ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು ಸಮಾಜಕ್ಕೆ
ಈ 20 ವರ್ಷಗಳಲ್ಲಿ ಮಾಡಿದ ಸಾಧನೆ ಅಪಾರ ಇವರು ಈ ಭಾಗಕ್ಕಷ್ಟೇ ಅಲ್ಲದೆ, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿರುವ ಸಮಾಜದ ಬಂಧು-ಭಗಿನೀಯರನ್ನ ಪ್ರತಿವರ್ಷವು ಸಂಕ್ರಾಂತಿ ಸಮಯದಲ್ಲಿ ಮಾಡುವ ಕಾರ್ಯಕ್ರಮಕ್ಕೆ ಅವರನ್ನು ಕರೆದು, ಅವರ ಸಂಸ್ಕೃತಿ ನಮಗೆ, ನಮ್ಮ ಸಂಸ್ಕೃತಿ ಅವರಿಗೆ, ತಿಳಿಸುವಂತಹ ಮಹತ್ವದ ಕಾರ್ಯ ಮಾಡುತ್ತಿದ್ದರು ಎಂದು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಹೇಳಿದರು.
ನಗರದ ಕುಷ್ಟಗಿ ರಸ್ತೆಯಲ್ಲಿರುವ ಕನಕದಾಸ ಕಲ್ಯಾಣ ಮಂಟಪದಲ್ಲಿ ಗುರುವಾರ ತಾಲೂಕು ಕುರುಬರ ಸಂಘ, ತಾಲೂಕು ಕನಕ ಗುರುಪೀಠ, ಶ್ರೀಕನಕ ಯುವ ಸೇನೆ, ಶ್ರೀ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ, ಇವರ ಸಹಯೋಗದಲ್ಲಿ ಪರಮಪೂಜ್ಯ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ಕಲ್ಬುರ್ಗಿ ವಿಭಾಗದ ತಿಂಥಣಿ ಬ್ರಿಡ್ಜ್ ಇವರಿಗೆ ‘ನುಡಿ ನಮನ’ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, 1992 ರಲ್ಲಿ ದೊಡ್ಡ ಸಮಾರಂಭದ ಮೂಲಕ ಕನಕ ಗುರುಪೀಠ ರಚನೆ ಮಾಡಲಾಯಿತು. 4ಪೀಠಗಳನ್ನಾಗಿ ಮಾಡಿ, ತಿಂಥಣಿ ಬ್ರಿಡ್ಜ್ ಪೀಠಕ್ಕೆ ಸಿದ್ದರಾಮಾನಂದ ಸ್ವಾಮಿಗಳನ್ನ ಆಯ್ಕೆ ಮಾಡಲಾಯಿತು.
ಅಕ್ಷರ ಜ್ಞಾನದ ಗುರು ಬೇರೆ, ಅರಿವು ಮೂಡಿಸುವ ಗುರು ಬೇರೆ, ಯಾರು ಮಾಡಲಾರದ ಸಾಧನೆ ಮಾಡಿ, ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ. ಅವರ ದಾರಿಯಲ್ಲಿ ನಾವೆಲ್ಲರೂ ನಡೆಯೋಣ ಜ.31 ರಂದು ತಿಂಥಣಿ ಬ್ರಿಡ್ಜ್ ಪೀಠದಲ್ಲಿ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯ ಮಾಡಬೇಕಿದೆ. ಸಮಾಜದ ಬಂಧುಗಳು ಆರ್ಥಿಕವಾಗಿ ಶಕ್ತಿ ತುಂಬಿಸುವ ಸಹಾಯ ಸಹಕಾರ ಮಾಡುವುದರ ಜೊತೆಗೆ ಆ ಕಾರ್ಯಕ್ರಮಕ್ಕೆ ಸಮಾಜದ ಪ್ರತಿಯೊಬ್ಬರು ಭಾಗಿಯಾಗಬೇಕು ಎಂದರು.
ನಂತರ ತುರ್ವಿಹಾಳ ಅಮೋಘ ಸಿದ್ದೇಶ್ವರ ಮಠದ ಚಿದಾನಂದಯ್ಯ ಗುರುವಿನ್ ಅವರು ಮಾತನಾಡಿ,
ಸಾವು ಬರುವವರೆಗೂ ಸಾವನ್ನು ಬಯಸಬಾರದು ಸಾವು ಬಂದಾಗ ಅದಕ್ಕೆ ಹೆದರಬಾರದೆಂಬ ಮಾತನ್ನ ಸಿದ್ದರಾಮಾನಂದ ಸ್ವಾಮಿಗಳು ಕೊನೆ ಗಳಿಗೆಯಲ್ಲಿ ಆರೋಗ್ಯದ ಕಡೆಗೆ ಗಮನ ಹರಸಿ ಎಂದಾಗ ಅವರು ಹೇಳಿದ ಮಾತಿದು, ಅದರಂತೆ ಸಂಕ್ರಾಂತಿ ಹಬ್ಬದಂದೆ ದೈವಲೀನವಾದರು. ಅವರಲ್ಲಿ ದ್ವೇಷವೇ ಇರಲಿಲ್ಲ
ಮಮತೆ, ಕರುಣೆ, ಪ್ರೀತಿ, ತುಂಬಿದ ವ್ಯಕ್ತಿ, ಎಲ್ಲರನ್ನು ಸರಿಸಮವಾಗಿ ಕಾಣುವ ಮನೋಭಾವನೆಯವರು ತಿಂಥಣಿ ಬ್ರಿಡ್ಜ್ ಪುಣ್ಯ ಕ್ಷೇತ್ರವಾಗಬೇಕು. ಅವರ ಸಮಾಧಿ ಬಳಿಯಲ್ಲಿ ಮಂದಿರ ಮಾಡಬೇಕೆನ್ನುವುದು ಭಕ್ತರ ಮಹಾದಾಸೆಯಾಗಿದೆ ಎಂದರು.
ನಂತರ ವೇದಿಕೆ ಮೇಲೆ ಅತಿಥಿಗಳಾಗಿ ಆಗಮಿಸಿದ್ದ ಮಾದಯ್ಯಸ್ವಾಮಿ ಗುರುವಿನ್, ಕೆ.ಕರಿಯಪ್ಪ, ಕೆ.ಭೀಮಣ್ಣ, ಅಮರೇಶಪ್ಪ ಮೈಲಾರ, ನಿರುಪಾದೆಪ್ಪ ಗುಡಿಹಾಳ ವಕೀಲರು, ವಿ.ಬಸವರಾಜ, ಬೀರಪ್ಪ ಶಂಭೋಜಿ, ಡಿ.ಎಚ್.ಕಂಬಳಿ, ಶಂಕರ್ ಗುರಿಕಾರ್, ನಾಗವೇಣಿ ಪಾಟೀಲ್, ಶರಣಪ್ಪ ಕೆ.ಗೋನಾಳ, ಹಾಗೂ ಬಸವರಾಜ ಗೋಡಿಹಾಳ, ಬಸವರಾಜ ಡೋಣಮರಡಿ ಮಸ್ಕಿ, ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ: ಸುಕಾಲಪೇಟೆ ನಂಜುಂಡೇಶ್ವರ ಮಠದ ಸಿದ್ದರಾಮೇಶ ಗುರುವಿನ್, ಸಿದ್ದಪ್ಪ ಪೂಜಾರಿ, ಬೀರಪ್ಪ ಪೂಜಾರಿ, ಹುಚ್ಚಪ್ಪ ಪೂಜಾರಿ, ಭೀಮಣ್ಣ ಸಂಗಟಿ, ರಾಮು ಕೆಎಮ್ಎಸ್, ಫಕೀರಪ್ಪ ತಿಡಿಗೋಳ, ಮಲ್ಲಪ್ಪ ಮೈಲಾರ, ಮಾಳಪ್ಪ ಜವಳಗೇರಾ, ರಾಮಣ್ಣ ಮಾವಿನಮಡಗು, ಶರಣಪ್ಪ ಚಿರತನಾಳ, ರಾಮನಗೌಡ ವಕೀಲರು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿ ನುಡಿ ನಮನ ಸಲ್ಲಿಸಿದರು. ಬಸವರಾಜ ಗೊರೇಬಾಳ ವಂದನಾರ್ಪಣೆ ಮಾಡಿದರು. ವೀರೇಶ ಗೋನವಾರ ನಿರೂಪಿಸಿದರು.

