ತಾಳಿಕೋಟಿ: ಶಿವಯೋಗಿ ವೇಮನರು ಮಹಾನ್ ಸಂತ ಮಾತ್ರ ಆಗಿರಲಿಲ್ಲ ಅವರೊಬ್ಬ ತೆಲುಗಿನ ಶ್ರೇಷ್ಠ ವಚನಕಾರ,ಕವಿ ಕೂಡಾ ಆಗಿದ್ದರು. ಅವರು ರಚಿಸಿದ ನಾಲ್ಕು ಸಾವಿರ ವಚನಗಳು ಕನ್ನಡದಲ್ಲಿ ಭಾಷಾಂತರಗೊಂಡಿವೆ ಇವುಗಳನ್ನು ಶಾಲೆ ಹಾಗೂ ಮನೆಗಳಲ್ಲಿ ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಅಗತ್ಯ ಇದೆ ಎಂದು ತಹಸಿಲ್ದಾರ್ ಡಾ.ವಿನಯಾ ಹೂಗಾರ ಹೇಳಿದರು. ಸೋಮವಾರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕ ಆಡಳಿತ ವತಿಯಿಂದ ಹಮ್ಮಿಕೊಂಡ ಶಿವಯೋಗಿ ವೇಮನರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿನಾಯಕ ಇಂಟರ್ನ್ಯಾಷನಲ್ ಶಾಲೆಯ ಅಧ್ಯಕ್ಷ ಸಂಗಮೇಶ ದೇಸಾಯಿ ಮಾತನಾಡಿ ಮಹಾಪುರುಷರ ಜಯಂತಿಗಳನ್ನು ಆಚರಿಸಿದರೆ ಸಾಲದು ಅವರ ಬದುಕಿನ ಆದರ್ಶಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವ ಅಗತ್ಯ ಇದೆ, ಶಿವಯೋಗಿ ವೇಮನರು ಶ್ರೇಷ್ಠ ಸಮಾಜ ಸುಧಾರಕರಾಗಿದ್ದು ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದರು ಎಂದು ತಿಳಿಸಿದರು. ಸಿ ಆರ್ ಸಿ ರಾಜು ವಿಜಾಪುರ ಪ್ರಸ್ತಾವಿಕವಾಗಿ ಮಾತನಾಡಿದರು. ಶಿರಸ್ತೆದಾರ ಜೆ.ಆರ್.ಜೈನಾಪೂರ ಸ್ವಾಗತಿಸಿದರು. ಕಾರ್ಯಕ್ರಮದ ಪೂರ್ವ ಮಹಾಶಿವಯೋಗಿ ವೇಮನ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ಎಂ ಜಿ ಪಾಟೀಲ, ಸಿದ್ದನಗೌಡ ಪಾಟೀಲ ನಾವದಗಿ, ಪ್ರಭುಗೌಡ ಮದರಕಲ್ಲ,ಎಚ್.ಎಸ್.ಗೂಗಲ್, ಶರಣಗೌಡ ಇಬ್ರಾಹಿಂಪೂರ, ಸಂಗನಗೌಡ ಅಸ್ಕಿ, ಬಿ.ಎನ್.ಹಿಪ್ಪರಗಿ ರವಿಗೌಡ ಪಾಟೀಲ, ಪ್ರವೀಣ ರೆಡ್ಡಿ, ನಿಂಗನಗೌಡ ಬಿರಾದಾರ, ಸಂಗಮೇಶ ಮದರಕಲ್ಲ,ಗುರುನಾಥಗೌಡ ದೊಡ್ಡಮನಿ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *