ತಾಳಿಕೋಟಿ: ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳ ಸಿದ್ಧತೆಗಾಗಿ ಪೂರ್ವಭಾವಿ ಸಭೆ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಲಿದೆ. ಜನೆವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಕುರಿತು ಚರ್ಚಿಸಲು ಪಟ್ಟಣದ ಗಣ್ಯರ ಸಭೆ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಇಂದೇ ಮಧ್ಯಾಹ್ನ 3-00 ಘಂಟೆಗೆ ದಿನಾಂಕ 21-01-2026 ರಂದು ಆಚರಸಲಿರುವ ಅಂಬಿಗರ ಚೌಡಯ್ಯ ಹಾಗೂ ದಿ.25-01-2026ರಂದು ಆಚರಿಸಲಿರುವ ಸವಿತಾ ಮಹರ್ಷಿ ಅವರ ಜಯಂತಿ ಕುರಿತು ಚರ್ಚಿಸಲು ಆಯಾ ಸಮಾಜಗಳ ಪ್ರಮುಖರ ಹಾಗೂ ಗಣ್ಯರ ಸಭೆ ನಡೆಯುವುದು ಸದರಿ ಸಭೆಗಳಲ್ಲಿ ಎಲ್ಲರೂ ಸಕಾಲಕ್ಕೆ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ತಹಸಿಲ್ದಾರ್ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
