ರಾಯಚೂರು ಫೆಬ್ರವರಿ 05 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ವೇದಿಕೆಯಲ್ಲಿ ಫೆ.07ರಂದು ಚಿತ್ರಕಲಾ ಉತ್ಸವ ನಡೆಯಲಿದೆ.
ಚಿತ್ರಕಲಾ ಉತ್ಸವದಲ್ಲಿ ಹಿರಿಯ ಚಿತ್ರ ಕಲಾವಿದರಾದ ಪಿ.ಎ.ಬಿ.ಈಶ್ವರ, ರಾಮಣ್ಣ ಮ್ಯಾದಾರ್, ಚಿತ್ರಕಲಾ ಶಿಕ್ಷಕರಾದ ಸುಭಾಷ, ಕೆ.ಮಲ್ಲಿಕಾರ್ಜುನ, ಪಿ.ಎನ್.ಕುಮಾರ, ಚಿತ್ರ ಕಲಾವಿದರಾದ ಮಲ್ಲಿಕಾರ್ಜುನ್ ಆಲುರ್, ಗೋಪಿ ಸಿ.ಹೆಚ್, ಅಮರೇಶ ಬಾಳಪ್ಪ, ಸುರೇಶ ಕೆ. ಅವರು ಭಾಗಿಯಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

