ಮಸ್ಕಿ : ಬಸವಣ್ಣ, ಗಾಂಧಿಜೀಯವರ ತತ್ವಗಳಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಪ್ರತಿ ನಾಗರಿಕನ ಹೊಣೆ- ಮನೋಹರ ಮಸ್ಕಿ
ಸಂಕೋಚಿತ ಜಾತಿ ಮನೋಭಾವದಿಂದ ಹೊರ ಬರಬೇಕಾಗಿದೆ” ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮನೋಹರ ಮಸ್ಕಿ ಅಭಿಪ್ರಾಯಪಟ್ಟರು.
ಮಸ್ಕಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಡಾ. ಎಂ. ಬಸವರಾಜ ಅವರ ಮನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀಶೈಲಪ್ಪ ಹಾಗೂ ಈರಮ್ಮ ಮಸ್ಕಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣರು ಮತ್ತು ದಾರ್ಶನಿಕರು ಸಾರಿದ ಸಮಾನತೆ–ಸೌಹಾರ್ದದ ಸಂದೇಶವನ್ನು ಇಂದಿನ ಸಮಾಜ ವಿಸ್ಮರಿಸುತ್ತಿರುವುದನ್ನು ವಿಷಾದಿಸಿದರು.
ಬಸವಣ್ಣ, ಗಾಂಧಿಜಿಗಳ ತತ್ವಗಳಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಪ್ರತಿ ನಾಗರಿಕನ ಹೊಣೆ. ಶರಣರು ಬೋಧಿಸಿದ ಮಾನವೀಯ ಮೌಲ್ಯಗಳನ್ನು ಜಾತಿ, ವರ್ಣದ ಚೌಕಟ್ಟಿನಲ್ಲಿ ಸಿಮಿತಗೊಳಿಸುವುದು ದೊಡ್ಡ ತಪ್ಪು” ಎಂದು ಮನೋಹರ ಮಸ್ಕಿ ಹೇಳಿದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅಡ್ವೊಕೇಟ್ ನಾಗರಾಜ ಮಸ್ಕಿ ಮಾತನಾಡಿ, ಸುತ್ತೂರಿನ ದೇಶಿಕೇಂದ್ರ ಸ್ವಾಮೀಜಿಗಳು ಆರಂಭಿಸಿದ ಶರಣ ಸಾಹಿತ್ಯ ಪರಿಷತ್ತು ಇಂದು ದೇಶ–ವಿದೇಶಗಳಲ್ಲಿ ಶರಣರ ವಿಶಾಲ ವಿಚಾರಧಾರೆಯನ್ನು ಪ್ರಚಾರ ಪಡಿಸುತ್ತಿದೆ ಎಂದು ವಿವರಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ವೀರೇಶ ಸೌದ್ರಿ ಮಾತನಾಡಿದರು. V ಮಹಾಮನೆ ಸಮಿತಿ ಅಧ್ಯಕ್ಷ ದುರಗಪ್ಪ ಮಾಸ್ತರ್, ಗುತ್ತಿಗೆದಾರ ಎಂ. ಪ್ರಭುದೇವ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ವಕೀಲ ಕೀರಣ ಪಿ. ಪ್ರಾರ್ಥನೆ ಸಲ್ಲಿಸಿ, ಮೊಹಿತ್ ಮಸ್ಕಿ ಸ್ವಾಗತಿಸಿದರು.

