ಮಾನ್ವಿ: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢ ಶಾಲೆಯಲ್ಲಿ ತಾಲೂಕ ಕಾನೂನು ಸೇವಾ ಸಮಿತಿ ಮಾನ್ವಿ ಹಾಗೂ ತಾಲೂಕ ನ್ಯಾಯವಾದಿಗಳ ಸಂಘ ಮಾನ್ವಿ ಮತ್ತು ಶಿಕ್ಷಣ ಇಲಾಖೆ ಮಾನ್ವಿ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಹಾಗೂ ಮಕ್ಕಳ ಹಕ್ಕುಗಳು,ಬಾಲ್ಯ ವಿವಾಹ ಮತ್ತು ಮಕ್ಕಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಆನಂದ್ ಎಚ್ .ಕೊಣ್ಣೂರು ಮಾತನಾಡಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹಾಗೂ ಸುರಕ್ಷತೆಗಾಗಿ ವಿಶೇಷ ಕಾನೂನು ಗಳಿದ್ದು, ಮಕ್ಕಳು ತಮಗೆ ಆಗುತ್ತಿರುವ ಅನ್ಯಾಯಗಳಿಗೆ ಕಾನೂನು ಅಡಿಯಲ್ಲಿ ನ್ಯಾಯವನ್ನು ಪಡೆದುಕೊಳ್ಳಬಹುದಾಗಿದೆ . ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪೋಕ್ಸೋ ಕಾಯ್ದೆ ಜಾರಿ ಮಾಡಲಾಗಿದೆ. ಮಕ್ಕಳು ತಮ್ಮ ಸಮಸ್ಯೆಗಳನ್ನು ಮಕ್ಕಳ ಹಕ್ಕುಗಳ ರಕ್ಷಣ ಆಯೋಗ, ತಾಲೂಕ ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆಗೆ,ಶಿಶುಅಭಿವೃದ್ದಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ನ್ಯಾಯವನ್ನು ಪಡೆಯಬಹುದು ಗುಪ್ತ ವಿಚಾರಣೆ ನಡೆಸಿ ಆರೋಪಿಗೆ ಶಿಕ್ಷೆ ನೀಡಲಾಗುತ್ತದೆ. ದೂರುದಾರರ ಹೆಸರು ಬಹಿರಂಗ ಪಡೆಸುವುದಿಲ್ಲ. ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾದಿಂದ ಜಾಗರುಕರಾಗಿ ಕಲಿಕೆಗೆ ಹೆಚ್ಚು ಅದ್ಯತೆ ನೀಡಬೇಕು ಎಂದು ತಿಳಿಸಿದರು.
ನ್ಯಾಯವಾದಿಗಳಾದ ಶ್ರೀದೇವಿ ಶರಣ ಪಾಟೀಲ್ ಮಕ್ಕಳ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಹಾಯಕ ಸರ್ಕಾರಿ ಅಭಿಯೋಜಕಿ ಅರ್ಚನಾ ಯಾದವ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ದಮನಿ. ಉಪ ಪ್ರಚಾರ್ಯರಾದ ಸಂಜೀವ್ ಸುಧಾಕರ್,ಹಿರಿಯ ವಕೀಲರಾದ ಸ್ಟೆಲ್ಲಾ ಶಾರ್ಲೇಟ್ ಮತ್ತು ಗುಂಡಮ್ಮ ಮೇಟಿ , ಚನ್ನಬಸವ ನಾಯಕ್ ಬಲ್ಲಟಗಿ, ಮನೋಹರ ವಿಶ್ವಕರ್ಮ, ದತ್ತಾತ್ರೇಯ ಕೊಟ್ನೆಕಲ್‌ಸೇರಿದಂತೆ ಶಾಲೆಯ ಉಪನ್ಯಾಸಕರು, ವಿದ್ಯಾರ್ಥಿಗಳು, ಇದ್ದರು.
ಮಾನ್ವಿ: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢ ಶಾಲೆಯಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಆನಂದ್ ಎಚ್ .ಕೊಣ್ಣೂರು ಉದ್ಘಾಟಿಸಿದರು

Leave a Reply

Your email address will not be published. Required fields are marked *