ರಾಯಚೂರು ಫೆಬ್ರವರಿ 05 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಫೆಬ್ರವರಿ 07ರಂದು ಮಧ್ಯಾಹ್ನ 2.30ರಿಂದ 4ರವರೆಗೆ ನಗರದ ಜಿಲ್ಲಾ ಕಾರಾಗೃಹ ಹತ್ತಿರದ ಮಹಿಳಾ ಸಮಾಜ ಆವರಣದಲ್ಲಿ ದಾಸ ಸಾಹಿತ್ಯ ಗೋಷ್ಠಿ ನಡೆಯಲಿದೆ.
ಡಾ.ರವೀಂದ್ರ ಕುಷ್ಟಗಿ ಅವರು ಉದ್ಘಾಟನೆ ನೆರವೇರಿಸುವರು.
ಹರಿದಾಸ ಚಿಂತಕರು ಹಾಗೂ ದಾಸ ಸಾಹಿತ್ಯದ ಚಲನಚಿತ್ರ ನಿರ್ಮಾಪಕರಾದ ಡಾ. ತ್ರಿವಿಕ್ರಮ ಜೋಶಿ ಅವರು ಅಧ್ಯಕ್ಷತೆ ವಹಿಸುವರು.
ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಅಧಿಕಾರಿ ಸಿದ್ಧಾರ್ಥ ಭಾವಿಕಟ್ಟೆ, ದೇವದುರ್ಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಚ್.ಶಿವರಾಜ ಅವರು ಗೌರವ ಉಪಸ್ಥಿತಿ ವಹಿಸುವರು.
ದಾಸ ಸಾಹಿತ್ಯ ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಹರಿದಾಸರ ಕೊಡುಗೆ ಕುರಿತು ಕಲ್ಲೂರಕರ ನಿವೃತ್ತ ಪ್ರಾಚಾರ್ಯರು ಹಾಗೂ ಸಾಹಿತಿಗಳಾದ ಡಾ.ರಾಜಶ್ರೀ ಅವರು ಉಪನ್ಯಾಸ ನೀಡುವರು.
ದಾಸ ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯಗಳು ಮತ್ತು ಪ್ರಸ್ತುತತೆ ಕುರಿತು ಹಿರಿಯ ಸಾಹಿತಿಗಳಾದ ಡಾ.ರೇಣುಕಾ ಎಂ.ಸ್ವಾಮಿ ಅವರು ಉಪನ್ಯಾಸ ನೀಡುವರು.
ದಾಸ ಸಾಹಿತ್ಯದ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಕುರಿತು ಹಿರಿಯ ಲೇಖಕಿ ಡಾ.ಮಧುಮತಿ ದೇಶಪಾಂಡೆ ಅವರು ಉಪನ್ಯಾಸ ನೀಡುವರು.
ರಾಯಚೂರು ಜಿಲ್ಲೆಯ ಹರಿದಾಸರು ಕುರಿತು ರಾಯಚೂರಿನ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ.ವಸುಂಧರಾ ಪಾಟೀಲ ಅವರು ಉಪನ್ಯಾಸ ನೀಡುವರು.
ಮುರಳೀಧರ ಕುಲಕರ್ಣಿ ಅವರು ನಿರೂಪಣೆ, ಶ್ರೀನಿವಾಸ ಗಟ್ಟು ಅವರು ಸ್ವಾಗತ ಹಾಗೂ ಜೆ.ಎಂ.ವಿರೇಶ್ ಅವರು ವಂದನಾರ್ಪಣೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *