ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿ ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಸರ್ವಜ್ಞ , ತಮಿಳುನಾಡಿನಲ್ಲಿ ತಿರುವಳ್ಳವರ್ , ಆಂಧ್ರ ಪ್ರದೇಶದಲ್ಲಿ ಮಹಾಯೋಗಿ ವೇಮನ ರವರು ತಮ್ಮ ಪದ್ಯಗಳ ಮೂಲಕ ಜನರಿಗೆ ತ್ಯಾಗ,ಭೋಗ,ವೈರಾಗ್ಯ ತತ್ವಗಳನ್ನು ಭೋದಿಸಿದ ಮಹಾನಿಯರಾಗಿದ್ದಾರೆ. ಶರಣರು ಕೂಡ ಗುರುಲಿಂಗ ಪಾದೋದಕ,ಜಂಗಮಸೇವೆ, ಕಾಯಕ ತತ್ವಗಳನ್ನು ಭೋದಿಸಿದರೆ ಮಹಾತ್ಮರ ತತ್ವ ಆದರ್ಶಗಳನ್ನು ಪ್ರತಿಯೋಬ್ಬರು ಕೂಡ ಅನುಸರಿಸಿದಾಗ ಮಾತ್ರ ನಾವು ನಡೆಯುವ ಹಾದಿ ಸುಗಮವಾಗುತ್ತದೆ.ಆರಿವು ಹಾಗೂ ಶಿಕ್ಷಣವಿಲ್ಲದೆ ಸಮಾಜದಲ್ಲಿ ಬದಲಾವಣೆಯನ್ನು ತರುವುದಕ್ಕೆ ಸಾಧ್ಯವಾಗುವುದಿಲ್ಲ ಯುವಕರು ಸನ್ಮಾರ್ಗದಲಿ ನಡೆಯುವುದಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ ಇಂದಿನ ಯುವ ಸಮುದಾಯಕ್ಕೆ ಬದುಕಿನ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಅವರು ಜೀವನದಲ್ಲಿ ಸಾಧನೆ ತೋರುವುದಕ್ಕೆ ಸಾಧ್ಯ ಎನ್ನುವುದು ಮಹಾಯೋಗಿ ವೇಮನರ ಜೀವನ ತತ್ವಗಳಿಂದ ತಿಳಿಯುವುದಕ್ಕೆ ಸಾಧ್ಯ ಎಂದು ತಿಳಿಸಿದರು.
ತಾಲೂಕು ಆಡಳಿತದಿಂದ ಮಹಾಯೋಗಿ ವೇಮನ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರಾದ .ತಾ.ಆರೋಗ್ಯಧಿಕಾರಿ ಡಾ.ಶರಣಬಸವರಾಜ, ಜಿಲ್ಲಾ ಮಾಜಿ ಯೋಧರ ಸಂಘದ ಅಧ್ಯಕ್ಷರಾದ ಚನ್ನರೆಡ್ಡಿ, ಬಿ.ವಿ.ಆರ್.ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಪದ್ಮವತಿ, ಪ್ರಗತಿ ಪರ ರೈತರಾದ ಶರಣಪ್ಪ,ಹಿರಿಯ ನ್ಯಾಯವಾದಿಗಳಾದ ಮಲ್ಲಿಕಾರ್ಜುನ ಪಾಟೀಲ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರೇಡ್.2 ತಹಸೀಲ್ದಾರ್ ಅಬ್ದುಲ್ ವಾಹಿದ್, ತಾ. ರೆಡ್ಡಿ ಸಮಾಜದ ಅಧ್ಯಕ್ಷರಾದ ಅಮರೇಗೌಡ ಉಮಳಿಹೊಸೂರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ತಾಲೂಕ ಅಧ್ಯಕ್ಷರಾದ ಅರುಣಚಂದಾ, ತಾಲೂಕ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಹರಿಹರ ಪಾಟೀಲ್, ಕಾರ್ಯಾಧ್ಯಕ್ಷರಾದ ಶ್ರೀಧರಸ್ವಾಮಿ ಕೊಟ್ನೆಕಲ್, ಪ್ರ.ಕಾರ್ಯದರ್ಶಿ ಜಗದೀಶ್ ಓತೂರ್,ಡಾ.ಶರಣಪ್ಪ ಬಲ್ಲಟಗಿ,ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷರಾದ ತಿಮ್ಮಾರೆಡ್ಡಿ ಭೋಗವತಿ, ನಕ್ಕುಂದಿ ಮಲ್ಲನಗೌಡ ವಕೀಲರು, ವೀರನಗೌಡ ಪೋತ್ನಾಳ್ ವಕೀಲರು, ಸಿದ್ಲಿಂಗಪ್ಪ ವಕೀಲರು, ರೇವಣ ಸಿದ್ದಯ್ಯ ಸ್ವಾಮಿ, ಪ್ರದೀಪ್ ಪಾಟೀಲ್, ಶಿವಲಿಂಗಯ್ಯಸ್ವಾಮಿ,ಶಿವುಕುಮಾರ ಗೌಡ ಭೋಗವತಿ,ವಿಶ್ವನಾಥ್ ಪಾಟೀಲ್, ಗುರುಗೌಡ ಕಣ್ಣೂರು,ಜನಾರ್ದನ ಸಾಹುಕಾರ,ಚಂದ್ರಶೇಖರ್ ಶಿವಪೂಜಿ,ರಾಜಶೇಖರ್ ಸ್ವಾಮಿ,ವಿಜಯಕುಮಾರ್ ಮೇಟಿಗೌಡ, ಉಮೇಶಗೌಡ ,ಹೊಯ್ಸಳ ಸ್ವಾಮಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.

Leave a Reply

Your email address will not be published. Required fields are marked *