ಮಸ್ಕಿ: ಬಿಡಾಡಿ ದನಗಳು ರೈತರ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿರುವದರಿಂದ ಬೇಸತ್ತ ರೈತರು ಬಿಡಾಡಿ ದನಗಳನ್ನು ಗೋ-ಶಾಲೆಗಳಲ್ಲಿ ಬಿಡಬೇಕೆಂದು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ರೈತ ಹಿತರಕ್ಷಣಾ ಹೋರಾಟ ಸಮಿತಿಯಿಂದ ಶುಕ್ರವಾರ ಮನವಿ ಪತ್ರಸಲ್ಲಿಸುವ ಮೂಲಕ ಆಗ್ರಹಿಸಿದರು.
ನಂತರ ಹೋರಾಟ ಸಮಿತಿಯ ಮುಖಂಡ ನಾಗರಡ್ಡೆಪ್ಪ ಬುದ್ದಿನ್ನಿ ಮಾತನಾಡಿ ತಾಲೂಕಿನ ಬುದ್ದಿನ್ನಿ ಎಸ್, ಸಾನಬಾಳ, ಹೂವಿನಭಾವಿ, ಮುದಬಾಳ, ಅಂಕುಶದೊಡ್ಡಿ, ಕಾಟಗಲ್, ವೆಂಕಟಾಪುರ ಮತ್ತು ಮಸ್ಕಿ ಸೀಮಾ ವ್ಯಾಪ್ತಿಯ ಹತ್ತಾರು ಹಳ್ಳಿಗಳ ರೈತರ ಹೊಲಗಳಿಗೆ ನೂರಾರು ಬಿಡಾಡಿ ದನಗಳು ಹಿಂಡು ಹಿಂಡಾಗಿ ನುಗ್ಗಿ, ಬೆಳೆಯನ್ನು ತಿಂದು ಹಾಕುತ್ತಿರುವುದಲ್ಲದೇ, ತುಳಿದು ಬೆಳೆ ನಾಶ ಮಾಡುವುದರ ಜತೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತರ ಮೇಲೂ ದಾಳಿ ಮಾಡುತ್ತಿವೆ. ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಹೊಲಗಳಿಗೆ ಹೋಗಲು ರೈತರು, ಮಹಿಳೆಯರು, ಕೃಷಿ ಕೂಲಿ ಕಾರ್ಮಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದರಿಂದ 15 ದಿನಗಳ ಒಳಗಾಗಿ ಈ ಬೀಡಾಡಿ ದನಗಳನ್ನು ಸ್ಥಳಾಂತರಿಸಬೇಕು. ಇಲ್ಲದೇ ಹೋದಲ್ಲಿ ಮಸ್ಕಿ ತಹಸಿಲ್ ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾತ್ತದೆ ಎಂದರು.
ಈ ಸಂದರ್ಭದಲ್ಲಿ ಬಸವರಾಜ ಇಳಿಗೇರ, ರಮೇಶ ಮೆದಿಕಿನಾಳ, ಯಮನಪ್ಪ ಮುದಬಾಳ,ಅಂಬಪ್ಪ ದೇವರಮನಿ, ಗದ್ದೆಪ್ಪ ಮಾರಲದಿನ್ನಿ ಸೇರಿದಂತೆ ಬುದ್ದಿನ್ನಿ ಎಸ್, ಸಾನಬಾಳ, ಹೂವಿನಭಾವಿ, ಮುದಬಾಳ, ಅಂಕುಶದೊಡ್ಡಿ, ಕಾಟಗಲ್, ವೆಂಕಟಾಪುರ ಮತ್ತು ಮಸ್ಕಿ ಸೀಮಾ ವ್ಯಾಪ್ತಿಯ ಹತ್ತಾರು ಹಳ್ಳಿಗಳ ರೈತರಿದ್ದರು.
ಪೋಟೋ(30ಎಂಎಸ್‌ಕೆ02) ಮಸ್ಕಿ ತಹಸೀಲ್ದಾರ್‌ಗೆ ಬಿಡಾಡಿ ದನಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ರೈತ ಹಿತರಕ್ಷಣಾ ಹೋರಾಟ ಸಮಿತಿಯಿಂದ ಮನವಿ ಪತ್ರ ಸಲ್ಲಿಸಿದರು.

Leave a Reply

Your email address will not be published. Required fields are marked *