ಅರಕೇರಾ : ತಾಲೂಕಿನ ಬಿ.ಗಣೇಕಲ್ ಗ್ರಾಮದಲ್ಲಿ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಅವರಾತ್ರಿ ಅಮವಾಸ್ಯೆ ಅಂಗವಾಗಿ ಮಾರುತೇಶ್ವರ ಭಕ್ತ ಮಂಡಳಿ ನೇತೃತ್ವದಲ್ಲಿ ಕಲ್ಲುತುಂಡು ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮ ಕುರಿತು ಹನುಮಂತ್ರಾಯ ಆಕಳಕುಂಪಿ ಕಾಂಗ್ರೆಸ್ ಮುಖಂಡರು ಮಾತನಾಡಿ ಹಿಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬ ರೈತರ ಮನೆಯಲ್ಲಿ ವ್ಯವಸಾಯ ಮಾಡಲು ಎತ್ತುಗಳು ಇರುತ್ತಿದ್ದವು ಆದರೆ ವಾಸ್ತವ್ಯ ಈಗಿನ ಸಂಧರ್ಭದಲ್ಲಿ ರೈತರ ಮನೆಯಲ್ಲಿ ಟ್ರ್ಯಾಕ್ಟರ್ ಗಳು ಇದ್ದಾವೆ, ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಗೆ ರೈತರು ಮಾರು ಹೋಗಿದ್ದಾರೆ. ಇದ್ದರಿಂದ ರೈತರ ಮನೆಯಲ್ಲಿ ಎತ್ತುಗಳು, ಹಸುಗಳ ಸಂಖ್ಯೆ ಕಡಿಮೆಯಾಗಿದ್ದು ಇಂತಹ ಸಂಧರ್ಭದಲ್ಲಿ ಸತತವಾಗಿ ಮೂರನೆ ವರ್ಷ ಕಲ್ಲು ತುಂಡು ಎಳೆಯುವ ಸ್ಪರ್ಧೆ ಮೂಲಕ ಬಿ.ಗಣೇಕಲ್ ಗ್ರಾಮಸ್ಥರು ಎತ್ತು, ದನ ಪ್ರಾಣಿಗಳ ಸಂತತಿ ಉಳಿಸುವ ಮುಖಾಂತರ ಉತ್ತಮ ಸಂದೇಶ ನೀಡುತ್ತಿದ್ದು ಇದೆ ರೀತಿ ನಿಮ್ಮ ಗ್ರಾಮದಲ್ಲಿ ಇನ್ನು ಹೆಚ್ಚಿನ ಗ್ರಾಮೀಣ ಕ್ರೀಡಾಕೂಟಗಳಾದ ಕಲ್ಲುತುಂಡು ಸ್ಪರ್ಧೆ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ಕುಸ್ತಿ, ಭಾರವಾದ ಚಿಲಗಳು ಎತ್ತುವ ಸ್ಪರ್ದೆಗಳು ಮುಂದಿನ ದಿನಗಳಲ್ಲಿ ಹಮ್ಮಿಕೊಂಡು ಹಳ್ಳಿ ಸೊಗಡು ಸಂಪ್ರದಾಯ ಮುಂದುವರೆಸಿ ಎಂದು ಸಲಹೆ ನೀಡಿದರು.

ಈ ಸ್ಪರ್ಧೆಯಲ್ಲಿ ರವಿಗೌಡ ಮಾತ್ಪಳ್ಳಿ ಅವರ ಎತ್ತುಗಳು 2250 ಅಡಿ ಕಲ್ಲುತುಂಡು ಎಳೆಯುವ ಮೂಲಕ ಪ್ರಥಮ ಸ್ಥಾನ ಪಡೆದವು. ರಂಗನಾಥ ಇರಬಗೇರಾ 2198 ಅಡಿ ಎಳೆದು ಎರಡನೆ ಸ್ಥಾನ ಪಡೆದವು. ಬಸನಗೌಡ ಮಾತ್ಪಳ್ಳಿ ಅವರ ಎತ್ತುಗಳು 2103 ಅಡಿ ಎಳೆದು ಮೂರನೆ ಸ್ಥಾನ ಪಡೆದವು. ಮಹಾಂತೇಶ ಇರಬಗೇರಾ ಇವರ ಎತ್ತುಗಳು 1745 ಅಡಿ ಎಳೆಯುವ ಮೂಲಕ ನಾಲ್ಕನೇ ಸ್ಥಾನ ಪಡೆದವು ಹಾಗೂ ಭಗಯ್ಯ ಭೂಮನಗುಂಡಾ ಇವರ ಎತ್ತುಗಳು 1544 ಅಡಿ ಎಳೆಯುವ ಮೂಲಕ ಕೊನೆ ಸ್ಥಾನ ಪಡೆದವು

ಈ ಸಂಧರ್ಭದಲ್ಲಿ ಜಯಗಳಿಸಿದ ಎತ್ತುಗಳ ಮಾಲಕರಿಗೆ ಶರಣಗೌಡ ಮಾಲಿ ಪಾಟೀಲ್, ವಿರೇಶಗೌಡ ಮಾಲಿ ಪಾಟೀಲ್,ಮಹೇಶಗೌಡ ಮಾಲಿ ಪಾಟೀಲ್, ಬಸವರಾಜ ದಳವಾಯಿ ದೊಡ್ಮನೆ,ಮೂರ್ತೆಪ್ಪ ಗೊರ್ಲಿ, ತಂಡದ ಆಯೋಜಕರು ಬಹುಮಾನ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಸಿದ್ದಣ್ಣ ತಾತ ಮುಂಡರಗಿ, ಬಸವರಾಜ ಪೂಜಾರಿ ಅರಕೇರಾ, ಮುದುಕಣ್ಣ ಪೂಜಾರಿ, ನರಸಿಂಹ ಪೂಜಾರಿ, ಮಲ್ಲಯ್ಯ ಪೂಜಾರಿ, ಧರ್ಮಣ್ಣ ಪೂಜಾರಿ, ರವಿಂದ್ರ ಗೊರ್ಲಿ, ಶಿವರಾಜ ಹುಲೆಗುಡ್ಡ , ಚನ್ನಬಸವ ಭೋವಿ, ಶಿವುಕುಮಾರ ಮಾಲಿ ಪಾಟೀಲ್, ಮಲ್ಲಯ್ಯ ದಳವಾಯಿ, ಮಲ್ಲಯ್ಯ ಕುರುಬರು ಹಾಗೂ ತಿರ್ಪುಗಾರರಾಗಿ ಎಚ್.ಎಸ್.ನಾಯಕ, ಮಲ್ಲೇಶ, ಹನುಮಯ್ಯ, ಅಮರೇಶ ಕಾರ್ಯ ನಿರ್ವಹಿಸಿ ಗ್ರಾಮಸ್ಥರು ಮಹಿಳೆಯರು ಸೇರಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *