ರಾಯಚೂರು ಜನವರಿ 19 (ಕರ್ನಾಟಕ ವಾರ್ತೆ): ಇಲ್ಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆಸಲ್ಪಡುತ್ತಿರುವ ಕ್ರೀಡಾ ಶಾಲೆ/ ನಿಲಯಗಳಿಗೆ 2026-27ನೇ ಸಾಲಿನ ಪ್ರವೇಶಕ್ಕೆ ಜಿಲ್ಲೆಯ ವಿವಿಧ ತಾಲ್ಲೂಕು ಮಟ್ಟಗಳಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಅಭ್ಯರ್ಥಿಗಳು ಭಾಗವಹಿಸಬೇಕೆಂದು ಕೋರಲಾಗಿದೆ.
ಕಿರಿಯರ ವಿಭಾಗದ ಕ್ರೀಡಾ ವಸತಿಶಾಲೆಗಳ ಆಯ್ಕೆಯನ್ನು ಪ್ರಸ್ತುತ 7ನೇ ತರಗತಿ ಅಭ್ಯಾಸ ಮಾಡುತ್ತಿರುವ ಬಾಲಕ/ ಬಾಲಕಿಯರಿಗಾಗಿ ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಫುಟ್‌ಬಾಲ್, ಜಿಮ್ನಾಸ್ಟಿಕ್, ಹಾಕಿ, ಜುಡೋ, ವಾಲಿಬಾಲ್ ಮತ್ತು ಕುಸ್ತಿ ವಿಭಾಗಗಳಲ್ಲಿ ಆಯ್ಕೆಯನ್ನು ನಡೆಸಲಾಗುವುದು.
ಆಯ್ಕೆಯಲ್ಲಿ ಭಾಗವಹಿಸುವವರು ದಿನಾಂಕ: 01-06-2026ರಂದು 14ವರ್ಷದೊಳಗಿರಬೇಕು. ಮತ್ತು 8ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರಬೇಕು. ಮತ್ತು ತಾವು ವ್ಯಾಸಾಂಗ ಮಾಡುತ್ತಿರುವ ಶಾಲಾ ಮುಖ್ಯಸ್ಥರಿಂದ ಜನ್ಮ ದಿನಾಂಕ ಪ್ರಮಾಣಪತ್ರ ಹಾಗೂ ವ್ಯಾಸಂಗ ಮಾಡುತ್ತಿರುವ ತರಗತಿಯ ವಿವರಗಳನ್ನೊಳಗೊಂಡ ದೃಢೀಕರಣ ಪತ್ರವನ್ನು ಆಯ್ಕೆ ದಿನದಂದು ಕಡ್ಡಾಯವಾಗಿ ತರಬೇಕು.
ವೇಳಾಪಟ್ಟಿ: ಜನವರಿ 21ರ ರಾಯಚೂರು ತಾಲ್ಲೂಕು ಮಟ್ಟದ ಆಯ್ಕೆಯು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ರಾಯಚೂರಿನಲ್ಲಿ ನಡೆಯಲಿದೆ. ಆಸಕ್ತರು ಸಂಘಟಿಕರಾದ ಚಂದ್ರಶೇಖರ್ ಅವರ ಮೊಬೈಲ್ ಸಂಖ್ಯೆ: 9886551214ಗೆ ಸಂಪರ್ಕ ಮಾಡಬಹುದಾಗಿದೆ.
ಮಾನ್ವಿ ತಾಲ್ಲೂಕು ಮಟ್ಟದ ಆಯ್ಕೆಯು ತಾಲ್ಲೂಕು ಕ್ರೀಡಾಂಗಣ ಮಾನವಿಯಲ್ಲಿ ನಡೆಯಲಿದೆ. ಆಸಕ್ತರು ಸಂಘಟಿಕರಾದ ರಾಮಚಂದ್ರ ಮೊಬೈಲ್ ಸಂಖ್ಯೆ: 8861487321 ಮೆಹಬೂಬ್: 9611181539 ಅಥವಾ ಮುಕ್ಕಣ್ಣ: 9483042741ಗೆ ಸಂಪರ್ಕ ಮಾಡಬಹುದಾಗಿದೆ.
ಜನವರಿ 22ರಂದು ದೇವದುರ್ಗ ತಾಲ್ಲೂಕು ಮಟ್ಟದ ಆಯ್ಕೆಯು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದೆ. ಆಸಕ್ತರು ಸಂಘಟಿಕರಾದ ರಂಗನಾಥ್ ಮೊಬೈಲ್ ಸಂಖ್ಯೆ: 701945947 ಅಥವಾ ಚನ್ನಪ್ಪ ಮೊಬೈಲ್ ಸಂಖ್ಯೆ: 7338647270ಗೆ ಸಂಪರ್ಕ ಮಾಡಬಹುದಾಗಿದೆ.
ಸಿಂಧನೂರು ತಾಲ್ಲೂಕು ಮಟ್ಟದ ಆಯ್ಕೆಯು ತಾಲ್ಲೂಕು ಕ್ರೀಡಾಂಗಣ ಸಿಂಧನೂರಿನಲ್ಲಿ ನಡೆಯಲಿದೆ. ಆಸಕ್ತರು ಸಂಘಟಿಕರಾದ ರಾಮಚಂದ್ರ ಮೊಬೈಲ್ ಸಂಖ್ಯೆ: 8861487321, ಸೋಮಲಿಂಗಪ್ಪ: 9448418871, ಕಳಸಪ್ಪ: 8496987237ಗೆ ಸಂಪರ್ಕ ಮಾಡಬಹುದಾಗಿದೆ.
ಜನವರಿ 23ರಂದು ಅರಕೇರಾ ತಾಲ್ಲೂಕು ಮಟ್ಟದ ಆಯ್ಕೆಯು ಬಾಲಕರ ಪ್ರೌಢಶಾಲೆ ಆಟದ ಮೈದಾನ ಅರಕೇರಾದಲ್ಲಿ ನಡೆಯಲಿದೆ. ಆಸಕ್ತರು ಸಂಘಟಿಕರಾದ ಸಾಬಣ್ಣ ಮೊಬೈಲ್ ಸಂಖ್ಯೆ: 9731493679ಗೆ ಸಂಪರ್ಕ ಮಾಡಬಹುದಾಗಿದೆ.
ಮಸ್ಕಿ ತಾಲ್ಲೂಕು ಮಟ್ಟದ ಆಯ್ಕೆಯು ಕೆ.ಪಿ.ಎಸ್ ಶಾಲೆ (ಹಳೇ) ಮಸ್ಕಿಯಲ್ಲಿ ನಡೆಯಲಿದೆ. ಆಸಕ್ತರು ಸಂಘಟಿಕರಾದ ರಾಮಚಂದ್ರ ಮೊಬೈಲ್ ಸಂಖ್ಯೆ: 8861487321 ಅಥವಾ ರಾಮಪ್ಪ: 9632963017ಗೆ ಸಂಪರ್ಕ ಮಾಡಬಹುದಾಗಿದೆ.
ಜನವರಿ 24ರಂದು ಸಿರವಾರ ತಾಲ್ಲೂಕು ಮಟ್ಟದ ಆಯ್ಕೆಯು ಸರಕಾರಿ ಹಿರಿಯ ಬಾಲಕೀಯರ ಪ್ರೌಢಶಾಲೆ ಪಿಡ್ಲೂಡಿ ಕ್ಯಾಂಪ್ ಸಿರವಾರದಲ್ಲಿ ನಡೆಯಲಿದೆ. ಆಸಕ್ತರು ಸಂಘಟಿಕರಾದ ಮಹಿಬೂಬ್ ಪಾಷ ಮೊಬೈಲ್ ಸಂಖ್ಯೆ:9980472040ಗೆ ಸಂಪರ್ಕ ಮಾಡಬಹುದಾಗಿದೆ.
ಲಿಂಗಸುಗೂರು ತಾಲ್ಲೂಕು ಮಟ್ಟದ ಆಯ್ಕೆಯು ತಾಲ್ಲೂಕು ಕ್ರೀಡಾಂಗಣ ಲಿಂಗÀಸೂಗೂರಿನಲ್ಲಿ ನಡೆಯಲಿದೆ. ಆಸಕ್ತರು ಸಂಘಟಿಕರಾದ ರಾಮಚಂದ್ರ ಮೊಬೈಲ್ ಸಂಖ್ಯೆ: 8861487321, ಸುನೀಲ್:8971828923, 9731946223ಗೆ ಸಂಪರ್ಕ ಮಾಡಬಹುದಾಗಿದೆ.
ಆಸಕ್ತ ಕ್ರೀಡಾಪಟುಗಳು ಸಂಬAಧಿಸಿದ ತಾಲ್ಲೂಕು ಕೇಂದ್ರಗಳಲ್ಲಿ ಆಯಾ ದಿನಾಂಕಗಳAದು ಬೆಳಿಗ್ಗೆ 10:00 ಗಂಟೆಗೆ ಸಂಘಟಕರಿಗೆ ವರದಿ ಮಾಡಿಕೊಳ್ಳಬೇಕು.
ಹಿರಿಯರ ವಿಭಾಗದ ಕ್ರೀಡಾ ವಸತಿ ಶಾಲೆಗಳ ಆಯ್ಕೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ದಿನಾಂಕ: 01-06-2026 ರಂದು 18 ವರ್ಷದೊಳಗಿದ್ದು, ಪ್ರಥಮ ಪಿ.ಯು.ಸಿ ಪ್ರವೇಶ ಪಡೆಯಲು ಅರ್ಹರಿರಬೇಕು. ಆಯ್ಕೆಯನ್ನು ಪ್ರಸ್ತುತ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕ/ಬಾಲಕಿಯರಿಗಾಗಿ ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಫುಟ್‌ಬಾಲ್, ಜಿಮ್ನಾಸ್ಟಿಕ್, ಹಾಕಿ, ಜುಡೋ, ವಾಲಿಬಾಲ್ ಮತ್ತು ಕುಸ್ತಿ ಸ್ಪರ್ಧೆಗಳ ಆಯ್ಕೆ ನಡೆಸಲಾಗುವುದು.
ಅರ್ಹ ಕ್ರೀಡಾಪಟುಗಳು ನಿಗದಿತ ನಮೂನೆಯ ಅರ್ಜಿಗಳನ್ನು ಈ ಕಚೇರಿಯಿಂದ ಪಡೆದು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯನ್ನು ದಿನಾಂಕ: 27-01-2026 ಕಿರಿಯರ ಮತ್ತು ದಿನಾಂಕ: 28-01-2026 ರಂದು ಹಿರಿಯರ ವಿಭಾಗದಲ್ಲಿ ಚಂದ್ರಶೇಖರ್ ಪಾಟೀಲ್ ಜಿಲ್ಲಾ ಕ್ರೀಡಾಂಗಣ ಕಲಬುರಗಿ ಜಿಲ್ಲೆ ಹಾಗೂ ದಿನಾಂಕ: 30-01-2026ಕಿರಿಯರ ಮತ್ತು ದಿನಾಂಕ: 31-01-2026 ರಂದು ಹಿರಿಯರ ವಿಭಾಗದಲ್ಲಿ ಜಿಲ್ಲಾ ಕ್ರೀಡಾಂಗಣ ಕೊಪ್ಪಳ ಇಲ್ಲಿ ನಡೆಸಲಾಗುವುದು.
ದಿನಾಂಕಗಳAದು 2026-27ನೇ ಸಾಲಿಗೆ ಜಿಲ್ಲಾ ಪಂಚಾಯತ್, ರಾಯಚೂರು ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಯಚೂರು, ಇವರಿಂದ ನಿರ್ವಹಿಸಲ್ಪಡುತ್ತಿರುವ ಜಿಲ್ಲಾ ಕ್ರೀಡಾಶಾಲೆಯಲ್ಲಿ ಫುಟ್‌ಬಾಲ್ ಮತ್ತು ಹಾಕಿ ಕ್ರೀಡೆಯಲ್ಲಿ ವಸತಿ ಸಹಿತ ಉಚಿತ ತರಬೇತಿ ನೀಡಲು ಅವಕಾಶವಿರುತ್ತದೆ. ಆದುದರಿಂದ ರಾಯಚೂರು ಕ್ರೀಡಾಶಾಲೆ/ವಸತಿ ನಿಲಯದ ಪ್ರವೇಶಕ್ಕಾಗಿ 4ನೇ ತರಗತಿಯಲ್ಲಿ ಓದುತ್ತಿರುವ ಕ್ರೀಡಾ ವಿದ್ಯಾರ್ಥಿಗಳ ಆಯ್ಕೆಯನ್ನು ನಡೆಸಲು ಉದ್ದೇಶಿಸಲಾಗಿದೆ.
ತಾಲ್ಲೂಕು ಮಟ್ಟದ ಆಯ್ಕೆಯಲ್ಲಿ ಪಾಲ್ಗೊಳ್ಳುವ ಆಸಕ್ತ ಕ್ರೀಡಾಪಟುಗಳು ಆಯಾ ದಿನಾಂಕಗಳAದು ಬೆಳಿಗ್ಗೆ 10:00 ಗಂಟೆಗೆ ಆಯ್ಕೆ ನಡೆಯುವ ಸ್ಥಳಗಳಲ್ಲಿ ವರದಿಮಾಡಿಕೊಳ್ಳಲು ಸೂಚಿಸಲಾಗಿದೆ. ಆಯ್ಕೆಯಾದ ಕ್ರೀಡಾಪಟುಗಳಿಗೆ 5ನೇ ತರಗತಿಯಿಂದ 10ನೇ ತರಗತಿಯವರೆಗೆ (ಕ್ರೀಡಾ ಕೌಶಲ್ಯ ನೀಡಿದಲ್ಲಿ) ಸರ್ಕಾರದ ವತಿಯಿಂದ ಉಚಿತ ವಸತಿ, ಪೌಷ್ಠಿಕ ಆಹಾರ, ತಜ್ಞ ತರಬೇತುದಾರರಿಂದ ಕ್ರೀಡಾ ತರಬೇತಿ, ಸಮವಸ್ತç ಮುಂತಾದವುಗಳನ್ನು ಒದಗಿಸಲಾಗುವುದು. ಆಯ್ಕೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ವಿಧವಾದ ಭತ್ಯೆಯನ್ನು ನೀಡಲಾಗುವುದಿಲ್ಲ.
ಜಿಲ್ಲಾ ಕ್ರೀಡಾಶಾಲೆಯ ಆಯ್ಕೆಯಲ್ಲಿ ಭಾಗಹಿಸುವ ಬಾಲಕರು ಪ್ರಸಕ್ತ ವರ್ಷ 4ನೇ ತರಗತಿಯಲ್ಲಿ ಓದುತ್ತಿದ್ದು, 01-06-2026ಕ್ಕೆ 11ವರ್ಷ ವಯೋಮಿತಿ ಮೀರಿರಬಾರದು ಮತ್ತು 145 ಸೆ.ಮೀ ಎತ್ತರದಿಂದ ಮೇಲಿರಬೇಕು. ಹಾಗೂ ಆಯಾ ಶಾಲೆಯ ಮುಖ್ಯೋಪಾದ್ಯಾಯರಿಂದ ಜನ್ಮ ದಿನಾಂಕದ ದೃಢೀಕರಣ ಪತ್ರವನ್ನು ಆಯ್ಕೆಯ ಸಮಯದಲ್ಲಿ ಸಲ್ಲಿಸಲು ತಿಳಿಸಲಾಗಿದೆ. ಆಯ್ಕೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಯಾವುದೇ ವಿಧವಾದ ಭತ್ಯೆಯನ್ನು ನೀಡಲಾಗುವುದಿಲ್ಲ.
ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರ ಕಚೇರಿ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ರಾಯಚೂರು ಇಲ್ಲಿಗೆ ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *