ರಾಯಚೂರು ಜನವರಿ 29 (ಕರ್ನಾಟಕ ವಾರ್ತೆ): ಪೇಪರ್ಲೆಸ್ ರಿಜಿಸ್ಟ್ರೇಷನ್ ವ್ಯವಸ್ಥೆಯನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ಉಪ ನೋಂದಣೆ ಕಚೇರಿಯಲ್ಲಿ ಪೇಪರ್ಲೆಸ್ ರಿಜಿಸ್ಟ್ರೇಷನ್ ವ್ಯವಸ್ಥೆಯ ಕುರಿತು ತರಬೇತಿಯನ್ನು ಹಮಿಕೊಳ್ಳಲಾಗಿದ್ದು, ತರಬೇತಿಯ ಸದುಪಯೋಗವನ್ನು ಸಾರ್ವಜನಿಕರು ಪಡೆಯಬಹುದಾಗಿದೆ.
ತರಬೇತಿಯಲ್ಲಿ ಸಂಬಂಧಪಟ್ಟ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ರಾಯಚೂರು ಒನ್, ಗ್ರಾಮ ಒನ್, ಮತ್ತು ಬಾಪೂಜಿ ಸೇವಾ ಕೇಂದ್ರ ವರ್ಗದವರಿಗೆ ತರಬೇತಿಯನ್ನು ಜಿಲ್ಲೆಯ ಉಪನೋಂದಣಾಧಿಕಾರಿಗಳ ಕಚೇರಿಗಳಾದ ಲಿಂಗಸೂಗೂರಿನಲ್ಲಿ ಜನವರಿ 30, ಸಿರವಾರದಲ್ಲಿ ಹಾಗೂ ರಾಯಚೂರಿನಲ್ಲಿ ಜನವರಿ 31ರಂದು ತರಬೇತಿ ನಡೆಯಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *