ಮಾನ್ವಿ: ಪಟ್ಟಣದ ಟಿಎಪಿಎಂಸಿಎಸ್ ಯಲ್ಲಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಯಚೂರು ಜಿಲ್ಲಾ ಘಟಕದ ಅಧೀನದಲ್ಲಿರುವ ರಾಯಚೂರು ನಗರ ಘಟಕದ ಅಧ್ಯಕ್ಷರಾಗಿ ಈರೇಶ ನಾಯಕ (ರಾಯಚೂರು) ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಜಿಲ್ಲಾ ಅಧ್ಯಕ್ಷರಾದ ಬಿ. ರಾಮಣ್ಣ ನಾಯಕ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ, ನೂತನ ಅಧ್ಯಕ್ಷರು ಸಂಘದ ಎಲ್ಲಾ ತತ್ವಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಿ, ಸಮಾಜದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸುವುದರ ಜೊತೆಗೆ ಸಂಘಟನೆಯ ಬಲವರ್ಧನೆಗೆ ಸಕ್ರಿಯವಾಗಿ ಕೈಜೋಡಿಸಬೇಕೆಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ದೇವರಾಜ್ ನಾಯಕ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾ ಮಾನ್ವಿ, ಆಂಜನೇಯ ನಾಯಕ, ಹನುಮೇಶ ನಾಯಕ, ತಾಯಣ್ಣ ನಾಯಕ, ಹಂಪಯ್ಯ ನಾಯಕ, ಪರುಶುರಾಮ, ಮಹೇಶ ನಾಯಕ, ಜಯ ನಾಯಕ, ಮಂಜುನಾಥ ನಾಯಕ, ಯಲ್ಲಯ್ಯ ನಾಯಕ, ಸಬ್ಜೆಲಿ, ದೇವರಾಜ ನಾಯಕ ಜಾಗೀರ್ ಪನ್ನೂರು ಇನ್ನಿತರರು ಉಪಸ್ಥಿತರಿದ್ದರು.

