ಆಡಳಿತಾತ್ಮಕ ತರಬೇತಿ ಕಾರ್ಯಾಗಾರಗಳು ಕೇವಲ ನಿಯಮಗಳ ಕಲಿಕೆಯಲ್ಲ, ಅವು ಸ್ಥಿರವಾದ ಆಡಳಿತ ನೀಡಲು ಮತ್ತು ಶಿಕ್ಷಣ ವ್ಯವಸ್ಥೆಯ ವಿವಿಧ ಸ್ತರಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಲು ಸಹಕಾರಿಯಾಗುತ್ತವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಿ.ಎಚ್.ಜಗದೀಶ ಅವರು ತಿಳಿಸಿದರು.ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರಿಗಾಗಿ ಆಯೋಜಿಸಿದ ಒಂದು ದಿನದ ಆಡಳಿತಾತ್ಮಕ ತರಬೇತಿ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಉಪನ್ಯಾಸಕರ ಪರಿಶ್ರಮಕ್ಕೆ ಸೂಕ್ತ ಮಾರ್ಗದರ್ಶನ ನೀಡಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಸಮನ್ವಯತೆಯಿಂದ ಮುನ್ನಡೆಸುವ ಗುರುತರ ಜವಾಬ್ದಾರಿ ಪ್ರಾಚಾರ್ಯರ ಮೇಲಿದೆ. ಪೋಫಿಕರು ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಹೊಂದಿದಾಗ ಮಾತ್ರ ಶೈಕ್ಷಣಿಕ ಗುರಿ ತಲುಪಲು ಸಾಧ್ಯ ಎಂದರು.
ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ನಾಗೋಲಿ ಮಾತನಾಡಿ, ಸಕಲ ಸಿಬ್ಬಂದಿಯ ವಿಶ್ವಾಸ ಗಳಿಸಿ ಕೆಲಸ ಮಾಡಿದರೆ ಇಲಾಖೆ ನಿರೀಕ್ಷಿಸುವಲ್ಲಿ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ ಎಂದು ಹೇಳಿದರು.
ರಾಜ್ಯ ಮಟ್ಟದ ಜಾನಪದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ಕವಿತಾ ಶಿವಪ್ಪ ಕಾಶಿಯಾರ, ರಾಜ್ಯ ಮಟ್ಟದ ಜಂಪ್ರೋಫ್ ಕ್ರೀಡಾಕೂಟದ ಯಶಸ್ವಿ ಆಯೋಜನೆ ಭೀಮಪ್ಪ ಗೊಲ್ಲರ್, ನಿವೃತ್ತ ಪ್ರಾಚಾರ್ಯ ಅನಿಲಕುಮಾರ, ಉತ್ತಮ ಸೇವೆಗಾಗಿ ಎಸ್.ವ್ಹಿ. ಮೇಳಿ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಪ್ರಾಚಾರ್ಯರಾದ ಅನಿಲಕುಮಾರ ಜಿ, ರಾಜಶೇಖರ ಪಾಟೀಲ್, ಶಿವಾನಂದ ಎ.ಆರ್, ಸಂಘದ ಕಾರ್ಯದರ್ಶಿ ಬಸವರಾಜ, ಕೋಶಾಧ್ಯಕ್ಷ ಶಾಂತಪ್ಪ ಟಿ.ಸಿ ಹಾಗೂ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ ಸೇರಿದಂತೆ ಜಿಲ್ಲೆಯ ವಿವಿಧ ಕಾಲೇಜುಗಳ 100ಕ್ಕೂ ಹೆಚ್ಚು ಪ್ರಾಚಾರ್ಯರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *