ಸಿಂಧನೂರಿನ ಆಕ್ಸ್ ಫರ್ಡ್ ಸಮೂಹ ಸಂಸ್ಥೆಯಿಂದ ಕಾರುಣ್ಯಾಶ್ರಮಕ್ಕೆ ಆಹಾರ ವಸ್ತುಗಳ ವಿತರಣೆ ಸಿಂಧನೂರು : ಆಕ್ಸ್ ಫರ್ಡ್ ಸಮೂಹ ಸಂಸ್ಥೆಗಳು ಸಿಂಧನೂರು ಹಾಗೂ ಎನ್.ಸತ್ಯನಾರಾಯಣ ಶ್ರೇಷ್ಠಿ ಸ್ನೇಹ ಬಳಗದ ವತಿಯಿಂದ ಅಕ್ಸ್ ಫರ್ಡ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಎನ್. ನಾರಾಯಣ ಶ್ರೇಷ್ಠಿ ಅವರ ಜನ್ಮ ಸಾರ್ಥಕ ದಿನದ ಅಂಗವಾಗಿ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಅಗತ್ಯವಿರುವ ಆಹಾರ ವಸ್ತುಗಳನ್ನು ವಿತರಿಸಿ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಆಶ್ರಯದಾತರುಗಳಿಗೆ ಆತ್ಮಸ್ಥೈರ್ಯ ತುಂಬಿದರು. ಈ ಕಾರ್ಯಕ್ರಮದಲ್ಲಿ ಎನ್. ಸತ್ಯನಾರಾಯಣ ಶ್ರೇಷ್ಠಿ ಸಂಸ್ಥಾಪಕ ಅಧ್ಯಕ್ಷರು ಆಕ್ಸ್ ಫರ್ಡ್ ಸಮೂಹ ಸಮೂಹ ಸಂಸ್ಥೆಗಳು ಇವರನ್ನು ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಕ್ಷಯ ಆಹಾರ ಜೋಡಿಗೆ ಸೇವಾ ಟ್ರಸ್ಟ್. ಸ್ವಾಮಿ ಚಾರಿಟೇಬಲ್ ಟ್ರಸ್ಟ್ ಕರಡಕಲ್. ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಲಿಂಗಸೂಗೂರು ಇವರುಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ಎನ್. ಸತ್ಯನಾರಾಯಣ ಶ್ರೇಷ್ಠಿ ಮಾತನಾಡಿ ಸಮಾಜದಿಂದ ತಿರಸ್ಕೃತಗೊಂಡವರನ್ನು ಮತ್ತು ತಮಗರಿವಿಲ್ಲದ ಮಾನವ ಜೀವಿಗಳನ್ನು ರಕ್ಷಣೆ ಮಾಡುತ್ತಿರುವ ಕಾರುಣ್ಯ ಆಶ್ರಮದ ಸೇವೆ ನಮ್ಮ ಸಿಂಧನೂರಿನ ಘನತೆ ಗೌರವವನ್ನು ಹೆಚ್ಚಿಸಿದೆ. ಕೆಲವು ವರ್ಷಗಳ ಹಿಂದೆ ಅನಾಥಾಶ್ರಮ ಮತ್ತು ಅದರ ನಿರ್ವಹಣೆ ಮತ್ತು ಅನಾಥಾಶ್ರಮದ ಬದುಕು ಹೇಗಿರುತ್ತದೆ ಎನ್ನುವುದನ್ನು ತೋರಿಸಿ ಕೊಟ್ಟಿರುವ ಕಾರುಣ್ಯ ಆಶ್ರಮವು ಕರುನಾಡಿನ ಕರುಣೆಯ ಕುಟುಂಬವಾಗಿದೆ. ಇಂತಹ ಸತ್ಯ ಪ್ರಾಮಾಣಿಕವಾದಂತಹ ಸೇವೆಯಲ್ಲಿರುವ ಕಾರುಣ್ಯಾಶ್ರಮದ ಸೇವೆಯ ಜೊತೆ ಸದಾವಕಾಲವಿರುತ್ತೇನೆ. ಈ ಆಶ್ರಮ ನಿರ್ವಹಣೆ ಮಾಡುತ್ತಿರುವ ಸುಜಾತ ಚನ್ನಬಸಯ್ಯ ದಂಪತಿಗಳು ಸಮಾಜದಲ್ಲಿನ ಯಾವುದೇ ಟಿಕೆ ಟಿಪ್ಪಣಿಗಳು ಅವಮಾನ ಅಪಪ್ರಚಾರಗಳಿಗೆ ಕಿವಿಗೊಡದೆ ಕಾರುಣ್ಯ ಕುಟುಂಬವನ್ನು ಮುನ್ನಡೆಸಿರಿ. ಬರೀ ಈ ಆಶ್ರಮವು ಅನಾಥರಿಗೆ ಆಶ್ರಯ ತಾಣವಲ್ಲದೆ ಸಮಾಜದಲ್ಲಿ ಅನೇಕ ಅಭಿಯಾನಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಸಂಸ್ಕೃತಿ ಸಂಸ್ಕಾರದ ಪಾಠ ಮಾಡುತ್ತಿದೆ. ಯಾವಾಗಲೂ ನಮ್ಮ ಸ್ನೇಹ ಬಳಗ ನಾವೆಲ್ಲರೂ ಕೂಡ ನಿಮ್ಮೊಂದಿಗಿದ್ದೇವೆ ನಿಮ್ಮ ಈ ಪ್ರೀತಿ ವಿಶ್ವಾಸ ಗೌರವಕ್ಕೆ ನಾವು ಚಿರಋಣಿ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪರಶುರಾಮ ಮಲ್ಲಾಪುರ ಸಂಸ್ಥಾಪಕ ಅಧ್ಯಕ್ಷರು ನೋಬೆಲ್ ಕಾಲೇಜ್ ಸಿಂಧನೂರು. ಸೈಯದ್ ಸೋಹೇಬ್ ಖಾದ್ರಿ.ಡಾ. ವಸೀಮ್. ಬಸವರಾಜ ಮಾಲಿ ಪಾಟೀಲ್. ವಿಜಯಲಕ್ಷ್ಮಿ ಹಿರೇಮಠ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಲಿಂಗಸೂಗೂರು. ಮಂಜುನಾಥ ಬ್ಯಾಗವಾಟ ಲಿಂಗಸೂಗೂರು. ಕುಮಾರ. ಮಹಾಂತೇಶ ಸಮಾಜ ಸೇವಕರು ಲಿಂಗಸೂಗೂರು.ಮಂಜುನಾಥ ಪಾಟೀಲ್ ವಕೀಲರು ಕರಡಕಲ್. ರೇಖಾ ಮಸ್ಕಿ. ಹಾಗೂ ಶ್ರೀಮಠ ಸೇವಾ ಟ್ರಸ್ಟ್ ಸದಸ್ಯರುಗಳಾದ ಡಾ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್. ಸುಜಾತ ಹಿರೇಮಠ. ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ ಮರಿಯಪ್ಪ.ಜ್ಯೋತಿ. ಹಾಗೂ ಆಕ್ಸ್ ಫರ್ಡ್ ಸಮೂಹ ಸಂಸ್ಥೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *