ಲಿಂಗಸಗೂರು : ಜ 20
ಪಟ್ಟಣದ 12ನೇ ವಾರ್ಡಿನ ಕೊರವರ ಓಣಿಯಿಂದ, ಗೌಳಿಪುರ ಬಡಾವಣೆವರೆಗೆ ಕೆ.ಕೆ.ಆರ್.ಡಿ.ಬಿ. ಇಲಾಖೆಗೆ ಸರ್ಕಾರದಿಂದ ಡಾಂಬರೀಕರಣ ಕಾಮಗಾರಿಗೆ ಮಂಜೂರಾದ ಹಣವು ಕೆ.ಕೆ.ಆರ್.ಡಿ.ಬಿ. ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಟರ್ ಡೆವೆಲಪ್‌ಮೆಂಟ್ ಲಿಮಿಟೆಡ್ ಇಂಜಿನಿಯರ್ ಹಣಮಂತ ಇವರು ಈ ಕಾಮಗಾರಿಗೆ ಮಂಜೂರಾಗಿ ಬಂದಿರುವ ಹಣವನ್ನು ವರ್ಷಗಟ್ಟಲೇ ಕಳೆದರೂ ಕಾಮಗಾರಿ ನಿರ್ವಹಿಸದೇ ನುಂಗಿ ಹಾಕಿ ಬೇರೆ ಕಾಮಗಾರಿಗೆ ಬಳಕೆ ಮಾಡಿಕೊಂಡಿರುವುದರಿಂದ ದಿನನಿತ್ಯ ಈ ರಸ್ತೆ ಮೇಲೆ ಓಡಾಡುವ ವಾಹನಗಳ ಧೂಳಿನಿಂದ ನಿವಾಸಿಗಳಿಗೆ ಅಸ್ತಮ, ಕೆಮ್ಮು, ದಮ್ಮು ರೋಗಗಳು ಹರಡುತ್ತಿರುವುದರಿಂದ ನಿವಾಸಿಗಳಿಗೆ ತೊಂದರೆ ಯಾಗುತ್ತಿದೆ ಕೂಡಲೆ ಇಂಜಿನಿಯರ್‌ರನ್ನು ಅಮಾನತ್ತುಗೊಳಿಸಬೇಕೆಂದು 12ನೇ ವಾರ್ಡಿನ ನಿವಾಸಿಗಳು ಹಾಗೂ ಸಾರ್ವಜನಿಕರು ಸಹಾಯಕ ಆಯುಕ್ತರ ಮೂಲಕ ಕೆ ಕೆ ಆರ್ ಡಿ ಬಿ ಯ ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಿದರು .
ಇದ್ದ ಡಾಂಬರ್ ರಸ್ತೆಯನ್ನು ತೆರವುಗೊಳಿಸಿ 04 ತಿಂಗಳುಗಳು ಕಳೆದರೂ ಮರಳಿ ಕಾಮಗಾರಿ ಪ್ರಾರಂಭಿಸಿಲ್ಲಾ. ಕಾಮಗಾರಿ ಆರಂಭವಾಗದೆ ಇರುವುದರಿಂದ ಧೂಳು ಹೆಚ್ಚಾಗಿ ಸಾರ್ವಜನಿಕರಿಗೆ ಮನೆಯಲ್ಲಿ ವಾಸಿಸಲಾರದಂತೆ ಆಗಿದೆ. ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲಾ. ಸರ್ಕಾರದಿಂದ ಮಂಜೂರಾದ ಹಣ ಎಲ್ಲಿ ಹೋಯಿತು? ಎಂಬುದು ಬಹಿರಂಗಪಡಿಸಬೇಕು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತಾಲೂಕಿನಲ್ಲಿ ಕೈಗೊಂಡಿರುವ ಪಟ್ಟಣ ಗ್ರಾಮೀಣ ಪ್ರದೇಶಗಳಲ್ಲಿ ಸಿ.ಸಿ. ಡಾಂಬರೀಕರಣ, ಚರಂಡಿ ಸೇರಿದಂತೆ ಅನೇಕ ಕಾಮಗಾರಿಗಳು ಅಂದಾಜು ಪತ್ರಿಕೆಯಂತೆ ಕಾಮಗಾರಿ ಆಗಿರುವುದಿಲ್ಲಾ. ಸಂಪೂರ್ಣ ಕಳಪೆ ಮಟ್ಟದಲ್ಲಿ ನಿರ್ಮಿಸಿ ಸರ್ಕಾರದ ಹಣ ಲೂಟಿ ಮಾಡಿರುವ ಇಲ್ಲಿನ ಇಂಜಿನಿಯರ್‌ಗಳನ್ನು ಅಮಾನತ್ತುಗೊಳಿಸಿ ಆಗಿರುವ ಕಾಮಗಾರಿಗಳ ಸಮಗ್ರ ತನಿಖೆಗಾಗಿ ಸಿ.ಓ.ಡಿ. ಯವರಿಂದ ತನಿಖೆ ಮಾಡಿಸಬೇಕು. 15 ದಿನಗಳೊಳಗಾಗಿ ಇಂಜಿನಿಯರ್‌ರನ್ನು ಅಮಾನತ್ತುಗೊಳಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದೇ ಹೋದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ತಾವುಗಳು ಕೂಡಲೇ ರಾಜೀನಾಮೆ ಕೊಡಬೇಕು. ಇಲ್ಲದೇ ಹೋದಲ್ಲಿ ತಾಲೂಕಿನ ಸಾರ್ವಜನಿಕರೊಂದಿಗೆ ಸತ್ಯಾಗ್ರಹ ಹಾಗೂ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು .
ಈ ಸಂದರ್ಭದಲ್ಲಿ ಬಸವರಾಜ್ ಗೋಸ್ಲೆ , ಅಭಿಷೇಕ್ , ಆನಂದ್ , ದೇವರಾಜ್ , ವೀರೇಶ್ , ಸಿದ್ದು , ರಾಹುಲ್ , ಕೃಷ್ಣ , ಶಂಕರ್ ರೆಡ್ಡಿ , ವಿನೋದ್ , ವೀರೇಶ್ , ಮಾರುತಿ , ಬಸವ , ಅಮೀನ್ ಸೇರಿದಂತೆ ಇತರರು ಇದ್ದರು .

