ರಾಯಚೂರು ಜನವರಿ 17 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದಿಂದ ಫೆ.01ರಂದು ನಡೆಯುವ ಮಡಿವಾಳ ಮಾಚಿದೇವ ಜಯಂತಿಗೆ ಎಲ್ಲಾ ರೀತಿಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಜಗದೀಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನವರಿ 16ರ ಶುಕ್ರವಾರ ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫೆ.01ರಂದು ನಗರದ ಆರ್.ಟಿ.ಓ ಕಚೇರಿಯ ಹತ್ತಿರದ ಮಡಿವಾಳ ಮಾಚಿದೇವ ವೃತ್ತದಿಂದ ಬೆಳಿಗ್ಗೆ 9ರಿಂದ ಮಡಿವಾಳ ಮಾಚಿದೇವ ಅವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಇರುತ್ತದೆ. ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಗಣ್ಯ ಮಹನಿಯರಿಗೆ ವಿತರಿಸಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಬೇಕು.
ಜಯಂತಿ ಹಿನ್ನೆಲೆಯಲ್ಲಿ ಫೆ.1ರಂದು ನಗರದ ಎಲ್ಲಾ ವೃತ್ತಗಳಲ್ಲಿ ದೀಪಾಲಂಕಾರ ಮಾಡಬೇಕು. ಪ್ರಮುಖ ರಸ್ತೆಗಳನ್ನು ಸ್ವಚ್ಛತೆಗೊಳಿಸಬೇಕು. ಜಿಲ್ಲಾ ರಂಗಮಂದಿರದ ಆವರಣವನ್ನು ಅಲಂಕಾರಗೊಳಿಸಬೇಕು. ಉಪನ್ಯಾಸಕರಿಗೆ ಆಹ್ವಾನ ನೀಡಬೇಕು. ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಯಬೇಕು ಎಂದು ಆಯಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜಿ.ಶಿವಮೂರ್ತಿ, ಆಂಜೀನಯ್ಯ, ಇ.ಚಂದಪ್ಪ, ಜಮುನಾ ಕೇಶವ, ಅಶ್ವಿನಿ ಎಮ್., ಎ.ಚಂದ್ರಶೇಖರ, ನಾಗರಾಜ್, ಹನುಮಂತ, ಶಾಂತಪ್ಪ, ಜಿ.ವೆಂಕಟೇಶ ಮಾಡಿವಾಳ, ಜಿ.ಸೂಗಪ್ಪ, ಎಸ್.ಹನುಮಂತಪ್ಪ, ವಿರೂಪಾಕ್ಷಿ, ಹೆಚ್.ಮುನಿಸ್ವಾಮಿ, ಗೋವಿಂದ್, ಡಿ.ಶಿವರಾಜಕುಮಾರ್ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿ ಮಲ್ಲೇಶ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ದ್ರಾಕ್ಷಿ, ವಿನೋದ್ ಹಾಗೂ ಇನ್ನೀತರರು ಇದ್ದರು.


