ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ್ ಪ್ರಾಥಮಿಕ ಆರೋಗ್ಯ ಕೇಂದ್ರ ರಾಗಲಪರ್ವಿ ಇವರ ಸಂಯುಕ್ತ ಆಶ್ರಯದಲ್ಲಿ ಬುದ್ದಿನ್ನಿ ಗ್ರಾಮದಲ್ಲಿ ರಾಷ್ಟ್ರೀಯ ಫ್ಲೋರೋಸಿಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಫ್ಲೋರೊಸಿಸ್ ಜಾಗೃತಿ ಕಾರ್ಯಕ್ರಮ ಹಾಗೂ ಪ್ಲೋರೋಸಿಸ್ ಉಚಿತ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದು ಮತ್ತು ಸಾರ್ವಜನಿಕರಿಗೆ ಆರೋಗ್ಯವನ್ನು ತಪಾಸಣೆ ಮಾಡಲಾಯಿತು . ಫ್ಲೋರೋಸಿಸ್ ಎಂದರೆ ಇದೊಂದು ದೀರ್ಘಕಾಲಿಕ ಕಾಯಿಲೆಯಾಗಿದ್ದು ಇದು ಚಯಪಚಯ ಕಾಯಿಲೆಯಾಗಿದ್ದು ಇದು ಅಂತರಜಲ ಫ್ಲೋರೇಡ್ ಅಂಶ ಜಾಸ್ತಿ ಇರುವ ನೀರು ಕುಡಿಯುವ ಮೂಲಕ ಬರುವ ಕಾಯಿಲೆಯಾಗಿದೆ ಎಂದು ಡಾ. ಶ್ವೇತಾಂಬರಿ ಆಯುಷ್ ವೈದ್ಯಾಧಿಕಾರಿಗಳು ಮಾತನಾಡಿದರು. ನಂತರ ಗುರುಪ್ರಸಾದ್ ಫ್ಲೋರೋಸಿಸ್ ರಾಯಚೂರು ಇವರು ಮಾತನಾಡಿ ಫ್ಲೋರೋಸಿಸ್ ತಡೆ ಹಾಗೂ ಲಕ್ಷಣಗಳು ನಿಯಂತ್ರಣದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು ನಂತರ ಡಾ. ಅಪ್ರೋಜಾ ಬಾನು ದಂತ ವೈದ್ಯರು ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೆರ ಇವರು ಮಾತನಾಡಿ ಮಕ್ಕಳಲ್ಲಿ ದಂತ ಪ್ಲೊರೋಸಿಸ್ ಬರುವುದು ಹೆಚ್ಚು ಸರ್ವಸಾಮಾನ್ಯ ನೀರು ಕುಡಿಯುವ, ಅನೇಕ ರೀತಿಯ ಪಾನೀಯ ಕುಡಿಯುದು, ಜಂಕ್ ಫುಡ್ ಸೇವನೆ ಮೂಲಕ ಆಹಾರ ಪದ್ಧತಿ ಬದಲಾವಣೆ ಮತ್ತು ಪೇಸ್ಟ್ ಬಳಸುವುದು ಕಡಿಮೆ ಮಾಡಿದಾಗ ಇದನ್ನು ತಡೆಯುವ ಸಾಧ್ಯತೆ ಇರುತ್ತದೆ ಎಂದರು ತದನಂತರ ಗೀತಾ ಹಿರೇಮಠ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರು ಮಾತನಾಡಿ ಫ್ಲೋರೋಸಿಸ್ ಅಲ್ಲಿ ಮೂರು ತರದ ಕಾಯಿಲೆಗಳು ದಂತ ಫ್ಲೋರೋಸಿಸ್ ಮೂಳೆ ಫ್ಲೋರೋಸಿಸ್ ಬರುವುದು ಇದನ್ನು ತಡೆಯುವುದು ಎ ಅನ್ನಂಗ ಸಿ ಅನ್ನಂಗ ಪೋಷಕಾಂಶಗಳಿರುವ ಆಹಾರವು ಸೇವನೆಯನ್ನು ಮಾಡುವುದು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಸರಿಯಾದ ಕ್ರಮವಾಗಿದೆ ಎಂದು ಹೇಳಿದರು ಸ್ಪರ್ಶ್ ಕುಷ್ಟರೊಗ ಜಾಗೃತಿ ಅಭಿಯಾನ, ರಾಯಚೂರು ಉತ್ಸವ ದ ಕುರಿತು ಹೇಳಲಾಯಿತು,ಸದರಿ ಕಾರ್ಯಕ್ರಮದಲ್ಲಿ, ಶಿವಪ್ಪ ಪಂಚಾಯತ್ ಸದಸ್ಯರು, ಗಂಗಾಧರ್ ಎಲ್ ಟಿ ಓ,ರಾಯಚೂರ್, ಸಿ,ಎಚ್,ಒ ಅಧಿಕಾರಿಗಳಾದ ರಾಜಕುಮಾರ ಹಾಗೂ ಜಯ, ಪಕೀರಚಂದ್ ಸೀನಿಯರ್ ಎಚ್ ಐ ಓ, ಶರಣಮ್ಮ ಎಚ್ಐಒ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಗಂಗಮ್ಮ ಅಂಬಮ್ಮ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು ಅಂಗನವಾಡಿ ಸಹಾಯಕಿ, ಹಿರಿಯ ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *