ಮಸ್ಕಿ: ಜನವರಿ 26 ರಂದು ರಂಗ ಚೇತನಾ ಕಲಾ ತಂಡದಿಂದ ರಮಾಭಾಯಿ ಅಂಬೇಡ್ಕರ್ ನಾಟಕ ಪ್ರದರ್ಶನ ನಡೆಯಲಿದೆ ಎಂದು ದಲಿತ ಕವಿ ಸಿ.ದಾನಪ್ಪ ನಿಲೋಗಲ್ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಸಿ ನಡೆಸಿ ಮಾತನಾಡಿದ ಅವರು, ತಾಲೂಕ ಆಡಳಿತ ಮತ್ತು ತಾಲೂಕ ಪಂಚಾಯತಿ ಹಾಗೂ ಪುರಸಭೆ ಕಾರ್ಯಾಲಯದ ಸಹಯೋಗದಲ್ಲಿ ಜನವರಿ 26 ರಂದು ಸಂಜೆ ೬ ಗಂಟೆಗೆ ಭ್ರಮರಾಂಬ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ರಂಗ ಚೇತನಾ ಕಲಾ ತಂಡದಿಂದ ರಮಾಭಾಯಿ ಅಂಬೇಡ್ಕರ್ ನಾಟಕವನ್ನು ಹಮ್ಮಿಕೊಳ್ಳಲಾಗಿದೆ. ಅದರ ಜತೆಗೆ ಆರ್‌ಸಿಎಫ್ ತಂಡವರಿಂದ ಜನ ಜಾಗೃತಿ ಹಾಡುಗಳನ್ನು ಹಾಡಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೊಡ್ಡಪ್ಪ ಮುರಾರಿ, ಕಾಶೀಂ ಮುರಾರಿ, ಪ್ರಶಾಂತ ದಾನಪ್ಪ, ನಾಗಗರತ್ನ ಕಟ್ಟಿಮನಿ ಇದ್ದರು.
ಮಸ್ಕಿಯಲ್ಲಿ ಜ.26ರಂದು ರಂಗ ಚೇತನಾ ಕಲಾ ತಂಡದಿಂದ ರಮಾಭಾಯಿ ಅಂಬೇಡ್ಕರ್ ನಾಟಕ ಪ್ರದರ್ಶನ ಕುರಿತು ಪತ್ರಿಕಾಗೋಷ್ಠಿ ನಡೆಸಿದರು.

Leave a Reply

Your email address will not be published. Required fields are marked *