ನಗರದ ತಾಲೂಕು ಪಂಚಾಯತಿ ಆವರಣದಲ್ಲಿರುವ ಡಾ.ಬಿಆರ್ ಅಂಬೇಡ್ಕರ್ ಅವರ ಮೂರ್ತಿಗೆ ತಾಲೂಕು ಪಂಚಾಯತಿ ಸಿಬ್ಬಂದಿಗಳು ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಅವರು ಮಾಲಾರ್ಪಣೆ ಮಾಡಿ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿ, ಬ್ರಿಟಿಷರ ಆಡಳಿತದಿಂದ ಬೇಷತ್ತ ಸ್ವತಂತ್ರ ಹೋರಾಟಗಾರರು ಬ್ರಿಟಿಷರ ವಿರುದ್ಧ ಮೆಟ್ಟಿನಿಂತು ಈ ದೇಶಕ್ಕೆ ಸ್ವತಂತ್ರ ಬರಲು ಅನೇಕ ಮಹನೀಯರು ಹೋರಾಡಿದ ತ್ಯಾಗವಿದೆ. ಅನೇಕರ ಬಲಿದಾನವಾಗಿದೆ. ಸ್ವತಂತ್ರ ಸಿಕ್ಕೂ ಇಷ್ಟು ವರ್ಷ ಕಳೆದರೂ ಕೂಡ ಜಾತಿ, ಬಡತನ ನಿರ್ಮೂಲನೆ ಆಗಿಲ್ಲ. ಸರ್ವರಿಗೂ ಸರಳ ಸಮಾನತೆ, ವೈಚಾರಿಕತೆ, ಸಿಗಬೇಕಾಗಿದೆ ಈ ನಿಟ್ಟಿನಲ್ಲಿ ಭಾರತ ಇನ್ನಷ್ಟು ಸದೃಢವಾಗಬೇಕಿದೆ ಎಂದರು.
ಈ ವೇಳೆ: ಸಹಾಯಕ ನಿರ್ದೇಶಕರಾದ ಪಂಚಾಯತ ರಾಜ್ ಅಮರಗುಂಡಪ್ಪ, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಸಂಯೋಜಕ ಥಾಮಸ್, ಟಿಎಮ್ಐಎಸ್ ವೀರೇಶ ತಲೇಖಾನ, ಮೆನೇಜರ್ ಅನ್ನಪೂರ್ಣ, ಪ್ರಥಮ ದರ್ಜೆ ಸಹಾಯಕರಾದ ದ್ಯಾಮಣ್ಣ, ಶಶಿಕಲಾ, ಸೇರಿದಂತೆ ತಾಲೂಕು ಪಂಚಾಯತಿ ಸಿಬ್ಬಂದಿಗಳು ಇದ್ದರು.

