ಸಿಂಧನೂರು : ಸಮಾಜ ಸೇವಕರು,ಹಿರಿಯ ಮುತ್ಸದ್ಧಿಗಳು,ಸಂಘಟನಾ ಚತುರರು, ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ “ಶ್ರೀ ಉದಯಕುಮಾರ ಪತ್ತಾರ ಮಸ್ಕಿ” ಅವರನ್ನು ಜಿಲ್ಲಾ ವಿಶ್ವಕರ್ಮ ಸಮಾಜದ ಹಿರಿಯ,ಕಿರಿಯ ಮುಖಂಡರುಗಳು “ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜ (ರಿ).”ಸಂಘಕ್ಕೆ ನೂತನ ಅಧ್ಯಕ್ಷರಾಗಿ ಸರ್ವನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿರುತ್ತಾರೆ.ಶ್ರೀ ಯುತ ಉದಯಕುಮಾರ ಪತ್ತಾರ ಮಸ್ಕಿ ಅವರಿಗೆ ತುಂಬು ಹೃದಯ ಪೂರ್ವಕ ಅಭಿನಂದನೆಗಳು ರಾಯಚೂರು ಜಿಲ್ಲೆಯಾದ್ಯಂತ ಇನ್ನಷ್ಟು ಸಂಘಟನೆಯನ್ನು ಬಲಪಡಿಸುವಂತಾಗಲಿ ಎಂದು ಆಶಿಸುತ್ತೇವೆ.

