ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿ0ಗ್ ಕಾಲೇಜಿನನಾಲ್ಕು ವಿದ್ಯಾರ್ಥಿಗಳು 2024-25ನೇ ಶೈಕ್ಷಣಿಕ ವರ್ಷದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ರಾಜ್ಯ ಮಟ್ಟದಲ್ಲಿ ರ‍್ಯಾಂಕ್‌ಗಳನ್ನು ಪಡೆದಿದ್ದಾರೆ.ರಾಹುಲ್ ಡೇವಿಡ್ ಬಿ, ಎಂ.ಟೆಕ್. ಪ್ರೊಡಕ್ಷನ್ ಮ್ಯಾನೇಜ್ಮೆಂಟ್ ನಲ್ಲಿ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕವನ್ನು ಪಡೆದಿದ್ದಾರೆ. ಎಂ.ಟೆಕ್ ಮೆಕ್ಯಾನಿಕಲ್ ಎಂಜಿನಿಯರಿ0ಗ್ ನಲ್ಲಿ ರ‍್ಯಾಂಕ್ ಪಡೆದವರಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ್ದಕ್ಕಾಗಿ ಅವರು ಜೈನ್ ವಿಶ್ವವಿದ್ಯಾಲಯ ಪ್ರಯೋಜಿತ ಚಿನ್ನದ ಪದಕವನ್ನು ಕೂಡ ಪಡೆದಿದ್ದಾರೆ.
ಬಲರಾಜ್ ಎಲ್.ಡಿ, ಎಂ.ಟೆಕ್. ಪ್ರೊಡಕ್ಷನ್ ಮ್ಯಾನೇಜ್ಮೆಂಟ್‌ನಲ್ಲಿ ಎರಡನೇ ರ‍್ಯಾಂಕ್, ನಿತ್ಯ ಸಂತೋಷಿ ಎಚ್, ಎಂ.ಟೆಕ್. ವಿ.ಎಲ್.ಎಸ್.ಐ ಡಿಜೈನ್ ಆಯಂಡ್ ಎಂಬೆಡೆಡ್ ಸಿಸ್ಟಮ್ ನಲ್ಲಿ ಮೂರನೇ ರ‍್ಯಾಂಕ್ ಮತ್ತು ಸುಮಲತಾ, ಎಂ.ಟೆಕ್. ವಿ.ಎಲ್.ಎಸ್.ಐ ಡಿಜೈನ್ ಆಯಂಡ್ ಎಂಬೆಡೆಡ್ ಸಿಸ್ಟಮ್ ನಲ್ಲ್ಲಿ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ.

