ಮನೆಯಲ್ಲಿ ಮಕ್ಕಳ ಆರೋಗ್ಯಯುತ ಬೆಳವಣಿಗೆಗಾಗಿ ಹಾಗೂ ಕುಟುಂಬದ ಮಹಿಳೆಯರ ಗೌರವದ ದೃಷ್ಟಿಯಿಂದ ಶೌಚಾಲಯ ಬಳಕೆಯು ಪ್ರತಿಯೊಬ್ಬರ ಆಧ್ಯತೆಯಾದಲ್ಲಿ ಬಯಲು ಶೌಚದಿಂದ ಕಂಡಿಬರುವ ರಕ್ತಹೀನತೆ, ಅಪೌಷ್ಟಿಕತೆ ನಿಯಂತ್ರಿಸಬಹುದು, ಇದರಿಂದ ಆಹಾರ ಸುರಕ್ಷಿತವಾಗಿಟ್ಟುಕೊಳ್ಳಲು, ಕುಡಿಯುವ ನೀರನ್ನು ಸುರಕ್ಷಿತವಾಗಿರಿಸಿಕೊಳ್ಳಲು ಸಾಧ್ಯವಾಗುವುದಲ್ಲದೆ ಸಂಭಾವ್ಯ ವಾಂತಿ-ಭೇದಿ ತಡೆಗಟ್ಟಬಹುದು ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ಶಾಲಾ ಮಕ್ಕಳಿಗೆ ಆರೋಗ್ಯ ಶಿಕ್ಷಣದ ಮೂಲಕ ಮನವಿ ಮಾಡಿದರು.

ರಾಯಚೂರು ನಗರದ ಸಿಯಾಯತಲಾಬ್‌ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಯಕ್ಲಾಸಪೂರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಶೌಚಾಲಯಗಳ ಬಳಕೆಯ ಮಹತ್ವದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಬಯಲು ಶೌಚದಿಂದ ನೊಣಗಳು ಹೆಚ್ಚಾಗುವವು, ಮಕ್ಕಳಿಗೆ ಜಂತುಹುಳು ಕಂಡು ಬರುವುದರಿಂದ ಪದೆ ಪದೆ ಹೊಟ್ಟೆನೋವು, ರಕ್ತಹೀನತೆಯುಂಟಾಗಿ ನಿಶಕ್ತಿ, ಓದಿನಲ್ಲಿ ಆಸಕ್ತಿ ಕಡಿಮೆಯಾಗುವುದು, ಆಟವಾಡಲು ನಿರಾಸಕ್ತಿ, ಓದಿದ ವಿಷಯ ಮನನವಾಗಲು ಅನಾನೂಕೂಲತೆ, ಮಕ್ಕಳ ಕುಂಟಿತ ಬೆಳವಣಿಗೆ, ಮೇಲಿಂದ ಮೇಲೆ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಮದುವೆ ನಂತರವು ಸಹ ಅಪೌಷ್ಟಿಕತೆಯಿಂದ ಕಡಿಮೆ ತೂಕದ ಮಗು ಜನನ, ಸತ್ತು ಹುಟ್ಟುವಿಕೆ, ಹೆರಿಗೆ ಸಮಯದಲ್ಲಿ ತೀವ್ರ ತೊಂದರೆಗಳು ಕಂಡುಬರಬಹುದಾಗಿದೆ. ಈ ದಿಶೆಯಲ್ಲಿ ಮನೆಯಲ್ಲಿ ಪಾಲಕರಿಗೆ ಮನೆಯಲ್ಲಿ ಈ ಕುರಿತು ಮನವರಿಕೆ ಮಾಡಲು ಹಾಗೂ ಮಹಾನಗರ ಪಾಲಿಕೆಯ ಸಲಹೆಗಳನ್ನು ಅನುಸರಿಸಿ ಶೌಚಾಲಯಗಳ ನಿರ್ಮಾಣ ಹಾಗೂ ಬಳಕೆಗೆ ಆಧ್ಯತೆ ನೀಡಲು ವಿನಂತಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ ಕೆ, ಮಾತನಾಡಿ ಊಟದ ಪೂರ್ವ, ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಕೈತೊಳೆಯಲು ರೂಡಿ ಮಾಡಿಕೊಳ್ಳುವಂತೆ ಸೂಚಿಸಿದರು. ಇದೆ ಸಂದರ್ಭದಲ್ಲಿ ಬಾಲ್ಯವಿವಾಹ, ಡೆಂಗ್ಯು, ಕ್ಷಯರೋಗ ಕುರಿತು ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಎಮ್‌ಸಿ ಅಧ್ಯಕ್ಷ ಸಿದ್ದೇಶ್‌ ನಾಯಕ್, ಉಪಾಧ್ಯಕ್ಷ ರಾಜಶೇಖರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್‌ ದಾಸಪ್ಪನವರ, ಮುಖ್ಯ ಗುರುಗಳು ಅಂಜನಯ್ಯ, ಸಹ ಶಿಕ್ಷಕರಾದ ನರಸುಭಾಯಿ, ಪೂರ್ಣಿಮಾ, ಆಂಜನಯ್ಯ, ರವಿಚಂದ್ರ , ಸುನಂದಾ, ಖಜಾಬೀ, ಶಕುಂತಲಾ, ಶರಣಪ್ಪ ಹಾಗೂ ಮುಖಂಡರು, ಶಾಲಾ ಮಕ್ಕಳು ಹಾಜರಿದ್ದರು.

Leave a Reply

Your email address will not be published. Required fields are marked *