ರಾಯಚೂರು ಜನವರಿ 22 (ಕರ್ನಾಟಕ ವಾರ್ತೆ): ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಫೆಬ್ರವರಿ 4ರಿಂದ 9ರವರೆಗೆ ರಾಯಚೂರು ಜಿಲ್ಲೆಯ ನಾಗರೀಕರಿಗೆ ಬಾನಂಗಳದಿಂದ ರಾಯಚೂರು ವೀಕ್ಷಣೆಗೆ ರಾಯಚೂರು ಬೈಸ್ಕಯ್ ಎಂಬ ವಿಶೇಷ ಹೆಲಿಕ್ಯಾಪ್ಟರ್ ರೈಡ್ ಕಾರ್ಯಕ್ರಮವನ್ನು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಹೆಲಿಕ್ಯಾಪ್ಟರ್ ರೈಡ್ ಕಾರ್ಯಕ್ರಮವು ಫೆಬ್ರವರಿ 4ರಿಂದ 9ರವರೆಗೆ ಪ್ರತಿ ದಿನ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ ಮಧ್ಯಾಹ್ನ 12.30 ರಿಂದ ಸಂಜೆ 4.30ರವರೆಗೆ ಇರುತ್ತದೆ. ಪ್ರತಿಯೊಬ್ಬರಿಗೆ 3,500 ರೂ. ಶುಲ್ಕ ಇರುತ್ತದೆ. 2 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿರುತ್ತದೆ.
ಆನ್‌ಲೈನ್ ಟಿಕೇಟ್ ಬುಕ್ಕಿಂಗ್‌ಗೆ ವೆಬ್‌ಸೈಟ್ ವಿಳಾಸ: www.helitaxii.com ಅಥವಾ https://share.google/cEDrwhwrhJdOvBFYK ಮೂಲಕ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಫ್‌ಲೈನ್ ಟಿಕೇಟ್‌ಗಾಗಿ ಮೊಬೈಲ್ ಸಂಖ್ಯೆ: 9482565016, 9448527188, 9611112356, 7676522104, 6362238100ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

