾ ತಡೆ ಜಾಗೃತಿ ಶಿಬಿರ ನಡೆಯಿತು.
ಶ್ರಿ ಗುರುತಿಪ್ಪೇರುದ್ರ ಪದವಿ ಶಾಲೆಯ ಮಕ್ಕಳಿಗೆ, ಶಿಕ್ಷಕರುಗಳಿಗೆ ಮತ್ತು ಪದವಿ ಉಪನ್ಯಾಸಕರುಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. 950 ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ಮತ್ತು ರಕ್ತಪರೀಕ್ಷೆಗೆ ಒಳಪಟ್ಟರು.
ಶ್ರಿ ಗುರುತಿಪ್ಪೇರುದ್ರ ಪದವಿ ಕಾಲೇಜಿನ ಎನ್‍ಎಸ್‍ಎಸ್ ‘ಎ’ ಘಟಕದ ಕಾರ್ಯಕ್ರಮಾಧಿಕಾರಿ ಪಿ.ವಿ. ನಾಗರಾಜ ಹಾಗು ‘ಬಿ’ ಘಟಕದ ಕಾರ್ಯಕ್ರಮಾಧಿಕಾರಿ ಜಿ. ಶಶಿಧರ, ಶ್ರೀಮಾತೃ ಮಹಿಳಾ ಮಂಡಳಿ ಬಳ್ಳಾರಿಯ ತಪಾಸಣಾ ಅಧಿಕಾರಿಗಳಾದ ಚಂದ್ರಶೇಖರ್, ಹರೀಶ್ ಮತ್ತು ಸುರೇಶ್ ನೇತೃತ್ವವಹಿಸಿದ್ದರು.
ಶ್ರಿ ಗುರುತಿಪ್ಪೇರುದ್ರ ಮಹಾವಿದ್ಯಾಲಯ ಸಂಸ್ಥೆಯ ಅಧ್ಯಕ್ಷರಾದ ಎಸ್.ಎನ್. ರುದ್ರಪ್ಪ, ಕಾರ್ಯದರ್ಶಿಗಳಾದ ಜಿ. ನಾಗರಾಜ್, ಪ್ರಾಚಾರ್ಯರಾದ ಆರ್. ರೀನಾ, ಶಾಲಾ ನಿರ್ದೇಶಕಿಯರಾದ ಜಿ. ಮಂಜುಳ ಅವರು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

